ಮಾವುತರ ಜೊತೆ ಉಪಾಹಾರ ಸವಿದ ಸೋಮಣ್ಣ!

By Web DeskFirst Published Sep 11, 2019, 8:03 AM IST
Highlights

ಗಜಪಡೆ ಮಾವುತರು, ಕಾವಾಡಿಗಳಿಗೆ ಉಸ್ತುವಾರಿ ಸಚಿವರಿಂದ ಉಪಾಹಾರ| ಮೈಸೂರು ಅರಮನೆ ಆವರಣದಲ್ಲಿ ದಸರಾ ಗಜಪಡೆ ಮಾವುತರು ಮತ್ತು ಕಾವಾಡಿಗಳಿಗೆ ಹೋಳಿಗೆ ಬಡಿಸಿದಸಚಿವ ವಿ. ಸೋಮಣ್ಣ| ಶಾಸಕ ಎಸ್‌.ಎ. ರಾಮದಾಸ್‌, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಮೇಯರ್‌ ಪುಷ್ಪಲತಾ ಜಗನ್ನಾಥ್‌ ಸಾಥ್

ಮೈಸೂರು[ಸೆ.11]: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯ ಮಾವುತರು ಮತ್ತು ಕಾವಾಡಿ ಕುಟುಂಬಗಳಿಗೆ ಅರಮನೆ ಆವರಣದಲ್ಲಿ ಮಂಗಳವಾರ ಬೆಳಗಿನ ಉಪಾಹಾರ ಕೂಟವನ್ನು ಆಯೋಜಿಸಲಾಗಿತ್ತು.

ಮೈಸೂರು ಅರಮನೆ ಮಂಡಳಿಯು ವ್ಯವಸ್ಥೆ ಮಾಡಿದ್ದ ಈ ಉಪಾಹಾರ ಕೂಟದಲ್ಲಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಮಾವುತರಿಗೆ ಹೋಳಿಗೆ ಬಡಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾವುತರು, ಕಾವಾಡಿಗಳೊಂದಿಗೆ ಕುಳಿತು ಉಪಾಹಾರ ಸೇವಿಸಿದರು.

ದಸರಾ ಮೆರವಣಿಗೆಗೂ ಮುನ್ನವೇ ಕಾಡಿಗೆ ಮರಳಿದ ಆನೆ

ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರು ತಟ್ಟೆಇಡ್ಲಿ- ಚಟ್ನಿ, ಅವರೆಬೇಳೆ ಕೂಟು, ಉದ್ದಿನ ವಡೆ, ಖಾರ ಪೊಂಗಲ್‌- ಹುಳಿ ಚಟ್ನಿ, ಖಾರಬಾತ್‌, ಬೇಳೆ ಹೋಳಿಗೆ- ತುಪ್ಪ, ಕಾಫಿ, ಟೀ ಸವಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ. ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಎಚ್‌. ಮಂಜುನಾಥ್‌, ರಾಜ್ಯ ಕಾರ್ಯದರ್ಶಿ ಎಂ. ರಾಜೇಂದ್ರ, ಜಿಪಂ ಸಿಇಒ ಕೆ. ಜ್ಯೋತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ, ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ, ಎಂಡಿಎ ಆಯುಕ್ತ ಕಾಂತರಾಜು, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ, ಡಿಸಿಪಿ ಎಂ. ಮುತ್ತುರಾಜು, ಎಸ್ಪಿ ರಿಶ್ಯಂತ್‌, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಮಣ್ಯಂ, ಎಸಿಪಿ ಚಂದ್ರಶೇಖರ್‌, ಡಿಸಿಎಫ್‌ ಅಲೆಕ್ಸಾಂಡರ್‌, ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು ಮೊದಲಾದವರು ಇದ್ದರು.

click me!