ಸಮಯಕ್ಕೆ ಯಾರು ಗೌರವ ಕೊಡುತ್ತಾರೋ, ಅಂಥÜವರಿಗೆ ಸಮಯವೇ ಗೌರವ ತಂದುಕೊಡುತ್ತದೆ. ಅದಕ್ಕೆ ನಾನೇ ನಿದರ್ಶನ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದರಾದ ಡಾ. ಮಾತಾ ಬಿ. ಮಂಜಮ್ಮ ಜೋಗತಿ ತಿಳಿಸಿದರು.
ಮೈಸೂರು : ಸಮಯಕ್ಕೆ ಯಾರು ಗೌರವ ಕೊಡುತ್ತಾರೋ, ಅಂಥವರಿಗೆ ಸಮಯವೇ ಗೌರವ ತಂದುಕೊಡುತ್ತದೆ. ಅದಕ್ಕೆ ನಾನೇ ನಿದರ್ಶನ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದರಾದ ಡಾ. ಮಾತಾ ಬಿ. ಮಂಜಮ್ಮ ಜೋಗತಿ ತಿಳಿಸಿದರು.
ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದಸಂಸತ್ ಮತ್ತು ಪ್ರತಿಭಾ ವೇದಿಕೆಯ ಸಮಾರೋಪ ಸಮಾರಂಭ, ಪ್ರತಿಭಾ ಪುರಸ್ಕಾರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮದಲ್ಲಿ ಸಮಯಪ್ರಜ್ಞೆ, ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆ ಹೊಂದಿರಬೇಕು. ಅಲ್ಲದೇ ಯಾವುದೇ ಕೆಲಸವನ್ನಾದರೂ ಪ್ರೀತಿಯಿಂದ ಮಾಡಬೇಕು ಎಂದರು.
undefined
ವಿದ್ಯಾರ್ಥಿಗಳು ಮೊಬೈಲನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಬೇಕು. ಮೊಬೈಲ್‌ಗೆ ಶರಣಾಗದೆ ಅದರ ಬದಲು ದಿನಪತ್ರಿಕೆ, ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಹಾಗೂ ಬಸವಣ್ಣ, ಅಕ್ಕಮಹದೇವಿ, ಬುದ್ಧ, ಅಂಬೇಡ್ಕರ್, ಬೈಬಲ್, ಮಹಾಸಾಧಕರ ಆತ್ಮಚರಿತ್ರೆಯನ್ನು ಅಧ್ಯಯನ ಮಾಡಿ ಎಂದು ಅವರು ಸಲಹೆ ನೀಡಿದರು.
ನಾನು ಕಲೆಯನ್ನು ದೇವರೆಂದು ನಂಬಿದ್ದೇನೆ. ಜಾನಪದ ಕಲೆಯಿಂದ ನನಗೆ ಅಪಾರ ಗೌರವ ಮನ್ನಣೆ ದೊರಕಿದೆ. ಕೆಲವು ಕ್ಷೇತ್ರಗಳಿಗೆ ಮಾತ್ರ ಮೀಸಲಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಸೂಲಗಿತ್ತಿ ಹಾಗೂ ನನ್ನಂಥ ತೃತೀಯಲಿಂಗಿಯಾದ ಜಾನಪದ ಕಲಾವಿದೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.
ವೇಷಭೂಷಣಗಳಿಂದ ಕಲಾವಿದರಾಗಲು ಸಾಧ್ಯವಿಲ್ಲ. ವ್ಯಕ್ತಿ ಅಚ್ಚುಕಟ್ಟಾಗಿ ಮಾಡುವ ಪ್ರತಿಯೊಂದು ಕೆಲಸವು ಕಲೆಯೇ. ಹಾಗಾಗಿ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಕಲಾವಿದರೆ. ಪ್ರಶಸ್ತಿ ಪದವಿಗಳಿಂದ ಮನುಷ್ಯ ಪರಿಪೂರ್ಣವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ವೃತ್ತಿ ಕಲಾವಿದರ ಜೊತೆಗೆ ಹವ್ಯಾಸಿ ಕಲಾವಿದರಾಗಿ ಎಂದು ಅವರು ಕಿವಿಮಾತು ಹೇಳಿದರು.
ಜೀವನದಲ್ಲಿ ಯಾರು ಯಾರನ್ನು ಗುರುತಿಸುವುದಿಲ್ಲ. ನಮ್ಮನ್ನು ಗುರುತಿಸಿಕೊಳ್ಳುವ ಕೆಲಸ ನಾವೇ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಹೆದರದೆ ಕೆಲಸ ಮಾಡಿ. ಈ ಸಮಾಜ ಹೇಗಿದ್ದರೂ ಟೀಕಿಸುತ್ತದೆ. ಆದ್ದರಿಂದ ಧೈರ್ಯದಿಂದ ಜೀವನವನ್ನು ಎದುರಿಸಲು ಕಲಿಯಿರಿ. ವ್ಯಕ್ತಿ ಸರಿಯಾಗಿದ್ದರೆ ಎಂತಹ ಸನ್ನಿವೇಶವನ್ನಾದರೂ ಎದುರಿಸಬಹುದು. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು ಮುನ್ನುಗುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಅದಕ್ಕಾಗಿ ತಾಳ್ಮೆಯಿಂದ ವರ್ತಿಸಬೇಕು ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟಾರ್ ಎನ್. ನಮ್ರತಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಮೂಹನ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ದೇಶದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಸಂವಿಧಾನದ ಬಗ್ಗೆ ಅರಿವಿರಬೇಕು. ಉತ್ತಮ ಮಾತುಗಾರಿಕೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ದೇಶಸೇವೆ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಅಂತಿಮ ಬಿಎ ವಿದ್ಯಾರ್ಥಿನಿ ಹಾಗೂ 2023 ವರ್ಷದ ವಿದ್ಯಾರ್ಥಿ ಸಂಸದೆ ಸೃಷ್ಟಿಆರ್. ಜೋಯ್‌್ಸ ಅವರನ್ನು ಸನ್ಮಾನಿಸಲಾಯಿತು.
ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷಿ ್ಮೕ ಮುರಳೀಧರ್, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆರ್. ರಮೇಶ್, ಪ್ರಾಂಶುಪಾಲ ಡಾ.ಬಿ.ಆರ್. ಜಯಕುಮಾರಿ, ಪ್ರತಿಭಾ ವೇದಿಕೆಯ ಸಂಚಾಲಕ ಎಂ. ನಾಗೇಶ, ವಿದ್ಯಾರ್ಥಿ ಸಂಸತ್‌ನ ಸಂಚಾಲಕಿ ಡಾ.ಎಂ.ಆರ್. ಇಂದ್ರಾಣಿ, ಡಾ.ಎಚ್.ಆರ್. ತಿಮ್ಮೇಗೌಡ, ಎಂ.ಎನ್. ವೆಂಕಟಲಕ್ಷ್ಮಿ ಮೊದಲಾದವರು ಇದ್ದರು.