ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಮತ್ತೊಂದು ಗಡುವು!

By Kannadaprabha NewsFirst Published Nov 17, 2019, 7:50 AM IST
Highlights

ಸಾಮಾಜಿಕ ಜಾಲತಾಣಗಳಲ್ಲಿ ಐತಿಹಾಸಕ ತಾಣವೆಂಬ ಕುಖ್ಯಾತಿಗೆ ಒಳಗಾಗಿ ಸಾಕಷ್ಟುಟ್ರೋಲ್‌ ಆಗಿರುವ ಮಂಗಳೂರಿನ ಪಂಪ್‌ವೆಲ್‌ ಮೇಲ್ಸೇತುವೆ ಉದ್ಘಾಟನೆಗೆ ಮತ್ತೊಂದು ಗಡುವು ದೊರಕಿದೆ! ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಳಿಕ ಸುದ್ದಿಗಾರರಲ್ಲಿ ಮಾತನಾಡಿ, ಈ ಹೊಸ ಗಡುವು ಹೇಳಿದ್ದಾರೆ.

ಮಂಗಳೂರು(ನ.17): ಸಾಮಾಜಿಕ ಜಾಲತಾಣಗಳಲ್ಲಿ ಐತಿಹಾಸಕ ತಾಣವೆಂಬ ಕುಖ್ಯಾತಿಗೆ ಒಳಗಾಗಿ ಸಾಕಷ್ಟುಟ್ರೋಲ್‌ ಆಗಿರುವ ಮಂಗಳೂರಿನ ಪಂಪ್‌ವೆಲ್‌ ಮೇಲ್ಸೇತುವೆ ಉದ್ಘಾಟನೆಗೆ ಮತ್ತೊಂದು ಗಡುವು ದೊರಕಿದೆ!

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಳಿಕ ಸುದ್ದಿಗಾರರಲ್ಲಿ ಮಾತನಾಡಿ, ಈ ಹೊಸ ಗಡುವು ಹೇಳಿದ್ದಾರೆ.

ಮಂಗಳೂರು: ಪಂಪ್‌ವೆಲ್‌ನಲ್ಲೇ ನಿರ್ಮಾಣವಾಗಲಿದೆ ಸರ್ವಿಸ್‌ ಬಸ್‌ ನಿಲ್ದಾಣ..!

2019ರ ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರ ನವಯುಗ್‌ ಸಂಸ್ಥೆ ತಿಳಿಸಿದೆ. ಹಾಗಾಗಿ ಜನವರಿ ಮೊದಲ ವಾರದಲ್ಲಿ ಪಂಪ್‌ವೆಲ್‌ ಮೇಲ್ಸೇತುವೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದಿದ್ದಾರೆ.

ಈಗಾಗಲೇ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೇ. 95ರಷ್ಟುಮುಗಿದು ವಾಹನ ಸಂಚಾರಕ್ಕೆ ಯೋಗ್ಯ ಆಗಿದೆ. ಇದರ ನಡುವಿನ ಮಂಗಳೂರು ಲೋಕಸಭಾ ವಿಭಾಗಕ್ಕೊಳಪಟ್ಟತೊಕ್ಕೊಟ್ಟು ಮತ್ತು ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಕಾನೂನುನಾತ್ಮಕ, ಆಡಳಿತಾತ್ಮಕ ಹಾಗೂ ವ್ಯವಹಾರಿಕ ಸಮಸ್ಯೆಯಿಂದ ನಿಧಾನಗತಿಯಲ್ಲಿ ಸಾಗಿತ್ತು. ಕಳೆದ ಬಾರಿ ಒತ್ತಡ ಹೇರಿ ತೊಕ್ಕೊಟ್ಟು ಕಾಮಗಾರಿ ಮುಕ್ತಾಯಗೊಳಿಸಲಾಗಿದೆ. ಕಳೆದ ಜನವರಿಯಲ್ಲಿ ಎನ್‌ಎಚ್‌ಎಐ ಕಾರ್ಯದರ್ಶಿ ಭೇಟಿ ನೀಡಿದ್ದ ವೇಳೆ ಗುತ್ತಿಗೆ ವಹಿಸಿದ ಸಂಸ್ಥೆಯವರು ಅನುದಾನದ ಕೊರತೆ ಬಗ್ಗೆ ತಿಳಿಸಿದ್ದರು.

