ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸೋದು ಭಾರತದ ಸನಾತನ ಸಂಸ್ಕೃತಿಯ ಒಂದು ಲಕ್ಷಣ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಚಿಕ್ಕಮಗಳೂರು (ಮಾ.4) : ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸೋದು ಭಾರತದ ಸನಾತನ ಸಂಸ್ಕೃತಿಯ ಒಂದು ಲಕ್ಷಣ ಎಂದು ಶಾಸಕ ಸಿ.ಟಿ. ರವಿ(CT Ravi) ಹೇಳಿದರು.
ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರ(Hiremagaluru Primary Health Centre)ಕ್ಕೆ ವಿದ್ಯಾ ಕಾಫಿ ಸಂಸ್ಥೆಯಿಂದ ನಿರ್ಮಿಸಿಕೊಟ್ಟಸುಸಜ್ಜಿತ ಕಟ್ಟಡವನ್ನು ಶುಕ್ರವಾರ ಲೋಕಾರ್ಪಣೆ(Inauguration) ಗೊಳಿಸಿ ಮಾತನಾಡಿದ ಅವರು, ಸಣ್ಣ ಉಪಕಾರವನ್ನು ಸ್ಮರಿಸುವಂತದ್ದು ನಮ್ಮ ಸನಾತತ ಸಂಸ್ಕೃತಿ(Sanatana culture) ಎಂದರು.
ಕಾಂಗ್ರೆಸ್ ಇದ್ದಿದ್ರೆ ಕೇಸ್ ಆಗ್ತಾ ಇರ್ಲಿಲ್ಲ, ಕೇಸ್ ಮುಚ್ಚಿ ಹಾಕೋ ಕೆಲಸ ಮಾಡುತ್ತಿದ್ದರು: ಸಿ.ಟಿ.ರವಿ
ನಮ್ಮ ಕಣ್ಣಿಗೆ ದೇವರು ಕಾಣುವುದಿಲ್ಲ ಅದೊಂದು ನಂಬಿಕೆ, ಆದರೆ, ದೇವರ ರೂಪದಲ್ಲಿ ಯಾರಾರಯರು ಸಹಾಯ ಮಾಡುತ್ತಾರೊ ಅವರೆಲ್ಲರೂ ದೇವರೆಂದು ನಮ್ಮ ಸಮಾಜ ಭಾವಿಸುತ್ತದೆ. ಹಾಗಾಗಿಯೇ ಅಕ್ಷರ ಕಲಿಸಿದ ಗುರು, ಜೀವ ಉಳಿಸಿದ ಡಾಕ್ಟರ್‌ನ್ನು ವೈದ್ಯೋ ನಾರಾಯಣೋ ಹರಿಃ ಎಂದು ಗುರುತಿಸಿದೆವು. ಆ ರೀತಿ ಜೀವ ಉಳಿಸಿದ ವೈದ್ಯರೂ ಕೂಡ ದೇವರಾಗುತ್ತಾರೆ. ಸುತ್ತಮುತ್ತ ಗ್ರಾಮಸ್ಥರಿಗೆ ಉತ್ತಮ ಆರೋಗ್ಯ ಸೇವೆ ಲಭಿಸುವ ಆಸ್ಪತ್ರೆ ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ ಎಂದು ಹೇಳಿದರು.
ಸಮಾಜ ಯಾವಾಗಲು ಕೃತಜ್ಞತಾ ಪೂರ್ವಕವಾಗಿರಬೇಕು. ಯಾವಾಗ ಸಮಾಜ ಕೃತಜ್ಞತೆಯನ್ನು ಮರೆತು ಕೃತಜ್ಞವಾಗುತ್ತದೊ ಆಗ ಸಮಾಜದ ವ್ಯವಸ್ಥೆ ಅಧೋಗತಿಗೆ ಹೋಗಿದೆ ಎಂದರ್ಥ. 2022ರ ಜೂ.6 ರಂದು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಈಗ ಮಾ.3ಕ್ಕೆ ಉದ್ಘಾಟನೆ ಮಾಡುತ್ತಿದ್ದೇವೆ, 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇದರ ಜತೆಗೆ ಪಕ್ಕದ ಹಳೆ ಕಟ್ಟಡ ನೀಡಿದರೆ ಡಯಾಲಿಸಿಸ್ ಸೆಂಟರ್, ಕ್ವಾಟ್ರರ್ಸ್ ನಿರ್ಮಿಸುವುದಾಗಿ ವಿದ್ಯಾ ಕಾಫಿ ಸಂಸ್ಥೆಯವರು ಹೇಳಿದ್ದಾರೆ. ಕೆಲವರು ದೇವಸ್ಥಾನಕ್ಕೆ ಟ್ಯೂಬ್‌ಲೈಟ್ ನೀಡಿದರೆ ಬೆಳಕೆ ಕಾಣದಷ್ಟುದಾನಿಗಳ ಹೆಸರು ಬರೆಸಿರುವುದನ್ನು ನೋಡಿದ್ದೇವೆ. ಆದರೆ, 1.5 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ಕಟ್ಟಿಕೊಟ್ಟರೂ ನಾನು ಏನೂ ಕೊಟ್ಟೆಇಲ್ಲಾ ಎಂಬ ನಮ್ರತೆಯ ಭಾ ವ ಸಹೋದರರು ಸಂಕೋಚದಿಂದ ಕುಳಿತಿದ್ದಾರೆ. ಈ ರೀತಿಯ ಮನಸ್ಥಿತಿ ಬಹಳ ಕಡಿಮೆ ಜನರಲ್ಲಿರುತ್ತದೆ. ಹಾಗಾಗಿ ಸೂರ್ಯಚಂದ್ರ ಇರೋವರೆಗೂ ವಿದ್ಯಾ ಕಾಫಿ ಅವರ ಹೆಸರು ಚಿರಸ್ಥಾಯಿ ಯಾಗಿರುತ್ತದೆ ಎಂದರು.
