ಶೀಘ್ರದಲ್ಲಿ ಅಂಜನಾದ್ರಿಗೆ ರಾಹುಲ್, ಪ್ರಿಯಾಂಕ ಗಾಂಧಿ ಭೇಟಿ: ಸಚಿವ ತಂಗಡಗಿ

By Girish GoudarFirst Published Dec 24, 2023, 8:25 PM IST
Highlights

ಲೋಕಸಭಾ ಚುನಾವಣೆ ಪೂರ್ವದಲ್ಲಿ  ರಾಲುಲ್ ಮತ್ತು ಪ್ರಿಯಾಂಕ ಗಾಂಧಿ ಅವರು ಬರುವಂತೆ ಕೋರಲಾಗಿದೆ, ಇದರ ಬಗ್ಗೆ ಒಪ್ಪಿಗೆ ನೀಡಿದ್ದಾರೆ ಎಂದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ 

ಗಂಗಾವತಿ(ಡಿ.24): ಶೀಘ್ರದಲ್ಲಿ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇಂದು(ಭಾನುವಾರ) ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯಲ್ಲಿ ಹನಮಮಾಲಾ ಧಾರಿಗಳಿಗೆ ಪ್ರಸಾದ ವಿತರಿಸಿದ ನಂತರ ಪರ್ತಕರ್ತರೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ ಅವರು, ಲೋಕಸಭಾ ಚುನಾವಣೆ ಪೂರ್ವದಲ್ಲಿ  ರಾಲುಲ್ ಮತ್ತು ಪ್ರಿಯಾಂಕ ಗಾಂಧಿ ಅವರು ಬರುವಂತೆ ಕೋರಲಾಗಿದೆ, ಇದರ ಬಗ್ಗೆ ಒಪ್ಪಿಗೆ ನೀಡಿದ್ದಾರೆ ಎಂದರು.

ಗಂಗಾವತಿ: ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ, 1 ಲಕ್ಷಕ್ಕೂ ಅಧಿಕ ಭಕ್ತರು ಭಾಗಿ..!

ಅಂಜನಾದ್ರಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕಾಂಗ್ರೆಸ್ ನೇತ್ರತ್ವದ ಸರಕಾರ ಈ ಬಾರಿ ಅದ್ಧೂರಿಯಾಗಿ ಹನುಮಮಾಲಾ ವಿಸರ್ಜನೆಗೆ ಮುತುವರ್ಜಿ ವಹಿಸಿತ್ತು. ಇದಕ್ಕಾಗಿ 40 ಲಕ್ಷ ರು ನೀಡಿದೆ. ಇನ್ನು ಹೆಚ್ಚುವರಿಯಾಗಿ ಇನ್ನು 15 ಲಕ್ಷ ನೀಡಲಾಗುತ್ತದೆ ಎಂದರು.

ಜಿಲ್ಲಾಡಳಿತ ಹನುಮಮಾಲೆ ಕಾರ್ಯಕ್ರಮ ಯಶಸ್ವಿಗೊಳಿಸಿದೆ. ಸಹಸ್ರಾರು ಭಕ್ತರಿಗೆ ಮೂಲಮೂತ ಸೌಕರ್ಯ ಕಲ್ಪಿಸಿದೆ ಎಂದರು. ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಜಿಲ್ಲಾಧಿಕಾರಿ ನಳಿನ್ ಅತೂಲ್ ಇದ್ದರು.

click me!