ವಿರೋಧದ ಮಧ್ಯೆ ಬೆಂಗ​ಳೂರು-ಮೈಸೂರು ಹೆದ್ದಾರಿ ಟೋಲ್‌ ಸಂಗ್ರಹ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

By Girish Goudar  |  First Published Mar 14, 2023, 8:10 AM IST

ಟೋಲ್ ಸಂಗ್ರಹಣೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ. ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ನವನಿರ್ಮಾಣ ವೇದಿಕೆ, ಜನ ಸೈನ್ಯ ವೇದಿಕೆ, ಕನ್ನಡಿಗರ ರಕ್ಷಣಾ ವೇದಿಕೆ, ಕರುನಾಡ ಸೇನೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ. 


ಬೆಂಗಳೂರು(ಮಾ.14):  ತೀವ್ರ ವಿರೋಧದ ಮಧ್ಯೆ ಬೆಂಗ​ಳೂರು-ಮೈಸೂರು ಎಕ್ಸಪ್ರೆಸ್‌ ಹೆದ್ದಾ​ರಿ​ಯಲ್ಲಿ ಇಂದಿನಿಂದ ಟೋಲ್‌ ವಸೂಲಿ ಆರಂಭವಾಗಿದೆ. ಹೀಗಾಗಿ ಟೋಲ್ ಸಂಗ್ರಹಣೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ. ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ನವನಿರ್ಮಾಣ ವೇದಿಕೆ, ಜನ ಸೈನ್ಯ ವೇದಿಕೆ, ಕನ್ನಡಿಗರ ರಕ್ಷಣಾ ವೇದಿಕೆ, ಕರುನಾಡ ಸೇನೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ. 

ಟೋಲ್ ಸಂಗ್ರಹಣೆಗೆ ಸ್ಥಳೀಯರು ಹಾಗೂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು. ತೀವ್ರ ವಿರೋಧದ ನಡುವೆಯೂ ರಾಷ್ಟ್ರೀಯ ಪ್ರಾಧಿಕಾರ ಟೋಲ್‌ ಸಂಗ್ರಹಕ್ಕೆ ಮುಂದಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ. 

Tap to resize

Latest Videos

ಬೆಂಗಳೂರು ಮೈಸೂರು ಹೆದ್ದಾರಿ ಟೋಲ್‌ಗೆ ಪ್ರಕಾಶ್‌ ರಾಜ್‌ ವಿರೋಧ: ರಸ್ತೆ ಹಾಕ್ಸಿದ್‌ ನಮ್‌ ದುಡ್ಡು- ನಾವೇ ಟೋಲ್‌ ಕಟ್ಟಬೇಕು

ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಜರ್ತರು ಜಮಾವಣೆಗೊಳ್ಳುತ್ತಿದ್ದಾರೆ. ಪ್ರತಿಭಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸುಮಾರು 150 ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. 1 ಎಸಿಪಿ, 6 ಪಿಐ, 5 ಪಿಎಸ್‌ಐ ಸೇರಿದಂತೆ 150ಕ್ಕೂ ಹೆಚ್ಚು ಸಿಬ್ಬಂದಿ, 1 ಕೆಎಸ್ಆರ್‌ಪಿ ಮತ್ತು 2 ಬಸ್‌ಗಳನ್ನ ನಿಯೋಜಿಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಎಎಬಿ ಮಾಜಿ ಅಧ್ಯಕ್ಷ ಎಪಿ ರಂಗನಾಥ್ ಆಗಮಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದ್ದರು. ಈ ಹಿಂದೆ ಮಾಚ್‌ರ್‍ 1ರಿಂದಲೇ ಟೋಲ್‌ ಸಂಗ್ರಹಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಅದಕ್ಕೆ ಸಾಕಷ್ಟುವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹವನ್ನು ಮಾರ್ಚ್‌ 14ಕ್ಕೆ ಮುಂದೂಡಲಾಗಿತ್ತು. ಈ ಮಧ್ಯೆ, ಸೋಮವಾರ ಈ ಬಗ್ಗೆ ಆದೇಶ ಹೊರಡಿಸಿರುವ ಪ್ರಾಧಿಕಾರ, ಇಂದು ಬೆಳಗ್ಗೆ 8 ಗಂಟೆಯಿಂದ ಟೋಲ್‌ ಸಂಗ್ರಹ ಆರಂಭವಾಗಲಿರುವುದಾಗಿ ತಿಳಿಸಿದೆ.

