ರೈತ ಈ ದೇಶದ ಬೆನ್ನೆಲುಬು. ರೈತನ ಆರ್ಥಿಕ ಸದೃಢತೆಗಾಗಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಶಾಸಕ ಬಿ. ಸುರೇಶ… ಗೌಡ ತಿಳಿಸಿದರು.
ತುಮಕೂರು : ರೈತ ಈ ದೇಶದ ಬೆನ್ನೆಲುಬು. ರೈತನ ಆರ್ಥಿಕ ಸದೃಢತೆಗಾಗಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೃಷಿ ಸಮ್ಮಾನ ನಿಧಿ ಯೋಜನೆಯಡಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಶಾಸಕ ಬಿ. ಸುರೇಶ… ಗೌಡ ತಿಳಿಸಿದರು.
ಅವರು ಹೆಬ್ಬೂರು ಗ್ರಾಮದಲ್ಲಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಮಕೂರು ತಾಲೂಕು ವ್ಯಾಪ್ತಿಯಲ್ಲಿ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಗೆ 33440 ಜನ ರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 26988 ರೈತರು ಇಕೆವೈಸಿ ಅಡಿ ನೋಂದಣಿ ಮಾಡಿಸಿಕೊಂಡಿದ್ದು ಇಷ್ಟುರೈತರಿಗೆ ಇಂದು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ ಆಗಿದೆ. ಉಳಿಕೆ ಇರುವಂತ 6452 ರೈತರು ಕೂಡಲೇ ಇಕೆವೈಸಿ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಸುರೇಶಗೌಡ ತಿಳಿಸಿದರು.
ಇಂದು 14ನೇ ಕೃಷಿ ಸಮ್ಮಾನ ನಿಧಿ ಹಣ ಬಿಡುಗಡೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಈ ಹಣವನ್ನು ಬಳಕೆ ಮಾಡುವಂತೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯೋಜನೆಯಲ್ಲಿ ಕೃಷಿ ಕೂಡ ಒಂದಾಗಿದ್ದು ಕೃಷಿ ಅವಲಂಬಿತ ರೈತನ ಬದುಕು ಹಸನಾಗಬೇಕು ಎಂಬುದು ನಮ್ಮ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ. ರೈತನ ಬದುಕು ಉತ್ತಮವನ್ನಾಗಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈತ ಬಳಸುವಂತಹ ರಸಗೊಬ್ಬರಗಳ ಮೇಲೆ ರೈತನಿಗೆ ಹೊರೆಯಾಗದಿರಲಿ ಎಂದು ಗೊಬ್ಬರಕ್ಕಾಗಿ 2 ಲಕ್ಷ ಕೋಟಿ ಸಹಾಯಧನವನ್ನು ನಮ್ಮ ಕೇಂದ್ರದ ಬಿಜೆಪಿ ಸರ್ಕಾರ ನೀಡಿದೆ ಎಂದರು.
ಈ ಪೈಕಿ ಒಂದೂವರೆ ಲಕ್ಷ ಕೋಟಿ ಸಹಾಯಧನವನ್ನು ಯೂರಿಯಾಗೆ ಸಹಾಯಧನವನ್ನು ನೀಡಲಾಗಿದೆ. ಇಂದು ದೇಶದಾದ್ಯಂತ ಒಂದು ಲಕ್ಷ ಇಪ್ಪತೈದು ಸಾವಿರ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ಉಪಾಧ್ಯಕ್ಷರಾದ ಬಾಬು, ತಾಲೂಕು ರೈತ ಸಂಘದ ಅಧ್ಯಕ್ಷರಾದ ಚಿಕ್ಕ ಬೋರೇಗೌಡ ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಶಿವಕುಮಾರ್, ಬಿಜೆಪಿ ಅಧ್ಯಕ್ಷ ಶಂಕರಣ್ಣ, ಮುಖಂಡರಾದ ತಿಮ್ಮೇಗೌಡ. ವೈಟಿ ನಾಗರಾಜ… ಹಾಗೂ ಮತ್ತಿತರರು ಇದ್ದರು. ಹೆಬ್ಬೂರಿನ ಕೃಷಿ ಅಧಿಕಾರಿ ಸ್ವಾಗತಿಸಿ ವಂದಿಸಿದರು.