ಒಂದು ಕಡೆ ನಿಯಮ ಬಾಹಿರ ಟೋಲ್ ನಿರ್ಮಾಣಕ್ಕೆ ಜನಾಕ್ರೋಶ ವ್ಯಕ್ತವಾಗ್ತಿರೋದು ಒಂದು ಕಡೆಯಾದ್ರೇ, ಸರ್ಕಾರ ಎಲ್ಲೋ ಒಂದು ಕಡೆ ಗ್ಯಾರಂಟಿ ಸರಿದೂಗಿಸಲು ಟೋಲ್ ಹಾಕುವ ಮೂಲಕ ಜನರ ಹಣ ವಸೂಲಿ ಮಾಡ್ತಿದ್ದಾರೆಯೇ ಅನ್ನೋ ಅನುಮಾನ ದಟ್ಟವಾಗಿದೆ..
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ಡಿ.07): ಅದು ದಶಕದ ಹಿಂದೆ ನಿರ್ಮಾಣ ಮಾಡಿದ ರಸ್ತೆ.. ಈವರೆಗೂ ಆ ರಸ್ತೆಯ ಮೇಲೆ ಜನರು ಸರಾಗವಾಗಿ ಓಡಾಡಿದ್ದಾರೆ. ಆದರೆ ಕಳೆದೊಂದು ವಾರದ ಹಿಂದೆ ದಿಡೀರನೇ ಟೋಲ್ ಗೇಟ್ ಒಂದನ್ನು ನಿರ್ಮಾಣ ಹಣ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯರಿಗೂ ವಿನಾಯಿತಿ ನೀಡದೇ ವಸೂಲಿ ಮಾಡ್ತಿರೋ ಹಿನ್ನೆಲೆ ಗ್ಯಾರಂಟಿ ಸರಿದೂಗಿಸಲು ಸರ್ಕಾರವೇ ನೇರವಾಗಿ ಹಣ ವಸೂಲಿ ದಂಧೆಗಿಳಿಯೇ ಎನ್ನುವ ಅನುಮಾನ ಕಾಡುತ್ತಿದೆ. ಅಷ್ಟಕ್ಕೂ ಟೋಲ್ ನಿರ್ಮಾಣ ಹಿಂದಿನ ರಹ್ಯವೇನು ಅಂತೀರಾ ಈ ಸ್ಟೋರಿ ನೋಡಿ..
ರಾತ್ರೋ ರಾತ್ರಿ ನಿರ್ಮಾಣವಾದ ಟೋಲ್ ಗೇಟ್, ಸಾರ್ವಜನಿಕರ ಆಕ್ರೋಶ
ಗ್ಯಾರಂಟಿ ಹಣವನ್ನು ಸರಿದೂಗಿಸಲು ನಿಯಮ ಬಾಹಿರವಾಗಿ ಟೋಲ್ ನಿರ್ಮಾಣ ಮಾಡಿತೇ ಸರ್ಕಾರ..? ಸ್ಥಳೀಯರಿಗೂ ವಿನಾಯಿತಿ ನೀಡದೆ ಹಣ ವಸೂಲಿ ಮಾಡುತ್ತಿರೋ ಹಿನ್ನೆಲೆ ಸಾರ್ವಜನಿಕರ ಆಕ್ರೋಶ,.. ಹೌದು, ಇದು ಬಳ್ಳಾರಿಯಿಂದ ಆಂಧ್ರ ಗಡಿಗೆ ತೆರಳುವ ಮತ್ತು ಹೊಸ ಏರ್ಪೋರ್ಟ್ ಗೆ ಹೋಗುವ ಚತುಷ್ಪಥ ರಸ್ತೆ… ಹನ್ನೆರಡು ವರ್ಷಗಳ ಹಿಂದೆ ಏರ್ಪೋರ್ಟ್ ನಿರ್ಮಾಣ ಮಾಡುವ ಹಿನ್ನೆಲೆ ಬಳ್ಳಾರಿಯಿಂದ ಮೋಕಾ ಗ್ರಾಮದವರೆಗೂ ಇರೋ ಇಪ್ಪತ್ತು ಕಿ.ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಜನಾರ್ದನ ರೆಡ್ಡಿ ಕಾಲದಲ್ಲಿ ನಿರ್ಮಾಣ ಮಾಡಿದ್ರು. ಕಾರಣಾಂತರದಿಂದ ಏರ್ಪೋರ್ಟ್ ವಿಳಂಬವಾದ್ರೂ ಈ ರಸ್ತೆಯ ಮೇಲೆ ಎಂದಿನಂತೆ ಜನರ ಓಡಾಟ ಇತ್ತು. ಆದರೆ ಇದೀಗ ಈ ರಸ್ತೆ ಮಾರ್ಗದಲ್ಲೊಂದು ಟೋಲ್ ನಿರ್ಮಾಣ ಮಾಡಲಾಗಿದೆ ಕಳೆದೊಂದು ವಾರದಿಂದ ಹಣವನ್ನು ವಸೂಲಿ ಮಾಡಲಾಗುತ್ತಿದೆ. ನಿಯಮಗಳ ಪ್ರಕಾರ 60 ಕಿ.ಮೀ. ರಸ್ತೆಗೆ ಟೋಲ್ ಹಾಕಬೇಕು. ಆದರೆ ಬಳ್ಳಾರಿಯಿಂದ ಮೂವತ್ತು ಕಿ.ಮೀ. ಈ ರಸ್ತೆ ಮೂಲಕ ತೆರಳಿದ್ರೇ, ಆಂಧ್ರ ತಲುಪುತ್ತೆವೆ. ಅಲ್ಲಿಗೆ ರಾಜ್ಯ ಹೆದ್ದಾರಿ ಮುಗಿಯುತ್ತಿದೆ. ಹೀಗಿದ್ರೂ ಇಲ್ಲಿ ಟೋಲ್ ಯಾಕೆ ನಿರ್ಮಾಣ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಕುರುಗೋಡು ಪುರಸಭೆಯಲ್ಲಿ ದಾಖಲೆಗಳ ಗೋಲ್ಮಾಲ್..? ಪುರಸಭೆ ಸದಸ್ಯರಿಂದಲೇ ಬಯಲಾಯ್ತು ಕರಾಳ ಸತ್ಯ !
