ಶಿರಾ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುವ ಉದ್ದೇಶದಿಂದ ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ತಾಲೂಕನ್ನು ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಲಾಗಿತ್ತು. ಈಗ ಅದಕ್ಕೆ ಪೂರಕವಾಗುವಂಥ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.
ಶಿರಾ : ಶಿರಾ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುವ ಉದ್ದೇಶದಿಂದ ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ತಾಲೂಕನ್ನು ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಲಾಗಿತ್ತು. ಈಗ ಅದಕ್ಕೆ ಪೂರಕವಾಗುವಂಥ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.
ಮಂಗಳವಾರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮೊದಲ ಬಾರಿಗೆ ನಗರದ ಮಿನಿವಿಧಾನಸೌಧಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಧಿಕಾರಿಗಳಿಗೆ ಚುರುಕುಮುಟ್ಟಿಸುವ ಕೆಲಸ ಮಾಡಿದರು.
ತಾಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು ಹಂತಹಂತವಾಗಿ ಜಾರಿಗೊಳಿಸುವ ಕೆಲಸ ಮಾಡುತ್ತೇನೆ. ತಾಲೂಕಿನ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟುಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು. ನಂತರ ನೂತನ ಸಬ್ ರಿಜಿಸ್ಟಾರ್ ಕಚೇರಿಯ ಕಟ್ಟಡದ ಸ್ಥಳವನ್ನು ವೀಕ್ಷಣೆ ಮಾಡಿ ಸಬ್ ರಿಜಿಸ್ಟಾರ್ ಕಚೇರಿಯನ್ನು ಮಿನಿ ವಿಧಾನಸೌಧದ ಪಕ್ಕದಲ್ಲಿಯೇ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಪೊ್ಲೕಮಾ ಕಾಲೇಜಿಗೆ ಭೇಟಿ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿದ ಶಾಸಕ ಟಿ.ಬಿ. ಜಯಚಂದ್ರ ಅವರು ಪ್ರಾಂಶುಪಾಲರಾದ ಮೇಜರ್ ಅನಿಲ್ ಕುಮಾರ್ ಅವರೊಂದಿಗೆ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಹಾಸ್ಟೆಲ್ ಪ್ರಾರಂಭಿಸಲು ಮನವಿ ಸಲ್ಲಿಸಿದರು, ಇದಕ್ಕೆ ಪೂರಕವಾಗಿ ಮುಂದಿನ ತಿಂಗಳಲ್ಲಿ ಹಾಸ್ಟೆಲ್ ಪ್ರಾರಂಭಿಸಲು ಬಿಸಿಎಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿವೇಕ್ ಶೇಣ್ವಿ, ಗ್ರೇಡ್-2 ತಹಸೀಲ್ದಾರ್ ಮಂಜುನಾಥ್, ಕಂದಾಯ ತನಿಖಾಧಿಕಾರಿ ಸುದರ್ಶನ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಜಿ.ಪಂ. ಮಾಜಿ ಸದಸ್ಯ ಸಿ.ಅರ್.ಉಮೇಶ್, ಕಾಂಗ್ರೆಸ್ ಕಾನೂನು ಹಾಗೂ ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್. ಗುರುಮೂರ್ತಿ ಗೌಡ, ನಗರಸಭಾ ಸದಸ್ಯರಾದ ಅಜಯ್, ಪೂಜಾ ಪೆದ್ದರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜ್, ವಾಜರಹಳ್ಳಿ ರಮೇಶ್, ವಿನಯ್ ತ್ಯಾಗರಾಜ್, ಪಿ.ಬಿ.ನರಸಿಂಹಯ್ಯ, ಸೀಗಲಹಳ್ಳಿ ವೀರೇಂದ್ರ, ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.
ಟಿಬಿ ಜಯಚಂದ್ರಗೆ ಒಲಿಯದ ಸಚಿವ ಸ್ಥಾನ - ಮೊಮ್ಮಗಳಿಂದ ಪತ್ರ
ತುಮಕೂರು: ಶಿರಾ ಶಾಸಕ ಟಿ.ಬಿ. ಜಯಚಂದ್ರಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಬೇಸರಗೊಂಡ ಮೊಮ್ಮಗಳು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
ತಾತನಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡ ಮೊಮ್ಮಗಳಾದ ಆರನಾ ಸಂದೀಪ್ ರಾಹುಲ್‌ಗೆ ಪತ್ರ ಬರೆದಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಆರನಾ, ನನ್ನ ತಾತ ಮಿನಿಸ್ಟರ್ ಆಗದಿದ್ದಕ್ಕೆ ನನಗೆ ಬೇಜಾರಾಗಿದೆ. ಅವರು ಹಾರ್ಡ್ ವರ್ಕ್ ಮಾಡುತ್ತಾರೆ. ಅವರಿಗೆ ಸಚಿವ ಸ್ಥಾನ ನೀಡಿ. ಜನರಿಗೆ ತುಂಬಾ ಪ್ರೀತಿ ಕೊಟ್ಟು,ಸಹಾಯ ಮಾಡ್ತಾರೆ ಎಂದು ಟಿ.ಬಿ. ಜಯಚಂದ್ರ ಮೊಮ್ಮಗಳಾದ ಆರನಾಳಿಂದ ಭಾವನಾತ್ಮಕ ವಿಡಿಯೋ ರವಾನೆ ಮಾಡಲಾಗಿದೆ. ರಾಹುಲ್ ಗಾಂಧಿಗೆ ವಿಡಿಯೋ ಹಾಗೂ ಪತ್ರದ ಮುಖೇನ ಭಾವನಾತ್ಮಕ ಮನವಿ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಆರ್‌ಜೆಡಿ ವಿವಾದಾತ್ಮಕ ಟ್ವೀಟ್: ಶವ ಪೆಟ್ಟಿಗೆಗೆ ನೂತನ ಸಂಸತ್ ಭವನ ಹೋಲಿಕೆ !