ಶಬರಿಮಲೆಯಲ್ಲಿ‌ ಕಳೆದು ಹೋದ ಪರ್ಸ್ ಮಂಗಳೂರಿನಲ್ಲಿ ಪ್ರತ್ಯಕ್ಷ

By Suvarna NewsFirst Published Jan 18, 2020, 7:38 PM IST
Highlights

ಶಬರಿಮಲೆಯ ಅಯ್ಯಪ್ಪ ತನ್ನ ಭಕ್ತರಿಗೆ ನನಾ ರೀತಿಯ ಪವಾಡಗಳನ್ನು ಸಾಕಷ್ಟು ಬಾರಿ ತೋರಿಸಿದ್ದಾನೆ. ಅಯ್ಯಪ್ಪನ ಸನ್ನಿಧಿಯಲ್ಲಿ ನಡೆಯುವ ಒಂದೊಂದು ಘಟನೆಗಳೂ ಭಕ್ತರನ್ನು ರೋಮಾಂಚನಗೊಳಿಸುತ್ತದೆ.ಇಂತಹ ಅದ್ಬುತವೊಂದು ಮಂಗಳೂರಿನ ಅಯ್ಯಪ್ಪ ಭಕ್ತರೋರ್ವರಿಗೆ ಅನುಭವವಾಗಿದೆ.

ಮಂಗಳೂರು, (ಜ.18): ದೇವರ ಶಕ್ತಿಯೇ ಹಾಗೆ. ವಿಸ್ಮಯಕಾರಿ ವಿಧಾನಗಳ ಮೂಲಕ ತನ್ನ ಶಕ್ತಿಯನ್ನು ತೋರಿಸುತ್ತಾನೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ.
 
ಮಂಗಳೂರಿನ ಕುಂಜತ್ತಬೈಲ್ ನಿವಾಸಿ ದೇವರಾಜ್ ಅಮೀನ್ ಪ್ರತಿ ವರ್ಷ ಶಬರಿಮಲೆ ಯಾತ್ರೆ ಮಾಡುತ್ತಾರೆ. ಅದರಂತೆ ಈ ಬಾರಿಯೂ ಮಕರ ಸಂಕ್ರಾಂತಿಯಂದೂ  ತನ್ನ ಶಿಷ್ಯ ವೃಂದದ ಜೊತೆಗೆ  ಶಬರಿಮಲೆಗೆ ತೆರಳಿದ್ದರು.

ಈ ಬಾರಿ ಶಬರಿಮಲೆ ಯಾತ್ರೆ ಶಾಂತಿಯುತ: 156 ಕೋಟಿ ಆದಾಯ!

ಅಯ್ಯಪ್ಪನ ದರ್ಶನ ಮಾಡುವ ವೇಳೆ ಅವರ 7,500 ರೂಪಾಯಿ ಇದ್ದ ಪರ್ಸ್ ಕಳೆದು ಹೋಗಿತ್ತು. ಭಾರೀ ಜನಸಂದಣಿಯ ನಡುವೆ ತನ್ನಲ್ಲಿದ್ದ ಪರ್ಸ್ ಎಲ್ಲಿ ಹೋಯ್ತು ಎಂದು ದುಃಖಿಸಿದರು. ಪ್ರಸಾದ ತೆಗೆದುಕೊಳ್ಳಲೂ ಹಣವಿಲ್ಲದೆ ರೋಧಿಸಿದರು.

ಅಷ್ಟೇ ಅಲ್ಲದೇ ಸನ್ನಿಧಾನದಲ್ಲಿ ಪರಮ ಪಾವನ ಮೂರ್ತಿಯ ಎದುರು ಕಣ್ಣೀರಿಟ್ಟರು. ಪವಿತ್ರ ಕ್ಷೇತ್ರದಲ್ಲೇ ಹಣ ಕಳೆದುಕೊಂಡಿರೋದ್ರಿಂದ ಇನ್ಮುಂದೆ ಈ ಶಬರಿಮಲೆಗೆ ಬರೋದಿಲ್ಲ ಎಂದು ದೇವರ ಎದುರೇ ಕೋಪ ತೋಡಿಕೊಂಡರು. ಹೀಗೆ ದುಃಖದಿಂದಲೇ ಶಬರಿಮಲೆ ಯಾತ್ರೆ ಮುಗಿಸಿ ಬಂದ ದೇವರಾಜ ಅಮೀನರು ಅಯ್ಯಪ್ಪನಲ್ಲಿ ಮತ್ತೆ ಮತ್ತೆ ಬೇಡಿಕೊಂಡರು. 

ಇಲ್ಲೊಬ್ಬ ಅಯ್ಯಪ್ಪ ಭಕ್ತನ ಸೈಕಲ್ ಯಾತ್ರೆ

ಅಯ್ಯಪ್ಪನ ಬಳಿ ಕಳೆದಿದ್ದು ಮಂಗಳೂರಲ್ಲಿ ಸಿಕ್ತು
ಪವಾಡವೆಂಬಂತೆವೆ ಊರಿಗೆ ಬಂದ ಎರಡೇ ಗಂಟೆಯಲ್ಲಿ ದೇವರಾಜರ ಮೊಬೈಲ್ ಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಮಂಗಳೂರಿನ ಕೊಟ್ಟಾರದ ಅಬ್ಬಕ್ಕನಗರದಿಂದ ಶಬರಿಮಲೆಗೆ ಹೋಗಿದ್ದ ಜಯಪ್ರಕಾಶ್ ಎಂಬುವವರಿಗೆ ದೇವರಾಜ ಅಮೀನ್ ಅವರ ಪರ್ಸ್ ಸನ್ನಿಧಾನದಲ್ಲಿ ಸಿಕ್ಕಿದ್ದು, ಸುರಕ್ಷಿತ ವಾಗಿ ಅದನ್ನು ಊರಿಗೆ ಬಂದು ಒಪ್ಪಿಸಿದ್ದಾರೆ. 

ಲಕ್ಷಾಂತರ ಜನರಿರುವ ಸ್ಥಳದಲ್ಲಿ ಕಳೆದು ಹೋದ ಪರ್ಸ್ ಮರಳಿ ಸಿಕ್ಕಿದ್ರಿಂದ ದೇವರಾಜ ಅಮೀನ್ ತಾನು‌ ನಂಬುವ ಅಯ್ಯಪ್ಪನ ಮಹಿಮೆಗೆ ಶರಣಾದರು.

ಈತರಹನಾದ ವಿಸ್ಮಯಕಾರಿ ವಿಧಾನಗಳ ಮೂಲಕ ದೇವರು ತನ್ನ ಶಕ್ತಿಯನ್ನು ತೋರಿಸುತ್ತಾನೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

click me!