ದೀಪಾವಳಿ ಹೊಸ ಬಟ್ಟೆಗಾಗಿ ಜೈಲಿನಲ್ಲಿ ರಾಗಿಣಿ, ಸಂಜನಾ ರಂಪಾಟ..!

Kannadaprabha News   | Asianet News
Published : Nov 15, 2020, 07:46 AM ISTUpdated : Nov 15, 2020, 10:10 AM IST
ದೀಪಾವಳಿ ಹೊಸ ಬಟ್ಟೆಗಾಗಿ ಜೈಲಿನಲ್ಲಿ ರಾಗಿಣಿ, ಸಂಜನಾ ರಂಪಾಟ..!

ಸಾರಾಂಶ

ಸಿಹಿ ತಿಂಡಿ ಕೊಡಿ ಎಂದು ರಗಳೆ| ಕೊನೆಗೆ ಜೈಲಿನ ಸಿಹಿ ತಿನ್ನಿಸಿ ಇಬ್ಬರಿಗೂ ಸಮಾಧಾನ| ನಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಹಾಗೂ ಸಿಹಿಯನ್ನು ಕೊಡಿಸಿ’ ಎಂದು ಪಟ್ಟು ಹಿಡಿದು ರಾದ್ಧಾಂತ ಮಾಡಿದ ರಾಗಿಣಿ, ಸಂಜನಾ| ಕೊನೆಗೆ ಜೈಲಿನಲ್ಲಿ ಹಬ್ಬಕ್ಕೆ ಸಿಹಿ ಮಾಡಿಸಲಾಗುತ್ತದೆ ಎಂದು ಹೇಳಿ ಶಾಂತಗೊಳಿಸಿದ ಅಧಿಕಾರಿಗಳು| 

ಬೆಂಗಳೂರು(ನ.15): ಮಾದಕ ವಸ್ತು ಪ್ರಕರಣ ಸಂಬಂಧ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ತಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆಹಾಗೂ ಸಿಹಿ ಕೊಡಿಸುವಂತೆ ರಗಳೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

"

‘ಜೈಲಿನಲ್ಲಿ 50 ದಿನಗಳಿಂದ ಇದ್ದೇವೆ. ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಈಗಲಾದರೂ ಪೋಷಕರನ್ನು ಭೇಟಿಯಾಗಲು ಅವಕಾಶ ಕೊಡಿ’ ಎಂದು ಅಧಿಕಾರಿಗಳಿಗೆ ನಟಿಯರು ವಿನಂತಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಮನವಿಯನ್ನು ನಯವಾಗಿ ತಿರಸ್ಕರಿಸಿದ ಅಧಿಕಾರಿಗಳು, ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಜೈಲಿನಲ್ಲಿ ಹೊರಗಿನವರ ಸಂದರ್ಶನವನ್ನು ರದ್ದುಪಡಿಸಲಾಗಿದೆ ಎಂದಿದ್ದಾರೆ. 

ಡ್ರಗ್ಸ್‌ ಮಾಫಿಯಾ: ಡ್ರಗ್ಗಿಣಿಯರ ಜೊತೆ ನಂಟು, ಮತ್ತೊಬ್ಬ ಕಿಂಗ್‌ಪಿನ್‌ಗಾಗಿ ಶೋಧ

ಈ ಮಾತಿನಿಂದ ಮತ್ತಷ್ಟು ಕ್ರುದ್ಧರಾದ ನಟಿಯರು, ‘ನಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಹಾಗೂ ಸಿಹಿಯನ್ನು ಕೊಡಿಸಿ’ ಎಂದು ಪಟ್ಟು ಹಿಡಿದು ರಾದ್ಧಾಂತ ಮಾಡಿದ್ದಾರೆ. ಕೊನೆಗೆ ಅಧಿಕಾರಿಗಳು, ಜೈಲಿನಲ್ಲಿ ಹಬ್ಬಕ್ಕೆ ಸಿಹಿ ಮಾಡಿಸಲಾಗುತ್ತದೆ ಎಂದು ಶಾಂತಗೊಳಿಸಿದ್ದಾರೆ ಎನ್ನಲಾಗಿದೆ.
 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!