ಪಕ್ಷೇತರರು ಸ್ಪರ್ಧಿಸಿರುವಲ್ಲಿ ಕಾಂಗ್ರೆಸ್‌ಗೆ ಸೋಲಿನ ಬುತ್ತಿ!

ಆ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಬ್ಯಾಂಕರ್‌ ಜೊತೆ ಮಾತನಾಡಿ ಸಾಲ ಹಾಗೂ ಸರ್ಕಾರದ ಕಡೆಯಿಂದ ಹೆಚ್ಚುವರಿ ಕೆಲಸಕ್ಕೆ ಅನುದಾನ ಒದಗಿಸಲಾಗಿತ್ತು. ಇದೇ ವೇಳೆ ಇಂಡಿಯಾನ ಆಸ್ಪತ್ರೆಯಿಂದ ಫಾದರ್‌ ಮುಲ್ಲರ್‌ ಸಭಾಂಗಣಕ್ಕೆ ಹೋಗುವ ಬಳಿ ಅಂಡರ್‌ ಪಾಸ್‌ ಬೇಡಿಕೆಯ ಮೇರೆಗೆ ಕಳೆದ ವರ್ಷ ಅನುಮತಿ ದೊರಕಿಸಿ, ಅದನ್ನು ಮಾಡುವ ಅನಿವಾರ್ಯತೆ ಎದುರಾಯಿತು. ಅದೀಗ ಈ ಕಾಮಗಾರಿ ಪೂರ್ಣಗೊಂಡಿದೆ. ಹಾಗಾಗಿ ಕಾಮಗಾರಿ ವೇಗಪಡೆದು ಈ ವರ್ಷ ಮುಗಿಸಬೇಕು ಎಂದು ಒತ್ತಡ ಹೇರಲಾಗಿದೆ.

ಈಗಾಗಲೇ ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರ ಜೊತೆಗೆ ಮೂರು ಬಾರಿ ಸಭೆ ನಡೆಸಿದ್ದಾರೆ. ಮಳೆಯ ಕಾರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಇದೀಗ ಮತ್ತೆ ವೇಗ ಪಡೆದಿದೆ. ಶನಿವಾರ ಕೂಡ ನಾನು ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದು ಸಂಸದ ನಳಿನ್‌ ಕುಮಾರ್‌ ತಿಳಿಸಿದ್ದಾರೆ.

ಹೊಟೇಲ್‌ ವ್ಯವಹಾರದಲ್ಲಿ ವಂಚನೆ: ಮಂಗಳೂರಿಗೆ ಬಂದ ಮುಂಬೈ ಪೊಲೀಸರು

ಈ ಸಂದರ್ಭಶಾಸಕ ವೇದವ್ಯಾಸ ಕಾಮತ್‌, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶು ಮೋಹನ್‌, ನವಯುಗ ಕಂಪನಿ ಅಧಿಕಾರಿ ಭಾನುಪ್ರಕಾಶ್‌, ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌, ಸಂಚಾರಿ ಎಸಿಪಿ ಮಂಜುನಾಥ ಶೆಟ್ಟಿ, ನಿಯೋಜಿತ ಪಾಲಿಕೆ ಸದಸ್ಯರಾದ ಸುಧೀರ್‌ ಶೆಟ್ಟಿಕಣ್ಣೂರು, ಸಂದೀಪ್‌ ಗರೋಡಿ, ಮಾಜಿ ಸದಸ್ಯೆ ಆಶಾ ಡಿಸಿಲ್ವ, ವಿಜಯ ಕುಮಾರ್‌ ಶೆಟ್ಟಿಇದ್ದರು.

