Davanagere: ದಿವಂಗತ ತಿಪ್ಪೇಸ್ವಾಮಿ ಸಮಾಧಿ ನಾಶಕ್ಕೆ ತೀವ್ರ ವಿರೋಧ: ಪ್ರತಿಭಟನೆ

By Govindaraj S  |  First Published Nov 24, 2022, 8:46 PM IST

ಇಲ್ಲಿನ ವಿದ್ಯುತ್ ಕಾಲೋನಿಯಲ್ಲಿ ಡಾ.ಬಿ.ಎಂ.ತಿಪ್ಪೇಸ್ವಾಮಿ ಸಮಾಧಿ ನಾಶ ಮಾಡಿರುವುದಕ್ಕೆ ದಾವಣಗೆರೆಯಲ್ಲಿ ದಲಿತ ಸಂಘಟನೆಗಳು ಹಾಗು ಡಾ.ಬಿ.ಎಂ.ತಿಪ್ಪೇಸ್ವಾಮಿ ಕುಟುಂಬಸ್ಥರಿಂದ ಪ್ರತಿಭಟನೆ ತೀವ್ರಗೊಂಡಿದೆ. 


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ 

ದಾವಣಗೆರೆ (ನ.24): ಇಲ್ಲಿನ ವಿದ್ಯುತ್ ಕಾಲೋನಿಯಲ್ಲಿ ಡಾ.ಬಿ.ಎಂ.ತಿಪ್ಪೇಸ್ವಾಮಿ ಸಮಾಧಿ ನಾಶ ಮಾಡಿರುವುದಕ್ಕೆ ದಾವಣಗೆರೆಯಲ್ಲಿ ದಲಿತ ಸಂಘಟನೆಗಳು ಹಾಗು ಡಾ.ಬಿ.ಎಂ.ತಿಪ್ಪೇಸ್ವಾಮಿ ಕುಟುಂಬಸ್ಥರಿಂದ ಪ್ರತಿಭಟನೆ ತೀವ್ರಗೊಂಡಿದೆ. ಇಂದು ನಗರದಲ್ಲಿ ದಿ.ಡಾ.ಬಿ.ಎಂ.ತಿಪ್ಪೇಸ್ವಾಮಿ ಸಮಾಧಿ ಸ್ಥಳದಿಂದ ದಾವಣಗೆರೆ ಎಸಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ವಿದ್ಯುತ್ ನಗರದಿಂದ ಆರಂಭವಾದ ಮೆರವಣಿಗೆ ದಾವಣಗೆರೆ ಹದಡಿ ರಸ್ತೆಯಲ್ಲಿ ಸಾಗಿ ವಿದ್ಯಾರ್ಥಿ ಭವನ ನಂತರ ಅಂಬೇಡ್ಕರ್ ಸರ್ಕಲ್‌ನಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮೂರ್ತಿಗೆ ಮಾಲೆಯನ್ನು ಹಾಕಿ ಅಲ್ಲಿಯೇ ಘಟನೆ ಖಂಡಿಸಿ ಹಲವು ಮುಖಂಡರು ಮಾತನಾಡಿದರು.  

Latest Videos

undefined

ಮಾಜಿ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷ ಸಿ ಎಸ್ ದ್ವಾರಕಾನಾಥ್ , ಕೃಷ್ಣಪ್ಪ ಬಣದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಮೂರ್ತಿ,  ನಿವೃತ್ತ ಎಎಸ್ಪಿ ರವಿನಾರಾಯಣ್ ಸಾಮಾಜಿಕ ಸಂಘರ್ಷ ಸಮಿತಿ ಮುಖಂಡ ಮಲ್ಲೇಶ್, ಮಾಜಿ ಪಾಲಿಕೆ ಸದಸ್ಯ ಹಾಲೇಶ್ ಎಲ್ಲಾ ದಲಿತ ಸಂಘಟನೆಗಳ ಮುಖಂಡರು, ನೂರಾರು ತಿಪ್ಪೇಸ್ವಾಮಿ ಅಭಿಮಾನಿಗಳು ಸಾಹಿತಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡಾ.ಬಿ.ಎಂ.ತಿಪ್ಪೇಸ್ವಾಮಿ ಸಮಾಧಿ ಸೇರಿದಂತೆ ಅವರ ಪತ್ನಿ ಅವರ ಇಬ್ಬರು ಮಕ್ಕಳ ಸಮಾಧಿಗಳು ಅಲ್ಲಿದ್ದವು. ವಿದ್ಯುತ್ ನಗರದಲ್ಲಿ ಅವರ 20 ಗುಂಟೆ ಖಾಸಗಿ ಜಮೀನಿನಲ್ಲಿದ್ದ ಅವರ ಸಮಾಧಿಗಳಿದ್ದವು.

ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮುರುಘಾ ಶ್ರೀ ಪೀಠ ತ್ಯಾಗ ವಿಚಾರ ಚರ್ಚೆ: ಅಣಬೇರು ರಾಜಣ್ಣ

