ದಾವಣಗೆರೆ: ಡಿ.1ಕ್ಕೆ ಪಾಲಿಕೆಗುತ್ತಿಗೆ ‌ಪೌರ ಕಾರ್ಮಿಕರ ಖಾಯಂಗೆ ಆಗ್ರಹಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ

By Ravi JanekalFirst Published Nov 25, 2023, 7:12 PM IST
Highlights

ರಾಜ್ಯಾದ್ಯಂತ ನೇರ ಪಾವತಿ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ವಾಹನ ಚಾಲಕರು, ನೀರು ಸರಬರಾಜು ಸಹಾಯಕರು ಹಾಗೂ ಸಹಾಯಕರನ್ನು ಕೂಡಲೇ ಖಾಯಂಗೊಳಿಸಲು ಆಗ್ರಹಿಸಿ ಡಿಸೆಂಬರ್ 1ರಂದು ರಾಜ್ಯಾದ್ಯಂತ  ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾರ್ಯಾಧ್ಯಕ್ಷ ಎಲ್.ಎಂ.ಹನುಮಂತಪ್ಪ ‌ ತಿಳಿಸಿದರು.

ವರದಿ: ವರದರಾಜ್ 

ದಾವಣಗೆರೆ (ನ.25): ರಾಜ್ಯಾದ್ಯಂತ ನೇರ ಪಾವತಿ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ವಾಹನ ಚಾಲಕರು, ನೀರು ಸರಬರಾಜು ಸಹಾಯಕರು ಹಾಗೂ ಸಹಾಯಕರನ್ನು ಕೂಡಲೇ ಖಾಯಂಗೊಳಿಸಲು ಆಗ್ರಹಿಸಿ ಡಿಸೆಂಬರ್ 1ರಂದು ರಾಜ್ಯಾದ್ಯಂತ  ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾರ್ಯಾಧ್ಯಕ್ಷ ಎಲ್.ಎಂ.ಹನುಮಂತಪ್ಪ ‌ ತಿಳಿಸಿದರು.

ರಾಜ್ಯ ಸರ್ಕಾರ ಕಳೆದ ಎರಡು ದಶಕಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೇ ಹಿಂದುಳಿದ ಸಮುದಾಯದ ನೌಕರರನ್ನು ನಗರಗಳನ್ನು ಸ್ವಚ್ಛತೆ ಮಾಡಲು ಗುತ್ತಿಗೆ ಪೌರಕಾರ್ಮಿಕರಾಗಿ, ಒಳಚರಂಡಿ ಸ್ವಚ್ಛತೆ ಹಾಗೂ ಒಣ ಕಸ ಹಾಗೂ ಹಸಿ ಕಸ ವಿಲೇವಾರಿ ಮಾಡಲು ಸಹಾಯಕರನ್ನು, ವಾಹನ ಚಾಲಕರನ್ನು, ನೀರು ಸರಬರಾಜು ಸಹಾಯಕರುಗಳನ್ನು ಗುತ್ತಿಗೆದಾರ ಎಂಬ ಮದ್ಯವರ್ತಿಗಳ ಮೂಲಕ ನೇಮಿಸಿ ಕೊಂಡಿರುವುದು ನಿಯಮಬಾಹಿರ ಎಂದು ಹೇಳಿದರು.

ಆಜಾನ್ ಸದ್ದು ಕೇಳಿಸುತ್ತಿದ್ದಂತೆ ಅರ್ಧಕ್ಕೆ ಮಾತು ನಿಲ್ಲಿಸಿ ಮೌನವಾಗಿ ಕುಳಿತ ಗೃಹಸಚಿವ!

ಕಾರ್ಮಿಕರಿಗೆ ನಿಯಮಾನುಸಾರ ನೀಡಬೇಕಾದ ಮೂಲಭೂತ ಸೌಕರ್ಯಗಳಾದ ಕನಿಷ್ಟ ವೇತನ, ಭವಿಷ್ಯ ನಿಧಿ, ಆರೋಗ್ಯ ವಿಮೆ. ಮಕ್ಕಳ ಶಿಕ್ಷಣ, ಉದ್ಯೋಗ ಭದ್ರತೆ ಮತ್ತು ಪೌರ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಸೂಕ್ತವಾದ ವಸತಿ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಗಳನ್ನು ಮಾಡದೆ ನಿರಂತರವಾಗಿ ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರಗಳು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಇಂತಹ ವಂಚನೆ, ನಿರ್ಲಕ್ಷ್ಯ ಮತ್ತು ಜಾತಿ ತಾರತಮ್ಯಗಳ ವಿರುದ್ಧ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪೌರ ಕಾರ್ಮಿಕರ ಮಹಾ ಸಂಘ ಕಳೆದ 20 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಸಹ ನೌಕರರ ಖಾಯಂ ಬೇಡಿಕೆ ಈಡೇರಿಲ್ಲ ಎಂದು ತಿಳಿಸಿದರು.

ಇದಲ್ಲದೇ ‌ದಾವಣಗೆರೆ ಮಹಾ ನಗರ ಪಾಲಿಕೆಯಲ್ಲಿ 119 ಜನ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿರುತ್ತಾರೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು 134 ಜನ ನೇರ ಪಾವತಿ ಪೌರ ಕಾರ್ಮಿಕರನ್ನು ಏಕ ಕಾಲದಲ್ಲಿ ಖಾಯಂಗೊಳಿಸಲು ಸರ್ಕಾರಕ್ಕೆ ಪತ್ರ ನೀಡಿವಾಹನ ಚಾಲಕರು, ಯುಜಿಡಿ ಸಹಾಯಕರು, ವಾಲ್ಮನ್‌ಗಳನ್ನು ಖಾಯಂ ಮಾಡಬೇಕೆಂದು ಒತ್ತಾಯಿಸಿದರು. 

ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ

ಯು.ಜಿ.ಡಿ. ಸಹಾಯಕರು, ವಾಲ್ಮನ್‌ಗಳು, ವಾಹನ ಚಾಲಕರ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ನೇರಪಾವತಿ ಅಡಿ ಕೆಲಸಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆದರೆ ಉಳಿದ ಅನೇಕ ಜಿಲ್ಲೆಗಳಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದಿರುವುದಿಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಎಲ್ಲಾ ನೇರ ಪಾವತಿ ಪೌರ ಕಾರ್ಮಿಕರನ್ನು ಏಕ ಕಾಲದಲ್ಲಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿ ಡಿಸೆಂಬರ್ 1ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

click me!