ಬೆಂಗಳೂರು (ಮೇ.01): ವರ್ಷದ ಹಿಂದೆ ಚಾಮರಾಜಪೇಟೆಯ ಬಿಬಿಎಂಪಿ ಅಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಅಪಹರಣ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ವಿಭಾಗದ ಪೊಲೀಸರು ಈ ಸಂಬಂಧ ವೈದ್ಯೆಯೊಬ್ಬರನ್ನು ಬಂಧಿಸಿದ್ದಾರೆ.
ಗಂಗಾವತಿ: ಗಂಡು ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತೆ ..
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಮನೋವೈದ್ಯೆ ಡಾ. ರಶ್ಮಿ (34) ಬಂಧಿತಳಾಗಿದ್ದಾಳೆ. ಅಲ್ಲದೇ ಈಗ ಮಗುವನ್ನು ರಕ್ಷಣೆ ಮಾಡಲಾಗಿದೆ.
ವಿಚಾರಣೆ ವೇಳೆ ನವಜಾತ ಶಿಶು ಅಪಹರಿಸಿದ್ದ ವೈದ್ಯೆ ಮಗುವನ್ನು 15 ಲಕ್ಷ ರುಗಳಿಗೆ ಮಾರಿದ್ದ ವಿಚಾರ ತಿಳಿದು ಬಂದಿದೆ.
ಏನಿದು ಪ್ರಕರಣ : ಜಗಜೀವನ್ರಾಮ್ ನಗರದ ಹುಸ್ನಾ ಬಾನು ಎಂಬಾಕೆ 2020ರ ಮೇಲೆ 29 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಕೆಲವೆ ಕ್ಷಣದಲ್ಲಿ ಮಗು ಕಾಣೆಯಾಗಿತ್ತು.
ವರ್ಷ ಕಳೆದರೂ ಮಗು ಪತ್ತೆಯಾದ ಹಿನ್ನೆಲೆ ಬೇಸರಗೊಂಡ ಪೋಷಕರು ಹೈ ಕೋರ್ಟ್ಗೆ ಮೊರೆಯಿಟ್ಟರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಶೀಘ್ರವೇ ಮಗು ಪತ್ತೆ ಹಚ್ಚುವಂತೆ ಸೂಚಿಸಿತ್ತು.
ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿ ತನಿಖೆ ನಡೆಸಿದ್ದು, ಕರೆಗಳ ಪರಿಶೀಲನೆ ನಡೆಸಿದ್ದ ವೇಳೆ ಈ ಮಾಹಿತಿ ಸಿಕ್ಕಿದೆ.