ಹತ್ತು ವರ್ಷ ಇಲ್ಲದ್ದು ಈಗೇಕೆ ಟೋಲ್ ವಸೂಲಿ
ಇನ್ನೂ ಮೂಲಗಳ ಪ್ರಕಾರ ಹನ್ನೆರಡು ವರ್ಷಗಳ ಹಿಂದೆ ಖಾಸಗಿಯವರು ಈ ರಸ್ತೆ ನಿರ್ಮಾಣ ಮಾಡಿದ್ರು. ಹತ್ತು ವರ್ಷಗಳ ಕಾಲ ಅವರೇ ಇದನ್ನು ನಿರ್ವಹಣೆ ಮಾಡಿದ್ದಾರೆ. ಇದೀಗ ಇದರ ನಿರ್ವಹಣೆ ಸರ್ಕಾರದ ಮೇಲಿರೋ ಹಿನ್ನೆಲೆ ಇಲ್ಲಿ ಟೋಲ್ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ತಾತ್ಕಾಲಿಕ ಟೆಂಟ್ ಮಾದರಿಯಲ್ಲಿ ಇಲ್ಲಿ ಟೋಲ್ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರ ಪರವಿರೋಧದ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತದೆಯೇ ಎನ್ನುವ ಅನುಮಾನವಿದೆ..ಇನ್ನೂ ಬಳ್ಳಾರಿಯಿಂದ ಇಪ್ಪತ್ತು ಕಿ.ಮೀ. ಇರೋ ಮೋಕಾ ಮತ್ತು ಸುತ್ತಮುತ್ತಲಿನ ಗ್ರಾಮಕ್ಕೆ ಹೋಗುವವರು ಇದೇ ರಸ್ತೆ ಮೇಲೆ ಹೋಗಬೇಕು. ಆದರೆ ಇಲ್ಲಿ ಸ್ಥಳೀಯರಿಗೂ ವಿನಾಯಿತಿ ನೀಡಿಲ್ಲದಿರೋದು ಸಾರ್ವಜನಿಕರಿಗಷ್ಟೇ ಅಲ್ಲದೇ ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಂಗಳಿಗೆ 210 ರೂಪಾಯಿ ಫಿಕ್ಸ್ ಮಾಡೋ ಮೂಲಕ ಪಾಸ್ ನೀಡಲು ಚಿಂತನೆ ನಡೆದಿದೆ. ಆದರೆ ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಮಾತ್ರ ಸ್ಥಳೀಯರಿಗೆ ವಿನಾಯಿತಿ ನೋಡೋದಾಗಿ ಹೇಳ್ತಿದ್ದಾರೆ.
ಟೋಲ್ ನಿರ್ಮಾಣಕ್ಕೆ ಜನಾಕ್ರೋಶ
ಒಂದು ಕಡೆ ನಿಯಮ ಬಾಹಿರ ಟೋಲ್ ನಿರ್ಮಾಣಕ್ಕೆ ಜನಾಕ್ರೋಶ ವ್ಯಕ್ತವಾಗ್ತಿರೋದು ಒಂದು ಕಡೆಯಾದ್ರೇ, ಸರ್ಕಾರ ಎಲ್ಲೋ ಒಂದು ಕಡೆ ಗ್ಯಾರಂಟಿ ಸರಿದೂಗಿಸಲು ಟೋಲ್ ಹಾಕುವ ಮೂಲಕ ಜನರ ಹಣ ವಸೂಲಿ ಮಾಡ್ತಿದ್ದಾರೆಯೇ ಅನ್ನೋ ಅನುಮಾನ ದಟ್ಟವಾಗಿದೆ.