Latest Videos

ಕಲಬುರಗಿ: ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು, ಆಸ್ಪತ್ರೆ ಎದುರು ಧರಣಿ

By Kannadaprabha NewsFirst Published Feb 25, 2023, 9:30 PM IST
Highlights

ಶಿಶು ಹೆರಿಗೆ ಸಮಯದಲ್ಲೆ ಮೃತಪಟ್ಟಿದ್ದು, ತಮ್ಮ ಪ್ರಮಾದ ಮುಚ್ಚಿಹಾಕಲು ನಮಗೆ ಮುಂದಿನ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿ ಯಾಮಾರಿಸಿದ್ದಾರೆ ಎಂದು ಶಿಶುವಿನ ತಂದೆ ಕುತಬೋದ್ದಿನ್‌ ನಿರ್ಣಾ ಆರೋಪಿಸಿದ್ದಾರೆ. 

ಕಮಲಾಪುರ(ಫೆ.25):  ಹೆರಿಗೆ ಸಮಯದಲ್ಲಿ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಸಂಬಂಧಿಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಮುಜಾವರ ಗಲ್ಲಿಯ ಗರ್ಭಿಣಿ ಅಪ್ಸಾನಾ ಬೆಗಂ ಕುತಬೋದ್ದೀನ ನಿರ್ಣಾ ಬೆಳಗ್ಗೆ 10.30ಕ್ಕೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ 10.40ಕ್ಕೆ ಹೆರಿಗೆಯಾಗಿದೆ. ಗಂಡು ಮಗು ಜನಿಸಿದೆ. ಆದರೆ, ಮಗು ಅಸ್ವಸ್ಥಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಲು ಸಿಬ್ಬಂದಿ ತಿಳಿಸಿದ್ದಾರೆ. ಖಾಸಗಿ ವಾಹನದ ಮೂಲಕ ಕಲಬುರಗಿ ಗಚ್ಚಿನಮನಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನಂತರ ಶಿಶು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದರು.

ಜ್ಯೂನಿಯರ್‌ ಖರ್ಗೆ ಎದುರು ಕೇಸರಿ ಅಭ್ಯರ್ಥಿ ಯಾರು?: ತಂದೆ​ಯಂತೆ ಮಗ​ನನ್ನೂ ಸೋಲಿ​ಸಲು ಬಿಜೆಪಿ ರಣ ತಂತ್ರ

ಶಿಶು ಹೆರಿಗೆ ಸಮಯದಲ್ಲೆ ಮೃತಪಟ್ಟಿದ್ದು, ತಮ್ಮ ಪ್ರಮಾದ ಮುಚ್ಚಿಹಾಕಲು ನಮಗೆ ಮುಂದಿನ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿ ಯಾಮಾರಿಸಿದ್ದಾರೆ ಎಂದು ಶಿಶುವಿನ ತಂದೆ ಕುತಬೋದ್ದಿನ್‌ ನಿರ್ಣಾ ಆರೋಪಿಸಿದ್ದಾರೆ.
ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ನೇಮಿಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್‌ ಸತ್ತಾರ, ಶರಣು ಗೌರೆ, ತಯ್ಯಬ ಚೌದ್ರಿ, ಆನಂದ ಬೆಳಕೋಟಾ, ಪ್ರಶಾಂತ ಮಾನಕಾರ, ಕಲ್ಲಪ್ಪ ನವನಿಹಾಳ, ಚನ್ನವೀರ ದಸ್ತಾಪುರ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಟಿಎಚ್‌ಒ ಮಾರುತಿ ಕಾಂಬಳೆ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣ ಕುರಿತು ಮೇಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ವೈದ್ಯಾಧಿಕಾರಿ ವಿಜಯ ಸಾಮುವೆಲ್‌ ಇದ್ದರು.
ಸಿಪಿಐ ವಿ. ನಾರಾಯಣ, ಪಿಎಸ್‌ಐ ವಿಶ್ವನಾಥ ಮುದ್ದಾರೆಡ್ಡಿ, ಸಿಬ್ಬಂದಿಯರಾದ ಮನೋಜ ಸ್ವಾಮಿ, ರಾಮಲಿಂಗ ಮಡ್ಕಿ, ಶ್ರೀಮಂತ ಜಮಾದಾರ, ರಾಮಚಂದ್ರ, ಶರಣು ಮತ್ತಿತರರು ಸ್ಥಳಕ್ಕೆ ಆಗಮಿಸಿ ಬಂದೋಬಸ್‌್ತ ಒದಗಿಸಿದರು.

click me!