* ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ, ನೇಮಕಾತಿ ಆದೇಶ ಹೊರಡಿಸುವಿಕೆ ಕಾರ್ಯ ಸ್ಥಗಿತ
* ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲು ಎಡಿಜಿಪಿ ಅಮೃತ್ ಪಾಲ್ ಸಂದೇಶ
* ಪರೀಕ್ಷೆಯಲ್ಲಿ ಅಕ್ರಮ ಹಾಗೂ ಮೀಸಲಾತಿ ಕುರಿತು ಸಂಚಲನ ಮೂಡಿಸಿದ್ದ ‘ಕನ್ನಡಪ್ರಭ’ ಸರಣಿ ವರದಿಗಳು
ಆನಂದ್ ಎಂ. ಸೌದಿ
ಯಾದಗಿರಿ(ಫೆ.08): 545 ಪಿಎಸೈ(PSI) ಹುದ್ದೆಗಳ ಆಯ್ಕೆ ಪಟ್ಟಿ ವಿಚಾರದಲ್ಲಿನ ಅನೇಕರ ಆಕ್ಷೇಪಕ್ಕೆ ಮೊದಲ ಹಂತದಲ್ಲಿ ಒಳ್ಳೆಯ ಬೆಳವಣಿಗೆ ಕಂಡುಬಂದಂತಿದೆ. ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ನೇಮಕಾತಿ(Recruitment) ಆದೇಶ ಹೊರಡಿಸುವಿಕೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ(Kalyana Karnataka) ಭಾಗದ ಜನರಿಗೆ 371 (ಜೆ) ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂಬ ಹೋರಾಟ ಹಾಗೂ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಿಸುತ್ತಿದ್ದ ನೂರಾರು ನೊಂದ ಅಭ್ಯರ್ಥಿಗಳಿಗೆ ಇದು ಸಮಾಧಾನ ಮೂಡಿಸಿದಂತಿದೆ.
undefined
ಇನ್ನು, ಈ ಬಗ್ಗೆ ಸಂಚಲನ ಮೂಡಿಸಿದ್ದ ‘ಕನ್ನಡಪ್ರಭ’(Kannada Prabha) ಸರಣಿ ವರದಿಗಳು, ಎಲ್ಲೆಡೆ ವ್ಯಾಪಕವಾಗಿ ಚರ್ಚೆಯಾಗಿದ್ದವು. ಮೀಸಲಾತಿ ಕುರಿತು ಈ ಭಾಗದ ಶಾಸಕರು ಸಿಎಂರ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಮೀಸಲಾತಿ(Reservation) ತೊಂದರೆ ಸರಿಪಡಿಸುವಂತೆ ಹಾಗೂ ಕೇಳಿಬರುತ್ತಿರುವ ಅಕ್ರಮ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಚಿವ ಪ್ರಭು ಚವ್ಹಾಣ್(Prabhu Chauhan) ಸಿಎಂ ಅವರಿಗೆ ಪತ್ರ ಬರೆದಿದ್ದರು.
ನೊಂದ ಅಭ್ಯರ್ಥಿಗಳ ಟ್ವೀಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಅಭಿಪ್ರಾಯಗಳೂ ಸೇರಿದಂತೆ ‘ಕನ್ನಡಪ್ರಭ’ ಸರಣಿ ವರದಿಗಳ ಬಗ್ಗೆ ಗುಪ್ತಚರ ಇಲಾಖೆಯೂ ಸಹ ಸಂಬಂಧಿತ ಮೇಲಧಿಕಾರಿಗಳ ಗಮನಕ್ಕೆ ತಂದು, ಇಡೀ ಪ್ರಕ್ರಿಯೆಯಿಂದಾಗಿ ಸರ್ಕಾರಕ್ಕೆ ಮುಜುಗರ ಅನುಭವಿಸುವಂತಹ ಸನ್ನಿವೇಶ ಎದುರಾಗಬಹುದು ಎಂದು ಸೂಚ್ಯ ನೀಡಿತ್ತು ಎನ್ನಲಾಗಿದೆ.
PSI Recruitment Scam: ತಮ್ಮ ಹೆಸರೇ ಬರೆಯಲಿಕ್ಕಾಗದ ಕೆಲವರು ರ‍್ಯಾಂಕ್ ಹೇಗೆ ಪಡೆದ್ರು..?