ವಿದ್ಯಾ ಹಬ್ಸ್‌ರ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ಯಾಮ್‌ಪ್ರಸಾದ್ ಮಾತನಾಡಿ, ಇದೊಂದು ಸುದಿನ ನನ್ನ ಜೀವನದ ಸಂತೋಷದ ಕ್ಷಣ, ಸಾಮಾಜಿಕ ಕಾರ್ಯಗಳೆಂದರೆ ಶಾಲಾ ಕಾಲೇಜು ಕಟ್ಟಿಸುವುದು, ಸಮುದಾಯ ಭವನಗಳ ನಿರ್ಮಾಣ, ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ಇವೆಲ್ಲದರಲ್ಲೂ ಮುಖ್ಯವಾದುದು ಆರೋಗ್ಯ ಸೇವೆ. ಈ ಸುತ್ತಮುತ್ತಲೂ ಹತ್ತಾರು ಗ್ರಾಮಗಳಿವೆ ಇಲ್ಲಿ ಫ್ಯಾಕ್ಟರಿ ಆರಂಭಿಸಿದ್ದು ಅನುಕೂಲವಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಎಂದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಿಂತ ಹೆಚ್ಚು ಮುಖ್ಯ ವಾದುದು ಕಾರಣ ಅಲ್ಲಿ ಆರೋಗ್ಯಕ್ಕೆ ಬೇಕಾದ ಮುಂಜಾಗ್ರತಾ ಚಿಕಿತ್ಸೆ ಇಲ್ಲಿರುತ್ತದೆ. ಜನರಿಗೆ ಖಾಯಿಲೆ ಮುನ್ಸೂಚನೆ ಸಿಗುತ್ತಿದ್ದಂತೆ ಇಲ್ಲಿ ಗುರುತಿಸಿ, ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ, ಅಂತಹ ವಾತಾವರಣ ನಿರ್ಮಾಣಕ್ಕೆ ಗುಣಮಟ್ಟದ ಕಟ್ಟಡ ನಿರ್ಮಿಸಲಾಗಿದೆ ಎಂದರು.
Lokayukta Raid : ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ರೇಡ್ ಆಗ್ತಿರ್ಲಿಲ್ಲ, ಕೇಸ್ ಮುಚ್ಚಿ ಹಾಕ್ತಿದ್ರು: ಸಿ.ಟಿ.ರವಿ
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸದಸ್ಯೆ ವಿದ್ಯಾ ಬಸವರಾಜ್, ಮಧುಕುಮಾರ್ ರಾಜ್ ಅರಸ್, ಸಿಡಿಎ ಅಧ್ಯಕ್ಷ ಸಿ.ಆನಂದ್, ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ವಿದ್ಯಾ ಹಬ್ಸ್‌ರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹಿರಿಯ ಉಪಾಧ್ಯಕ್ಷ ಶಿವಶಂಕರ್ ಶರ್ಮ, ವಿದ್ಯಾ ಕಾಫಿ ಜನರಲ್ ಮ್ಯಾನೇಜರ್ ಜಯದೇವ್ ಅಲೆಗಾವಿ, ಡಿಎಚ್‌ಓ ಡಾ.ಮೇಶ್, ಡಾ.ಸಾಲ್ಡಾನಾ, ಕೇಶವಮೂರ್ತಿ, ಜಾನಯ್ಯ, ಜಗದೀಶ್, ಮಂಜುನಾಥ್, ರಾಜಕುಮಾರ್ ಇದ್ದರು.