Chitradurga: ಮರಕ್ಕೆ ಕಾರು ಡಿಕ್ಕಿ: ಬೆಂಗ್ಳೂರು ಮೂಲದ ಮೂವರ ದುರ್ಮರಣ

Kannadaprabha News   | Asianet News
Published : Feb 08, 2022, 05:00 AM IST
Chitradurga: ಮರಕ್ಕೆ ಕಾರು ಡಿಕ್ಕಿ: ಬೆಂಗ್ಳೂರು ಮೂಲದ ಮೂವರ ದುರ್ಮರಣ

ಸಾರಾಂಶ

*  ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಹಿರಿಯೂರು ರಸ್ತೆ ಇಂಚರ ಶಾಲೆ ಹತ್ತಿರ ನಡೆದ ಘಟನೆ *  ಬೆಂಗಳೂರಿಗೆ ವಾಪಸ್‌ ಆಗುತ್ತಿರುವ ವೇಳೆ ನಡೆದ ದುರ್ಘಟನೆ *  ಘಟನೆಯಲ್ಲಿ ನಾಲ್ವರಿಗೆ ಗಾಯ

ಹೊಸದುರ್ಗ(ಫೆ.08):  ಚಾಲಕನ ನಿಯಂತ್ರಣ ತಪ್ಪಿ ಕಾರು(Car) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗ(Chitradurga) ಜಿಲ್ಲೆ ಹೊಸದುರ್ಗದ(Hosadurga) ಹಿರಿಯೂರು ರಸ್ತೆ ಇಂಚರ ಶಾಲೆ ಹತ್ತಿರ ಭಾನುವಾರ ಮಧ್ಯರಾತ್ರಿ ನಡೆದಿದೆ.

ಬೆಂಗಳೂರಿನ(Bengaluru) ಕುರುಬರಹಳ್ಳಿ ನಿವಾಸಿಗಳಾದ ಶಾರದಮ್ಮ(55), ಅವರ ಸೊಸೆ ಗೀತಾ (33), ಮೊಮ್ಮಗಳು ಧೃತಿ(5) ಮೃತಪಟ್ಟವರು(Death). ಗಂಭೀರ ಗಾಯಾಳುಗಳಾಗಿರುವ ಗೀತಾ ಪತಿ ಸುಧೀಂದ್ರ, ಶಾರದಮ್ಮ ಅವರ ಪತಿ ನಾಗೇಶ್‌ ಹಾಗೂ ದಯಾನಂದ್‌ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಮೂಲತಃ ಕುಂದಾಪುರ ತಾಲೂಕಿನವರಾಗಿದ್ದು, ಕುಂದಾಪುರದ ಕೋಟೇಶ್ವರ ದೇವಾಲಯಕ್ಕೆ ಕುಟುಂಬ ಸಮೇತ ತೆರಳಿ ಬೆಂಗಳೂರಿಗೆ ವಾಪಸ್‌ ಆಗುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Fire Accident: 3 ಬೈಕ್, 4 ಕಾರುಗಳು ಬೆಂಕಿಗಾಹುತಿ, ಅಕ್ಕಪಕ್ಕದ ಮನೆಗಳಿಗೂ ಹಾನಿ

ಆಟೋ-ಬಸ್‌ ಡಿಕ್ಕಿ: ಆಟೋ ಚಾಲಕ ಗಂಭೀರ

ನಾಪೋಕ್ಲು: ನೂರಂಬಡ ಮಠದ ಹತ್ತಿರದ ತಿರುವಿನಲ್ಲಿ ಬಸ್‌ ಹಾಗೂ ಆಟೋ ರಿಕ್ಷಾ ಡಿಕ್ಕಿಯಾಗಿದ್ದು, ಆಟೋ ಚಾಲಕ ಕೆ.ಆರ್‌. ನಿಶಾಂತ್‌ ಗಂಭೀರ ಗಾಯಗೊಂಡಿದ್ದಾರೆ.

ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅಪ್ಪಾಜಿ ಎಂಬವರ ತಲೆಗೆ ಗಾಯವಾಗಿದ್ದು, ಇಬ್ಬರನ್ನೂ ನಾಪೋಕ್ಲು ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಾಪೋಕ್ಲು ಪೊಲೀಸ್‌ ಎಂ.ಆರ್‌. ರವಿ ಕುಮಾರ್‌ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರು-ಬೈಕ್‌ ಅಪಘಾತ: ಸವಾರ ಸಾವು

ಕಾರ್ಕಳ(Karkala): ಬೈಕ್‌ ಹಾಗೂ ಕಾರು ಮಧ್ಯೆ ಅಪಘಾತವಾಗಿ(Accident) ಬೈಕ್‌ ಸವಾರ ಮೃತಪಟ್ಟಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸೀಡ್‌ ಫಾಮ್‌ರ್‍ ಬಳಿ ಫೆ. 6ರಂದು ಸಂಭವಿಸಿದೆ. ಮೂಡುಬಿದಿರೆ ಮೂಡು ಮಾರ್ನಾಡಿನ ತಂಡ್ರಕೆರೆ ಹೊಲಜಾಲ್‌ ಬೈಲ್‌ ದಿನೇಶ್‌ಗೌಡ (32) ಮೃತಪಟ್ಟವರು.

ಕಾರ್ಕಳದಿಂದ ಮೂಡುಬಿದಿರೆಯ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್‌ ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ರಾಜೀವ್‌ ಎಂಬುವವರು ಚಲಾಯಿಸುತ್ತಿದ್ದ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಬೈಕ್‌ ಸವಾರನಿಗೆ ತೀವ್ರವಾದ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ತಕ್ಷಣವೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ(Treatment) ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಾ ಸಾವಿಗೆ ರಮ್ಯಾ ಖಾರ; ಪ್ರಾಣಿಹಿಂಸೆ ವಿರುದ್ಧ ಕಠಿಣ ಕಾನೂನು ತರಲು ಆಗ್ರಹ

ಮಾದವರಂ ಬಳಿ ಆಟೋ ಅಪಘಾತ ಇಬ್ಬರ ಸಾವು

ರಾಯಚೂರು(Raichur): ಮಂತ್ರಾಲಯದ(Mantralaya) ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವುದಕ್ಕಾಗಿ ಬೆಂಗಳೂರಿನಿಂದ ಆಗಮಿಸಿದ್ದ ಭಕ್ತರು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ವಾಹನದ ಚಕ್ರ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಪಕ್ಕದ ಆಂಧ್ರಪ್ರದೇಶ(Andhra Pradesh) ರಾಜ್ಯದ ಕರ್ನೂಲ್‌ ಜಿಲ್ಲೆ ಮಾದವರಂ ಸಮೀಪ ಭಾನುವಾರ ಸಂಭವಿಸಿದೆ.

ಬೆಂಗಳೂರಿನ ದೊಡ್ಡಬಳ್ಳಾಪುರದ ರೈಲ್ವೆ ನೌಕರ ರಾಘವೇಂದ್ರ (37), ಹಕ್ಕಿಹೆಬ್ಬಾಳದ ಕೆ.ಆರ್‌.ಅಭಿಷೇಕ್‌ (35) ಮೃತಪಟ್ಟದುರ್ದೈವಿಗಳಾಗಿದ್ದು, ಅಪಘಾತದಲ್ಲಿ ಮೂರು ಜನರು ಗಾಯಗೊಂಡಿದ್ದಾರೆ. ವಾರಾಂತ್ಯ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಬೆಂಗಳೂರಿನಿಂದ ರೈಲಿನ ಮೂಲಕ ತುಂಗಭದ್ರಾ ರೈಲ್ವೆ ಸ್ಟೇಷನ್‌ಗೆ ಆಗಮಿಸಿದ್ದ ಭಕ್ತರು, ಬೆಳಗ್ಗೆ ಅಲ್ಲಿಂದ ಮಂತ್ರಾಲಯಕ್ಕೆ ಟಂಟಂ ಆಟೋದಲ್ಲಿ ತೆರಳುತ್ತಿದ್ದ ಸಮಯದಲ್ಲಿ ಮಾದವರಂ ಸಮೀಪ ಆಟೋದ ಚಕ್ರ ಸ್ಫೋಟಗೊಂಡು ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡ ಮೂರು ಜನರನ್ನು ಎಮ್ಮಿಗನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಮಾದವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
Read more Articles on
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!