ಸಂದೇಶ :
‘ಪೊಲೀಸ್ ಸಬ್ ಇನ್ಸಪೆಕ್ಟರ್ (Civil) ಪುರುಷ ಮತ್ತು ಮಹಿಳೆ ಹಾಗೂ ಸೇವಾನಿರತ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಂಡು, ಅರ್ಹ ಅಭ್ಯರ್ಥಿಗಳ ಘಟಕವಾರು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ದಾಖಲೆಗಳ ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಜ.21 ರಂದು ಪತ್ರದಲ್ಲಿ ತಿಳಿಸಲಾಗಿತ್ತು.
ಆದರೆ, ಆಡಳಿತಾತ್ಮಕ ಕಾರಣಗಳಿಂದ ಪ್ರಸ್ತುತ ಸದರಿ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನಾ ಕಾರ್ಯವನ್ನು ಹಾಗೂ ನೇಮಕಾತಿ ಆದೇಶಗಳನ್ನು ಹೊರಡಿಸುವುದನ್ನು ಈ ಕಚೇರಿಯ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕು’ ಎಂದು ನೇಮಕಾತಿ ವಿಭಾಗದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಮೃತ್ ಪಾಲ್, ಐಪಿಎಸ್ ರವರು ಎಲ್ಲ ಪೊಲೀಸ್ ವಲಯಗಳಿಗೆ ಟಿ.ಪಿ/ಫ್ಯಾಕ್ಸ್/ಈ-ಮೇಲ್ ಸಂದೇಶವನ್ನು ಸೋಮವಾರ ಕಳುಹಿಸಿದ್ದಾರೆ.
PSI Exam Scam: ಪಿಎಸೈ ಪರೀಕ್ಷೆ ಅಕ್ರಮ ಶಂಕೆ, ಯಾದಗಿರಿ ವ್ಯಕ್ತಿ ಸೂತ್ರಧಾರಿಯೇ?
‘ಕನ್ನಡಪ್ರಭ’ದ ಸರಣಿ ವರದಿಗಳು ಪೊಲೀಸ್ ಇಲಾಖೆಯಲ್ಲಿ(Department of Police) ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ನೇಮಕಾತಿ ಆದೇಶಗಳನ್ನು ನೀಡಲು ತರಾತುರಿ ಮಾಡಲಾಗುತ್ತಿದೆ, ಅಕ್ರಮ ಮುಚ್ಚಿ ಹಾಕಲು ಇಂತಹ ಪ್ರಯತ್ನ ನಡೆಯುತ್ತಿದೆ ಎಂಬುದಾಗಿ ಸೋಮವಾರದ ಸರಣಿಯಲ್ಲಿ ಪ್ರಕಟವಾಗಿತ್ತು.
PSI Recruitment Scam: ಸರ್ಕಾರಕ್ಕೆ ಕೆಟ್ಟ ಹೆಸರು ಬೇಡ, ತನಿಖೆಯಾಗಲಿ: ಸಚಿವ ಪ್ರಭು ಚವ್ಹಾಣ್
ಯಾದಗಿರಿ: ಪಿಎಸೈ ಪರೀಕ್ಷೆಯಲ್ಲಿ ಅಕ್ರಮಗಳ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಸರ್ಕಾರ ಆದೇಶಿಸಬೇಕು, ಈ ವಿಚಾರದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದು ಬೇಡ ಎಂದು ಸಚಿವ ಪ್ರಭು ಚವ್ಹಾಣ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರಿಗೆ ಪತ್ರ ಬರೆದಿದ್ದರು.
'ಕನ್ನಡಪ್ರಭ’(Kannada Prabha) ಸರಣಿ ವರದಿಗಳನ್ನೂ ಸಹ ಸಿಎಂ ಹಾಗೂ ಗೃಹ ಸಚಿವರಿಗೆ ಗುರುವಾರ ಬರೆದ ಈ ಪತ್ರದ ಜೊತೆಯಲ್ಲಿ ಲಗತ್ತಿಸಿರುವ ಸಚಿವ ಪ್ರಭು ಚವ್ಹಾಣ್, ಪಿಎಸೈ ನೇಮಕಾತಿಯಲ್ಲಿ(PSI Recruitment) ಭಾರಿ ಅಕ್ರಮ(Illegal) ನಡೆದಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ. ಇದರಿಂದ ರಾಜ್ಯ ಸರ್ಕಾರಕ್ಕೆ(Govenment of Karnataka) ಕೆಟ್ಟ ಹೆಸರು ಬರುವುದನ್ನು ತಡೆಗಟ್ಟಲು ಕೂಡಲೇ ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕೆಂದು ಕೋರಿದ್ದರು.