ಕಲಬುರಗಿ: ರಾತೋ ರಾತ್ರಿ ಸಿದ್ದರಾಮಯ್ಯ ವೃತ್ತ ನಿರ್ಮಾಣ, ಸಾರ್ವಜನಿಕರ ಆಕ್ರೋಶ

By Girish Goudar  |  First Published Sep 17, 2023, 9:06 AM IST

ಸಿದ್ದರಾಮಯ್ಯ ವೃತ್ತದ ಬಳಿ ಸಿಎಂ ಸಿದ್ದರಾಮಯ್ಯರ ಸ್ವಾಗತ ಕಟೌಟ್‌ಗಳು ರಾರಾಜಿಸುತ್ತಿವೆ. ಮಹಾನಗರ ಪಾಲಿಕೆ ಪರವಾನಿಗೆ ಪಡೆಯದೇ ವೃತ್ತ ನಿರ್ಮಾಣಕ್ಕೆ ಸಾರ್ವಜನಿಕರ ಆಕ್ರೋಶ.


ಕಲಬುರಗಿ(ಸೆ.17): ಸಿಎಂ ಸಿದ್ದರಾಮಯ್ಯ ವೃತ್ತ ರಾತೋ ರಾತ್ರಿ ನಿರ್ಮಾಣವಾಗಿದೆ. ಹೌದು, ಕಲಬುರಗಿ ನಗರದ ಹೈಕೋರ್ಟ್ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ವೃತ್ತ ನಿರ್ಮಾಣವಾಗಿದೆ. 

ಕಲಬುರಗಿ ನಗರದಿಂದ ಅಫಜಲಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿದ್ದರಾಮಯ್ಯ ವೃತ್ತ ನಿರ್ಮಾಣವಾಗಿದೆ. ಇಂದು(ಭಾನುವಾರ) ನಗರದ ಹೈಕೋರ್ಟ್ ಬಳಿ ಶಾಂತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಹೀಗಾಗಿ ದಿಢೀರ್‌ ಅಂತ ಸಿಎಂ ಸಿದ್ದರಾಮಯ್ಯ ವೃತ್ತ ರಾತೋ ರಾತ್ರಿ ನಿರ್ಮಾಣ ಮಾಡಲಾಗಿದೆ. 

Tap to resize

Latest Videos

undefined

ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ: ಸಿಎಂ ಧ್ವಜಾರೋಹಣ

ಸಿದ್ದರಾಮಯ್ಯ ವೃತ್ತದ ಬಳಿ ಸಿಎಂ ಸಿದ್ದರಾಮಯ್ಯರ ಸ್ವಾಗತ ಕಟೌಟ್‌ಗಳು ರಾರಾಜಿಸುತ್ತಿವೆ. ಮಹಾನಗರ ಪಾಲಿಕೆ ಪರವಾನಿಗೆ ಪಡೆಯದೇ ವೃತ್ತ ನಿರ್ಮಾಣಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

click me!