ಬೆಂಗಳೂರಿನಿಂದ-ನಿಡಘಟ್ಟದವರೆಗೆ ಸುಮಾರು 56 ಕಿ.ಮೀ. ರಸ್ತೆಗೆ ನಾಳೆಯಿಂದ ಟೋಲ್‌ ಸಂಗ್ರಹ ಆರಂಭವಾಗಲಿದ್ದು, ಟೋಲ್‌ ದರ ಹೀಗಿದೆ.

ವಾಹನ ಮಾದರಿ ಏಕಮುಖ ಶುಲ್ಕ ದ್ವಿಮುಖ ಸಂಚಾರ ಸ್ಥಳೀಯ ವಾಹನಗಳಿಗೆ ತಿಂಗಳ ಪಾಸ್‌

ಕಾರು/ಜೀಪ್‌/ವ್ಯಾನ್‌ 135 205 70 4525
ಲಘು ವಾಣಿಜ್ಯ ವಾಹನ/ಮಿನಿಬಸ್‌ 220 330 110 7315
ಬಸ್‌/ಟ್ರಕ್‌ 460 690 230 15325
ಮೂರು ಅಕ್ಸೆಲ್‌ ವಾಹನ 500 750 250 16715
ಭಾರಿ ನಿರ್ಮಾಣ ವಾಹನ 720 1080 360 24030
ಅತಿ ಗಾತ್ರದ ವಾಹನ 880 1315 440 29255
 ಕಾರು, ಜೀಪು, ವ್ಯಾನುಗಳಿಗೆ

ಏಕಮುಖ ಸಂಚಾರಕ್ಕೆ 135ರು.
 ಅದೇ ದಿನ ಮರು ಸಂಚಾರಕ್ಕೆ 205ರು.
 ಸ್ಥಳೀಯ ವಾಹನಗಳಿಗೆ 70ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 4,525 ರು.
ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್‌.

ಏಕಮುಖ ಸಂಚಾರಕ್ಕೆ 220 ರು.
 ಅದೇ ದಿನ ಮರು ಸಂಚಾರಕ್ಕೆ 320 ರು.
ಸ್ಥಳೀಯ ವಾಹನಗಳಿಗೆ 110 ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 7,315 ರು.

* ಬಸ್‌ ಅಥವಾ ಟ್ರಕ್‌ (ಎರಡು ಆಕ್ಸೆಲ…)
- ಏಕಮುಖ ಸಂಚಾರಕ್ಕೆ 460 ರು.
ಅದೇ ದಿನ ಮರು ಸಂಚಾರಕ್ಕೆ 690ರು. ಸ್ಥಳೀಯ ವಾಹನಗಳಿಗೆ 230 ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 15,325 ರು.
ವಾಣಿಜ್ಯ ವಾಹನಗಳು (ಮೂರು ಆಕ್ಸೆಲ್‌)

ಏಕಮುಖ ಸಂಚಾರಕ್ಕೆ 500 ರು.
ಅದೇ ದಿನ ಮರು ಸಂಚಾರಕ್ಕೆ 750 ರು. ಸ್ಥಳೀಯ ವಾಹನಗಳಿಗೆ 250 ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 16,715ರು.
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ,ಬಹು ಆಕ್ಸೆಲ… ವಾಹನ (6ರಿಂದ 8 ಆಕ್ಸೆಲ…)

- ಏಕಮುಖ ಸಂಚಾರಕ್ಕೆ 720 ರು.

- ಅದೇ ದಿನ ಮರು ಸಂಚಾರಕ್ಕೆ 1,080 ರು. ಸ್ಥಳೀಯ ವಾಹನಗಳಿಗೆ 360 ರು., ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 24,030 ರು.

* ಅತಿ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ…)

- ಏಕಮುಖ ಸಂಚಾರಕ್ಕೆ 880 ರು.

- ಅದೇ ದಿನ ಮರು ಸಂಚಾರಕ್ಕೆ 1,315ರು. ಸ್ಥಳೀಯ ವಾಹನಗಳಿಗೆ 440ರು. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 29,255 ರು.

ಕಾಂಗ್ರೆಸ್‌ ಪ್ರತಿಭಟನೆ:

ಈ ಮಧ್ಯೆ, ಟೋಲ್‌ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ. ಕಾಮಗಾರಿ ಪೂರ್ಣಗೊಳಿಸದೆ ಟೋಲ್‌ ಸಂಗ್ರಹ ಮಾಡಿದರೆ ಪ್ರತಿಭಟನೆ ಮಾಡುವುದಾಗಿ ಬಿಡದಿ ಬ್ಲಾಕ್‌ ಕಾಂಗ್ರೆಸ್‌ ನಾಯಕರು ಎಚ್ಚರಿಕೆ ನೀಡಿತ್ತು.
 

click me!