ಸಂಪರ್ಕ ರಸ್ತೆಗೆ ಡಾಂಬರೀಕರಣ

ಪಂಪ್‌ವಲ್‌ ಮೇಲ್ಸೇತುವೆಯ ಇಕ್ಕೆಲಗಳ ರಸ್ತೆಗಳ ಡಾಂಬರು ಕಿತ್ತು ಹೋಗಿ ವಾಹನ ಸಂಚಾರ ದುಸ್ತರವಾಗಿರುವುದನ್ನು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಶಾಸಕ ವೇದವ್ಯಾಸ ಕಾಮತ್‌ ವೀಕ್ಷಿಸಿದ್ದಾರೆ.

ಆ ರಸ್ತೆಯುದ್ದಕ್ಕೂ ಇತರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗೆ ನಡೆದುಕೊಂಡು ಹೋದ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಬುಧವಾರದಿಂದ , ಸಂಪರ್ಕ ರಸ್ತೆಯ ಡಾಂಬರೀಕರಣ ನಡೆಸುವಂತೆ ತಾಕೀತು ಮಾಡಿದ್ದಾರೆ.

ಮಂಗಳೂರು ಪಂಪ್‌ವೆಲ್‌ ಮೇಲ್ಸೇತುವೆ ಡಿಸೆಂಬರ್‌ಗೆ ಪೂರ್ಣ..?

ಕಾಮಗಾರಿ ವೇಳೆ ಇಕ್ಕೆಲಗಳ ರಸ್ತೆಗಳನ್ನು ಏಕಕಾಲದಲ್ಲಿ ಬಂದ್‌ ಮಾಡದೆ ಒಂದು ರಸ್ತೆಗೆ ಡಾಂಬರೀಕರಣ ನಡೆಸಿ, ಮತ್ತೆ ಇನ್ನೊಂದು ರಸ್ತೆಗೆ ಡಾಂಬರೀಕರಣ ಮಾಡುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್‌ ಸೂಚಿಸಿದ್ದಾರೆ.

ಮೇಲ್ಸೇತುವೆಯ ಇಕ್ಕೆಲಗಳೂ ಅಗಲ

ಮೇಲ್ಸೇತುವೆಯ ಇಕ್ಕೆಲಗಳೂ ತಲಾ 20 ಮೀಟರ್‌ ಅಳತೆಯಲ್ಲಿ ಅಗಲಗೊಳ್ಳಲಿದೆ. ಪ್ರಸಕ್ತ ಮೇಲ್ಸೇತುವೆಯ ಸಂಪರ್ಕ ರಸ್ತೆಯ ಒಂದು ಪಾಶ್ರ್ವದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಇಕ್ಕೆಲಗಳಲ್ಲಿ ಸಂಪರ್ಕ ರಸ್ತೆಯನ್ನು ವಿಸ್ತರಿಸುವ ಕಾರ್ಯ ನಡೆಯಲಿದೆ. ಈ ರಸ್ತೆಯನ್ನು ಕೇವಲ ಸಂಪರ್ಕ ರಸ್ತೆಯಾಗಿ ಪರಿಗಣಿಸದೆ, ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ದ್ವಿಪಥವಾಗಿ ಅಗಲಗೊಳಿಸಬೇಕು ಎಂದು ಪಾಲಿಕೆಯ ತಾಂತ್ರಿಕ ನಿರ್ದೇಶಕ ಧರ್ಮರಾಜ್‌ ಸಲಹೆ ನೀಡಿದರು. ಸದ್ಯ ಮೇಲ್ಸೇತುವೆ ಕಾಮಗಾರಿ ಮುಗಿದ ಬಳಿಕ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

click me!