ಸ್ಮಶಾನ ಜಾಗಕ್ಕೆ ಆಗ್ರಹಿಸಿ ತಮ್ಮಡಿಹಳ್ಳಿಯಲ್ಲಿ ಪ್ರತಿ​ಭ​ಟ​ನೆ

By Kannadaprabha News  |  First Published Aug 2, 2022, 11:53 AM IST
  • ಸ್ಮಶಾನ ಜಾಗಕ್ಕೆ ಆಗ್ರಹಿಸಿ ತಮ್ಮಡಿಹಳ್ಳಿಯಲ್ಲಿ ಪ್ರತಿ​ಭ​ಟ​ನೆ.
  • - ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವ
  • ತಹ​ಸೀ​ಲ್ದಾರ್‌ ವಿರುದ್ಧ ಆಕ್ರೋ​ಶ

- -


ಭದ್ರಾವತಿ (ಆ.2) : ತಾಲೂಕಿನ ಕಂಬದಾಳ್‌ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.22ರ 4 ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 1998-99ರಲ್ಲಿ ತಹಸೀಲ್ದಾರ್‌(Tahsildar) ಅವರು ಅಧಿಕೃತವಾಗಿ ಪಹಣಿ(Pahani)ಯಲ್ಲಿ ಗ್ರಾಮದ ಸರ್ವೆ ನಂ.22ರ 4 ಎಕರೆ ಸ್ಮಶಾನ ಜಾಗ ಎಂದು ನಮೂದಿಸಿದ್ದಾರೆ. ಆದರೂ ಸಹ ಕೆಲವರು ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಸಹ ಈ ಜಾಗ ನಮ್ಮದು ಎಂದು ಕಬಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಧಿಕಾರಿಗಳು ಹಾಗು ರಾಜಕಾರಣಿಗಳು ವರ್ತಿಸುತ್ತಿದ್ದಾರೆಂದು ಆರೋಪಿಸಲಾಯಿತು.

2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಲೋಕೇಶ್‌(Lokesh) ಅವರು ಮನವಿಗೆ ಸ್ಪಂದಿಸಿ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ಜೊತೆಗೆ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ ಗಡಿ ಗುರುತಿಸಿ ಅಳತೆ ಮಾಡುವಂತೆ ಹಾಗೂ ಒತ್ತುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್‌ ಅವರಿಗೆ ಆದೇಶಿಸಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

Tap to resize

Latest Videos

ಸ್ಮಶಾನಕ್ಕೆ ಮೀಸಲಿಟ್ಟ ಜಾಗ ಒತ್ತುವರಿ; ಪಂಚಾಯತಿ ಅಧಿಕಾರಿಗಳನ್ನೇ ಕೂಡಿ ಹಾಕಿ ಬೀಗ ಜಡಿದ ಗ್ರಾಮಸ್ಥರು

ಗ್ರಾಮಗಳಿಗೆ ಅಗತ್ಯವಿರುವ ಸ್ಮಶಾನ ಜಾಗ ಕಡ್ಡಾಯವಾಗಿ ಕಲ್ಪಿಸಿಕೊಡುವಂತೆ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಬಿ.ಆರ್‌.ಪಿ, ಗ್ಯಾರೇಜ್‌ ಕ್ಯಾಂಪ್‌, ಶಾಂತಿನಗರ ಗ್ರಾಮಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣ ಸ್ಮಶಾನ ಜಾಗ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು.

ಸಮಿತಿ ಅಧ್ಯಕ್ಷ ಬಿ.ಎನ್‌ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು. ಪ್ರಮುಖರಾದ ಶಶಿಕುಮಾರ್‌ ಗೌಡ, ಈ.ಕೃಷ್ಣ, ಅಭಿಮನ್ಯು, ಕೃಷ್ಣಮೂರ್ತಿ, ಜಿ.ಸಂತೋಷ್‌, ಎಲ್‌.ಬಿ.ನಂದಕುಮಾರ್‌, ಎಂ.ಬಿ.ವಿಶ್ವನಾಥ್‌, ಶ್ರೀನಿವಾಸ್‌, ನೇತ್ರಾ, ಜಲಜಾಕ್ಷಿ, ಮೀನಾ, ಸಿದ್ದಮ್ಮ, ಚಲುವಿ, ಭಾಗ್ಯ, ಲಕ್ಷ ್ಮಮ್ಮ, ಲಲಿತಾ, ಗಂಗಮ್ಮ, ಯಲ್ಲಮ್ಮ, ಎಂ.ಕೆ. ಪುಷ್ಪ, ವಾಣಿ, ವರಲಕ್ಷ್ಮೇ, ಮುನಿಯಮ್ಮ, ಸುಲೋಚನ, ಶಕೀಲ, ಮಹೇಶ್ವರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

BIG 3: ಬಳ್ಳಾರಿಯ ಮದಿರೆ ಗ್ರಾಮಸ್ಥರಿಗೆ ಕೊನೆಗೂ ಸಿಕ್ತು ಸ್ಮಶಾನಕ್ಕಾಗಿ ಜಾಗ!

ಭದ್ರಾವತಿ ತಾಲೂಕಿನ ಕಂಬದಾಳ್‌ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.22ರ 4 ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.

click me!