ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನ ಎರಡನೇ ದಿನ 'ಡಿ' ಗುಂಪಿನಲ್ಲಿ ಆತಿಥೇಯ ಮಂಗಳೂರು ವಿವಿ ತಂಡ ಸತತ ಮೂರನೇ ಗೆಲುವಿನೊಂದಿಗೆ ಮೊದಲ ತಂಡವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಉಡುಪಿ (ನ.25): ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನ ಎರಡನೇ ದಿನ 'ಡಿ' ಗುಂಪಿನಲ್ಲಿ ಆತಿಥೇಯ ಮಂಗಳೂರು ವಿವಿ ತಂಡ ಸತತ ಮೂರನೇ ಗೆಲುವಿನೊಂದಿಗೆ ಮೊದಲ ತಂಡವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ದಕ್ಷಿಣ ವಲಯದ ರನ್ನರ್ ಅಪ್ ಆಗಿರುವ ಮಂಗಳೂರು ವಿವಿ(Mangaluru University) ಗುರುವಾರ ಡಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ರಾಜಸ್ತಾನದ ಎಸ್‌ಜೆಜೆಟಿ ತಂಡವನ್ನು ಏಕಪಕ್ಷೀಯವಾಗಿ ಒಮ್ಮೆಟ್ಟಿಸಿದ್ದರೆ, ಶುಕ್ರವಾರ ಪೂರ್ವ ವಲಯ ಚಾಂಪಿಯನ್ ತಂಡವಾದ ಒಡಿಶಾದ ಪುರಿ ಶ್ರೀಜಗನ್ನಾಥ ಸಂಸ್ಕೃತ ವಿವಿಯನ್ನು 54-24 ಅಂಕಗಳ ಅಂತರದಿಂದ ಪರಾಭವಗೊಳಿಸಿ ಅಜೇಯವಾಗುಳಿಯಿತು.
ಇಂದು ಗಾರ್ಡನ್ ಸಿಟಿಯಲ್ಲಿ ಕಂಬಳದ ಕಲರವ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು..!
ಮಂಗಳೂರು ವಿವಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೊಹಾಲಿಯ ಚಂಡೀಗಢ ವಿವಿ ಎದುರು ಆಡಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಆ ತಂಡವನ್ನು ಅನರ್ಹಗೊಳಿಸಿದ ಕಾರಣ ಮಂಗಳೂರು ವಿವಿ ಪಂದ್ಯವನ್ನಾಡದೇ ಸತತ ಮೂರನೇ ಜಯ ದಾಖಲಿಸಿತು.
ಪಂದ್ಯವನ್ನಾಡಲು ಪ್ರತಿ ತಂಡದಲ್ಲಿ 10 ಆಟಗಾರರು ಕಡ್ಡಾಯವಾಗಿ ಇರಬೇಕಿದ್ದು, ಚಂಡೀಗಢ ವಿವಿ ತಂಡದಲ್ಲಿ ಕೇವಲ 9 'ಮಂದಿ ಮಾತ್ರ ಇದ್ದರು. ಇದರಿಂದ ನಿಯಮದಂತೆ ಆ ತಂಡವನ್ನು ಆಟದಿಂದ ಅನರ್ಹಗೊಳಿಸಲಾಯಿತಲ್ಲದೇ ಮಂಗಳೂರು ವಿವಿಯನ್ನು ವಿಜಯೀ ತಂಡವೆಂದು ಘೋಷಿಸಲಾಯಿತು.
ದಿನದ ಉಳಿದ ಪಂದ್ಯಗಳಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಹರ್ಯಾಣ ರೋಹಕ್‌ನ ಮಹರ್ಷಿ ದಯಾನಂದ ವಿವಿ ಸಿ ಗುಂಪಿನಲ್ಲಿ ಅದಮಾಸ್ ವಿವಿಯಿಂದ ವಾಕ್‌ಓವರ್ ಪಡೆದು ಸತತ ಎರಡನೇ ಜಯ ದಾಖಲಿಸಿತು. ಗುರುವಾರ ಅದು ಮೈಸೂರು ವಿವಿಯನ್ನು ಸೋಲಿಸಿತ್ತು.
ಅದೇ ರೀತಿ ಬಿ ಗುಂಪಿನಲ್ಲಿ ಉತ್ತರ ಪ್ರದೇಶದ ವೀರ್ ಬಹಾದುರ್ ಸಿಂಗ್ ಪೂರ್ವಾಂಚಲ ವಿವಿ ತಂಡ ಶುಕ್ರವಾರ ತನ್ನ ಎದುರಾಳಿ ಇಂದೋರ್‌ನ ದೇವಿ ಅಹಲ್ಯಾ ವಿವಿಯಿಂದ ವಾಕ್‌ಓವರ್ ಜಯ ಪಡೆಯಿತು. ಉತ್ತರಪ್ರದೇಶ ತಂಡಕ್ಕಿದು ಮೊದಲ ಗೆಲುವಾಗಿದೆ.
ರಾಜ್ಯ ರಾಜಧಾನಿಯಲ್ಲೂ ಕರಾವಳಿಯ ಕ್ರೀಡೆಯ ಕಂಪು..! ಪುನೀತ್-ರಾಜ್ ಹೆಸರಲ್ಲಿ ನಡೆಯುತ್ತೆ ಅದ್ಧೂರಿ ಕಂಬಳ..!
ಉಳಿದಂತೆ ಎ ಗುಂಪಿನಲ್ಲಿ ಪಂಜಾಬ್‌ನ ಗುರು ಕಾಶಿ ವಿವಿ, ಆಂಧ್ರ ಪ್ರದೇಶ ಕಡಪದ ಯೋಗಿ ವೇಮನ ವಿವಿಯನ್ನು 53-26 ಅಂಕಗಳ ಅಂತರದಿಂದ ಸೋಲಿಸಿದರೆ, ಔರಂಗಬಾದ್‌ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿವಿ, ಪೂರ್ವವಲಯದ ಉತ್ತರ ಪ್ರದೇಶ ಬಾಲ್ಲಿಯಾದ ಜನನಾಯಕ ಚಂದ್ರಶೇಖರ ವಿವಿಯನ್ನು 75-40 ಅಂಕಗಳಿಂದ ಹಿಮ್ಮೆಟ್ಟಿಸಿತು.
ದಿನದ ಮತ್ತೊಂದು ಪಂದ್ಯದಲ್ಲಿ ಚೆನ್ನೈನ ವೆಲ್ಸ್ ಇನ್ ಸ್ಟಿಟ್ಯೂಟ್ ಆಫ್ ಸಯನ್ಸ್ ಆ್ಯಂಡ್ ಟೆಕ್ನಾಲಜಿ, ಹರಿಯಾಣ ಭಿವಾನಿಯ ಚೌಧುರಿ ಬನ್ಸಿಲಾಲ್ ವಿವಿ ತಂಡವನ್ನು 39-32 ಅಂಕಗಳಿಂದ ಸೋಲಿಸಿ ಸತತ ಎರಡನೇ ಜಯ ಪಡೆಯಿತು.