ನವೆಂಬರ್ 20ರಂದು ಇದ್ದಕ್ಕಿದ್ದಂತೆ ಜೆಸಿಬಿಗಳನ್ನು ತರಿಸಿ ಅವುಗಳನ್ನು ಗಣೇಶ್ ಹುಲ್ಮನಿಯವರು ನೆಲಸಮ ಮಾಡಿದ್ದಾರೆ. ನಾನು ಈ ಜಮೀನು ಖರೀದಿಸಿದ್ದೇನೆಂದು ಇದು ಯಾರದ್ದು ಎಂದು ಗೊತ್ತಿಲ್ಲ ನೀವು ತಡೆಯಲು ಯಾರು ಹೀಗೆ ಮಾತನಾಡಿ ಡಾ.ಬಿ.ಎಂ.ತಿಪ್ಪೇಸ್ವಾಮಿ ಸಮಾಧಿ ನೆಲಸಮ ಮಾಡಿದ್ದಾರೆ. ಸ್ಥಳದಲ್ಲಿ ದೌರ್ಜನ್ಯ ಮಾಡಿ ನಮ್ಮ ಮೇಲೆ ಹಲ್ಲೆಗು ಮುಂದಾಗಿದ್ದಾರೆ. ದಾಖಲೆ ಪತ್ರಕ್ಕಿಂತ ಸಮಾಧಿ ಜೊತೆ ಒಂದು ಅವಿನಾಭಾವ ಸಂಬಂಧ ಇದೆ. ಮಾನವೀಯ ಸಂಬಂಧಕ್ಕೆ ಬೆಲೆ ಕೊಡಬೇಕಾಗಿತ್ತು. ನಮ್ಮನ್ನ ಕರೆಸಿ ಮೊದಲು ಮಾತನಾಡಿ ಆ ಬಗ್ಗೆ ಚರ್ಚಿಸಬೇಕಿತ್ತು. ಆದ್ರೆ ಅದ್ಯಾವುದನ್ನು ಆ ವ್ಯಕ್ತಿ ಕೇಳಲಿಲ್ಲ ಎಂದ  ಡಾ.ಬಿ.ಎಂ.ತಿಪ್ಪೇಸ್ವಾಮಿಯವರ ಮಗಳು ಬಿ.ಟಿ ಜಾಹ್ನವಿ ಸ್ಥಳದಲ್ಲಿ ಕಣ್ಣೀರು ಹಾಕಿದ್ದಾರೆ. 

ಸಮಾಧಿ ಹೊಡೆದಿರುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅದ್ಯಕ್ಷ ಸಿ ಎಸ್ ದ್ವಾರಕನಾಥ್ ಸರ್ಕಾರ, ಕಾನೂನು ಸುವ್ಯವಸ್ಥೆಯ ಭಯ ಇಲ್ಲದಿದ್ದಾಗ ಇಂತಹ ಘಟನೆಗಳು ನಡೆಯುತ್ತಿವೆ. ಸರ್ಕಾರ ವ್ಹೀಕ್ ಆಗಿರುವುದಕ್ಕೆ ಈ ಘಟನೆ ಸಾಕ್ಷಿ. ನಾಡು ಕಂಡ  ಪ್ರಸಿದ್ಧ ನೇತ್ರ ತಜ್ನರಾಗಿದ್ದ ಡಾ ಬಿ ಎಂ ತಿಪ್ಪೇಸ್ವಾಮಿ ಭರಮಸಾಗರದ ಮಾಜಿ ಶಾಸಕರಾಗಿದ್ದು ಹಾಗು ಕೆಪಿಎಸ್‌ಸಿ ಸದಸ್ಯರಾಗಿದ್ದರು. ಲಂಕೇಶ್ ಅಂತ ಶ್ರೇಷ್ಠ ಬರಹಗಾರರು ಬಿ ಎಂ ತಿಪ್ಪೇಸ್ವಾಮಿಯವರ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ದಲಿತ ಸಮಾಜದ ಸಾಕ್ಷಿ ಪ್ರಜ್ನೆಯಾಗಿರುವ ಡಾ ಬಿ ಎಂ ತಿಪ್ಪೇಸ್ವಾಮಿ ಶ್ರೇಷ್ಠ ಸಮಾಜಸುಧಾರಕರು ಹೌದು. 

Tumakuru: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಾ.ಜಿ.ಪರಮೇಶ್ವರ್‌

ಅಂತವರ ಸಮಾಧಿ ಸ್ಮಾರಕವಾಗಬೇಕಿತ್ತು. ಆದ್ರೆ ಭೂಗಳ್ಳರು ಅದನ್ನು ಹೊಡೆದುಹಾಕಿದ್ದಾರೆ. ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅದ್ಯಕ್ಷರಾದ ಸಿ ಎಸ್ ದ್ವಾರಕನಾಥ್ ಒತ್ತಾಯಿಸಿದ್ದಾರೆ. ಇನ್ನು ಒಂದು ವಾರದೊಳಗೆ ಘಟನೆಗೆ ಕಾರಣರಾದವರನ್ನು ಬಂಧಿಸದಿದ್ದರೇ ಪ್ರತಿ ಜಿಲ್ಲಾ ಕೇಂದ್ರದಲ್ಲಿ ದಲಿತ ಸಂಘಟನೆಗಳು  ಪ್ರತಿಭಟನೆ ನಡೆಸಲಿವೆ. 2013ರಿಂದ 20  ಗುಂಟೆ ಜಮೀನಿಗೆ ಸಂಬಂಧಿಸಿದಂತೆ  ದಾವಣಗೆರೆ ಮಹಾನಗರ ಪಾಲಿಕೆ ಹಾಗು ಕಂದಾಯ ಇಲಾಖೆಯಲ್ಲಿ ದಾಖಲೆಗಳು ರೆಡಿಯಾಗಿವೆ. ಅವುಗಳ ಹಿಂದೆ ಯಾರಿದ್ದಾರೆ ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ಡಾ.ಬಿ.ಎಂ.ತಿಪ್ಪೇಸ್ವಾಮಿಯರ ಸಮಾಧಿ ಸ್ಥಳದಲ್ಲಿ  ಸ್ಮಾರಕ ನಿರ್ಮಾಣವಾಗಬೇಕೆಂದು ಆಗ್ರಹಿಸಿದ್ದಾರೆ.

click me!