ರಾಯಚೂರು: ನೋವು ಅನುಭವಿಸಿದ ಸಮುದಾಯಕ್ಕೆ ಎಸ್ಸಿ ಮೀಸಲು ಒದಗಿಸಿ: ಕೆ. ಶಿವರಾಂ

By Kannadaprabha News  |  First Published Mar 4, 2023, 5:58 AM IST

ಇತಿಹಾಸದಿಂದ ಜಾತಿಯ ತಾರತಮ್ಯ ಅನುಭವಿಸಿದ ಸಮುದಾಯಗಳಿಗೆ ಸಂವಿಧಾನದಲ್ಲಿ ಪರಿಶಿಷ್ಟಜಾತಿ ಮೀಸಲಾತಿ ಇದೆ. ಅದನ್ನು ಬಿಟ್ಟು ಅಸ್ಪೃಶ್ಯತೆ, ನೋವು ಅನುಭವಿಸದೇ ಇರುವ ಮುಂದುವರೆದ ಸಮುದಾಯಗಳಿಗೆ ಮೀಸಲಾತಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ. ಶಿವರಾಂ ಹೇಳಿದರು.


ಲಿಂಗಸುಗೂರು (ಮಾ.4) : ಇತಿಹಾಸದಿಂದ ಜಾತಿಯ ತಾರತಮ್ಯ ಅನುಭವಿಸಿದ ಸಮುದಾಯಗಳಿಗೆ ಸಂವಿಧಾನದಲ್ಲಿ ಪರಿಶಿಷ್ಟಜಾತಿ ಮೀಸಲಾತಿ ಇದೆ. ಅದನ್ನು ಬಿಟ್ಟು ಅಸ್ಪೃಶ್ಯತೆ, ನೋವು ಅನುಭವಿಸದೇ ಇರುವ ಮುಂದುವರೆದ ಸಮುದಾಯಗಳಿಗೆ ಮೀಸಲಾತಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ. ಶಿವರಾಂ(Chhalavadi Mahasabha State President K. Shivaram) ಹೇಳಿದರು.

ಪಟ್ಟಣದ ಪದವಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಛಲವಾದಿ ಮಹಾಸಭಾ ಸಮಾವೇಶ(Chhalavadi mahasabha convention) ಉದ್ಘಾಟಿಸಿ ಮಾತನಾಡಿದ ಅವರು, ತುಳಿತಕ್ಕೋಳಗಾದ ಸಮುದಾಯದ ಜನರು ಸರ್ವರು ಮತದಾನ ಮಾಡಬೇಕು. ಅದು ಬಿಟ್ಟು ಮತವನ್ನು ಮಾರಿಕೊಂಡರೆ ಹತ್ತು ಜನ ಅಂಬೇಡ್ಕರ್‌ ರವರ ಬಂದರೂ ದಲಿತ ಉದ್ಧಾರ ಸಾಧ್ಯವಾಗುವುದಿಲ್ಲ. ದಲಿತರಲ್ಲಿ ಕೆಲವೇ ನಾಯಕರು ರಾಜಕೀಯ ಅಧಿಕಾರಕ್ಕಾಗಿ ಸಮುದಾಯದವನ್ನು ಬಳಸಿಕೊಂಡಿದ್ದಾರೆ. ಇದೇ ಛಲವಾದಿ ಸಮುದಾಯದ ಸಮಾವೇಶಕ್ಕೆ ಯಾವುದೇ ಸಮುದಾಯದ ರಾಜಕೀಯ ನಾಯಕರು ಬರಲ್ಲ. ಅವರಿಗೆ ಸಮುದಾಯದ ಏಳಿಗೆಗಿಂತ ರಾಜಕೀಯ ಅಧಿಕಾರ ಮುಖ್ಯ. ಇದರಿಂದ ಸಮುದಾಯದ ಸಮಾವೇಶಕ್ಕೆ ಆಗಮಿಸಿಲ್ಲ ಎಂದು ಆರೋಪಿಸಿದರು.

Latest Videos

undefined

ಹೋಳಿ ಹಬ್ಬಕ್ಕೂ ಮೊದಲೇ ರಾಯಚೂರು ಜಿಲ್ಲೆಯಲ್ಲಿ ರಾಜಕೀಯ ರಂಗಿನಾಟ

ಆಕ್ಷೇಪ: ಗದ್ದ​ಲ

ಛಲವಾದಿ ಸಮುದಾಯದ ಅಭಿವೃದ್ಧಿ ಪ್ರಧಾನಿ ಮೋದಿ(PM Narendra Modi) ಅಪಾರ ಅನುದಾನ ನೀಡಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಇದುವರೆಗೂ ಯಾವುದೇ ಮುಖ್ಯಮಂತ್ರಿ ಜೈ ಭೀಮ ಎಂಬ ಘೋಷಣೆ ಕೂಗಿರಲಿಲ್ಲ. ಸಿಎಂ ಬೊಮ್ಮಾಯಿ(CM Basavaraj Bommai) ಜೈ ಭೀಮ(Jai Bheem) ಎಂದು ಘೋಷಣೆ ಕೂಗಿದ ಮೊದಲ ಮುಖ್ಯಮಂತ್ರಿ ಎಂಬುದು ಸೇರಿದಂತೆ ಬಿಜೆಪಿ, ಪ್ರಧಾನಿ ಮೋದಿ ಸಾಧನೆ ಹಾಗೂ ಸಿಎಂ ಬೊಮ್ಮಾಯಿ ಸರ್ಕಾರ ನೀಡಿದ ಅನುದಾನ ಕುರಿತು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಕೆ. ಶಿವರಾಂ(K Shivaram) ಹೇಳುತ್ತಿದ್ದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡರಾದ ಪಾಮಯ್ಯ ಮುರಾರಿ ವೇದಿಕೆಯಿಂದ ನಿರ್ಗಮಿಸಲು ಮುಂದಾದರು. ಅಲ್ಲದೇ ಛಲವಾದಿ ಮುಖಂಡರೂ ಕೆ. ಶಿವರಾಂ ಭಾಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ವೇದಿಕೆಯಲ್ಲಿ ಗದ್ದಲ ಉಂಟಾಯಿತು.

ಎದ್ದುಕಂಡ ಗೈರು

ದಲಿತ ಚಳುವಳಿಗೆ ಸಾಹಿತ್ಯದ ಜೊತೆಜೊತೆಗೆ ಕ್ರಾಂತಿಯ ರೂಪ ನೀಡಿದ ಪ್ರಮುಖರಲ್ಲಿ ಒಬ್ಬರಾದ ಹಿರಿಯ ಹೋರಾಟಗಾರ ಆರ್‌. ಮಾನಸಯ್ಯನವರು ತಮ್ಮದೇ ಊರಿನಲ್ಲಿ ನಡೆದ ಛಲವಾದಿ ಸಮುದಾಯದ ಸಮಾವೇಶಕ್ಕೆ ಗೈರು ಹಾಜರಿ ಎದ್ದು ಕಂಡಿತು.

 

Karnataka Election 2023: 25ಕ್ಕೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಕೆ.ವಿರೂಪಾಕ್ಷಪ್ಪ

click me!