ಡಿಕೆ ಶಿವಕುಮಾರ್ ಪರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಂಗಳೂರು [ಸೆ.11]: ಬೆಂಗಳೂರು [ಸೆ.11]: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವು ದನ್ನು ಖಂಡಿಸಿ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಪ್ರತಿ ಭಟನಾ ಮೆರವಣಿಗೆ ನಡೆಸುತ್ತಿರುವ ಹಿನ್ನೆಲೆ ಯಲ್ಲಿ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಬುಧವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ವರೆಗೆ ಪ್ರತಿಭಟನೆ ನಡೆಯಲಿದ್ದು, ಪ್ರತಿಭಟನಾ ಮೆರವಣಿಗೆ ನಡೆಯುವ ರಸ್ತೆಗಳಲ್ಲಿ ವಾಹನ ಸವಾರರು ಹೋಗದೆ ಪರ್ಯಾಯ ವ್ಯವಸ್ಥೆಗೆ ಸಹಕರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮನವಿ ಮಾಡಿದ್ದಾರೆ.
‘ಡಿಕೆಶಿ ಬಂಧನಕ್ಕೆ ಜಾತಿ ಬಣ್ಣ ನಾಚಿಕೆಗೇಡು’
ಅಲ್ಲದೆ, ಈ ರಸ್ತೆಗಳಲ್ಲಿ ಯಾವುದೇ ಆ್ಯಂಬುಲೆನ್ಸ್‌ಗಳು ಹೋಗದಂತೆ ಎಲ್ಲಾ ಆಸ್ಪತ್ರೆಗಳಿಗೂ ಸ್ಥಳೀಯ ಸಂಚಾರ ಠಾಣೆಗಳ ಮೂಲಕ ಸೂಚನೆ ನೀಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಇಲ್ಲಿ ಪಾರ್ಕಿಂಗ್ ಮಾಡಿ!
ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆವರಣ, ಬನ್ನಪ್ಪ ಪಾರ್ಕ್ (ದ್ವಿಚಕ್ರ ವಾಹನಗಳಿಗೆ ಮಾತ್ರ), ವೈಎಂಸಿಎ ಮೈದಾನ, ನೃಪತುಂಗ ರಸ್ತೆ, ಕನಕಪುರ ಕಡೆಯಿಂದ ಬರುವ ವಾಹನಗಳಿಗೆ ಆರ್ಮುಗಂ ಸರ್ಕಲ್, ಪಟಾಲಮ್ಮ ರಸ್ತೆ, ಹೋಂ ಸ್ಕೂಲ್ ಜಂಕ್ಷನ್, ನಾರಾಯಣ ರಸ್ತೆ, ಕೆ.ಆರ್.ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಬುಲ್ ಟೆಂಪ್ ರಸ್ತೆ (ಉಮಾ ಚಿತ್ರ ಮಂದಿದರವರೆಗೆ), ಮರಾಠ ಹಾಸ್ಟೆಲ್, ಶಂಕರಪುರಂ ಪಿಎಸ್‌ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಪ್ಯಾಲೇಸ್ ರಸ್ತೆಯಲ್ಲಿ ಒಂದು ಬದಿ ಹಾಗೂ ಎಲ್‌ಟಿಪಿ ರಸ್ತೆಯ ಒಂದು ಬದಿ, ಶೇಷಾದ್ರಿ ರಸ್ತೆ, ಲಕ್ಷ್ಮಣ ಪುರಿ ಮೇಲ್ಸೇತುವೆ ಕೆಳಗಡೆ ಇರುವ ಧನ್ವಂತ್ರಿ ರಸ್ತೆಯ ಒಂದು ಬದಿಯಲ್ಲಿ ತಲಾ 20 ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಇಲ್ಲಿ ವಾಹನ ನಿಲುಗಡೆ ನಿಷೇಧ
ಜೆ.ಸಿ.ರಸ್ತೆ, ಶಿವಾಜಿ ಜಂಕ್ಷನ್‌ನಿಂದ ಟೌನ್‌ಹಾಲ್, ಎನ್.ಆರ್.ರಸ್ತೆ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತದ ವರೆಗೆ, ನೃಪತುಂಗ ರಸ್ತೆ, ಕೆ.ಆರ್.ವೃತ್ತದಿಂದ ಪೊಲೀಸ್ ಕಾರ್ನರ್ ತನಕ, ಪಿ.ಕಾಳಿಂಗರಾವ್ ರಸ್ತೆ, ಎನ್.ಆರ್.ಜಂಕ್ಷನ್ ನಿಂದ ಸುಬ್ಬಯ್ಯ ವೃತ್ತದವರೆಗೆ ನಿಷೇಧ ಮಾಡಲಾಗಿದೆ.
ಕಸ್ತೂರಬಾ ರಸ್ತೆ, ಹಡ್ಸನ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ವರೆಗೆ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಕ್ವೀನ್ಸ್ ವೃತ್ತ, ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್, ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತ, ಕ್ವೀನ್ಸ್ ವೃತ್ತ, ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಬಿ.ಆರ್. ಜಂಕ್ಷನ್, ಬಾಳೇಕುಂದ್ರಿ ವೃತ್ತ, ಶೇಷಾದ್ರಿ ರಸ್ತೆ, ಮಹಾರಾಣಿ ವೃತ್ತದಿಂದ ಕೆ.ಆರ್.ವೃತ್ತ, ಹಳೇ ಅಂಚೆ ಕಚೇರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ವೃತ್ತ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತದಿಂದ ಮೌರ್ಯ ಜಂಕ್ಷನ್, ಟಿ.ಚೌಡಯ್ಯ ರಸ್ತೆ, ಕಾವೇರಿ ಜಂಕ್ಷನ್ ನಿಂದ ರಾಜಭವನ ಜಂಕ್ಷನ್, ರಿಚ್‌ಮಂಡ್ ವೃತ್ತದಿಂದ ಟ್ರಿನಿಟಿ ವೃತ್ತ, ರೆಸಿಡೆನ್ಸಿ ರಸ್ತೆ, ಮೆಯೋ ಹಾಲ್ ನಿಂದ ರಿಚ್‌ಮಂಡ್ ವೃತ್ತ, ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರ, ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ, ಎಸ್.ಜೆ.ಪಿ. ರಸ್ತೆ, ಮಾರ್ಕೆಟ್ ನಿಂದ ಟೌನ್‌ಹಾಲ್ ವೃತ್ತದ ವರೆಗೆ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ.