Bengaluru: ಬಡವರ ಪಾಲಿಗೆ ಅಮೃತವಾದ ರಾಧಾಕೃಷ್ಣ ಫುಡ್ ಕ್ಯಾಂಟೀನ್

By Sathish Kumar KHFirst Published Jan 2, 2023, 12:17 PM IST
Highlights

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಹಸಿವು ನೀಗಿಸುವ ಬಡವರ ಪಾಲಿನ ಅಮೃತವಾದ ರಾಧಕೃಷ್ಣ ಫುಡ್ ಕ್ಯಾಂಟೀನ್ ಪ್ರಾರಂಭಗೊಂಡಿದೆ. ಶಾಸಕರಾದ ರವಿಸುಬ್ರಮಣ್ಯರವರು, ಮಾಜಿ ಉಪಮಹಾಪೌರರಾದ ಲಕ್ಷ್ಮೀನಾರಾಯಣ್ ಮತ್ತು ರಾಧಾಕೃಷ್ಣ ಫುಡ್ ಕ್ಯಾಂಟೀನ್ ಮಾಲೀಕರಾದ ಗಿರೀಶ್, ಲೋಕೇಶ್ ರವರು ಮೊಬೈಲ್ ಕ್ಯಾಂಟೀನ್ ಉದ್ಘಾಟಿಸಿದರು.

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು ( ಜ.2): ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಹಸಿವು ನೀಗಿಸುವ ಬಡವರ ಪಾಲಿನ ಅಮೃತವಾದ ರಾಧಕೃಷ್ಣ ಫುಡ್ ಕ್ಯಾಂಟೀನ್ ಪ್ರಾರಂಭಗೊಂಡಿದೆ. ಶಾಸಕರಾದ ರವಿಸುಬ್ರಮಣ್ಯರವರು, ಮಾಜಿ ಉಪಮಹಾಪೌರರಾದ ಲಕ್ಷ್ಮೀನಾರಾಯಣ್ ಮತ್ತು ರಾಧಾಕೃಷ್ಣ ಫುಡ್ ಕ್ಯಾಂಟೀನ್ ಮಾಲೀಕರಾದ ಗಿರೀಶ್, ಲೋಕೇಶ್ ರವರು ಮೊಬೈಲ್ ಕ್ಯಾಂಟೀನ್ ಉದ್ಘಾಟಿಸಿದರು.

ರಾಧಕೃಷ್ಣ ಫುಡ್ ಮೊಬೈಲ್ ಕ್ಯಾಂಟೀನ್ ಬಡವರ ಹಸಿವು ನೀಗಿಸುವ ಮತ್ತು ಸ್ವಾರ್ದಿಷ್ಟ, ಉತ್ತಮ ಗುಣಮಟ್ಟದ ಆಹಾರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬಡವರಿಗೆ ಊಣ ಬಡಿಸಲು ಇಂದಿನಿಂದ ಆರಂಭಿಸಿದೆ. ನಗರ ಪ್ರದೇಶದಲ್ಲಿ ಯಾವುದೇ ಹೋಟೆಲ್ ಗೆ ಹೋದರೆ ತಿಂಡಿ ತಿನ್ನಲು ಅಂದಾಜು 70ರಿಂದ 100ರೂಪಾಯಿ ಬೇಕು ಅದರೆ ರಾಧಕೃಷ್ಣ ಪುಡ್ ಮೊಬೈಲ್ ಕ್ಯಾಂಟೀನ್ 10ರೂಪಾಯಿಗೆ ಹೊಟ್ಟೆ ತುಂಬುವಷ್ಟು ತಿಂಡಿ ನೀಡಲಾಗುತ್ತದೆ.

ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ನೋಡಲ್‌ ಅಧಿಕಾರಿಯ ನೇಮಕ

ಇಂದಿನಿಂದ ಮೂರು ಮೊಬೈಲ್ ಕ್ಯಾಂಟೀನ್ ಗಳನ್ನು ಬಡವರು ಇರುವ ಕಡೆಗಳಲ್ಲಿ ನಮ್ಮ ಮೊಬೈಲ್ ಕ್ಯಾಂಟೀನ್ ನಿಲ್ಲುತ್ತದೆ. ಮುಂಬರುವ ದಿನಗಳಲ್ಲಿ 15ಕ್ಕೂ ಹೆಚ್ಚು ಮೊಬೈಲ್ ಪುಟ್ ಕ್ಯಾಂಟೀನ್ ತೆರೆಯಲಿದ್ದೇವೆ ಅಂತ ಗಿರೀಶ್ ತಿಳಿಸಿದರು. ಇಡ್ಲಿ,ಚಿತ್ರಾನ್ನ, ಪಲಾವ್,ಮೊಸರನ್ನ, ತರಕಾರಿ ಬಾತ್, ಉಪ್ಪಿಟ್ಟು ಕೇಸರಿಬಾತು ಕಾರ ಬಾತು  ನಮ್ಮಲ್ಲಿ ವಿಶೇಷ.ಬಡವರ ಹೊಟ್ಟೆ ಹಸಿವು ನೀಗಿಸಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ.

ನಗರ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದಂತೆ ಮತ್ತು ಬಡವರು ವಾಸಿಸುವ ಪ್ರದೇಶಗಳಲ್ಲಿ  ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ರಾಧಕೃಷ್ಣ ಫುಡ್ ಕ್ಯಾಂಟೀನ್ ವತಿಯಿಂದ 5ಕ್ಕೂ ಹೆಚ್ಚು ಅನಾಥ ಮಕ್ಕಳ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ವೃದ್ದಶ್ರಾಮಕ್ಕೆ ಉಚಿತವಾಗಿ ಪ್ರತಿದಿನ ತಿಂಡಿ ವಿತರಿಸಲಾಗುತ್ತಿದೆ.

click me!