ಜಿ.ಟಿ.ದೇವೇಗೌಡ ಪಕ್ಷ ಬಿಡುವ ವಿಚಾರ ಯಾವತ್ತೂ ಹೇಳಿಲ್ಲ, ಅವರು ಪಕ್ಷ ಬಿಡುವುದಿಲ್ಲ ಅವರು ಜೆಡಿಎಸ್‌ನಲ್ಲೇ ಇರುತ್ತಾರೆ ಎಂದು ಕರ್ನಾಟಕ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಸಾರಾ ಮಹೇಶ್ ಹೇಳಿದ್ದಾರೆ.
ಕೋಲಾರ: ವಾರ್ಷಿಕ ಆಡಿಟ್ ಹಾಗೂ ಲೆಕ್ಕ ಪತ್ರ ವರದಿ ಸಲ್ಲಿಕೆಯಲ್ಲಿ ಆಗಿರುವ ವಿಳಂಬವನ್ನು ಕುರಿತು ಕರ್ನಾಟಕ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷರಾದ ಸಾ.ರಾ.ಮಹೇಶ್ ನೇತೃತ್ವದಲ್ಲಿ ಕೋಲಾರ ಜಿಲ್ಲಾ ಪಂಚಾಯ್ತಿಯ ಸಭಾಂಗಣದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದ ಸಾ.ರಾ.ಮಹೇಶ್ ಕೂಡಲೇ ಬಾಕಿ ಉಳಿದಿರುವ ವಾರ್ಷಿಕ ಲೆಕ್ಕ ಪತ್ರ ವರದಿಯಲ್ಲಿ ಉಂಟಾಗಿರುವ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ರಾಜಕೀಯ ವಿಚಾರವಾಗಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಾ.ರಾ.ಮಹೇಶ್ ಅವರು, ಜಿ.ಟಿ.ದೇವೇಗೌಡರು ನಮ್ಮಪಕ್ಷದ ಹಿರಿಯ ಮುಖಂಡರು ಇದ್ದಾರೆ. ಅವರು ಬೇರೆ ಯಾವುದೇ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. ನಾನು ಈಗಾಗಲೇ ಹಲವು ಬಾರಿ ಭೇಟಿ ಮಾಡಿ ಮಾತನಾಡಿದ್ದೇನೆ. ಮೊನ್ನೆ ಸಹ ಅವರ ನೇತೃತ್ವದಲ್ಲಿ ಜೆಡಿಎಸ್ ಸಭೆ ಮಾಡಿದ್ದೇವೆ. ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿದ್ದಾರೆ. ಪಕ್ಷ ಬಿಡುವ ವಿಚಾರ ಯಾವತ್ತು ಹೇಳಿಲ್ಲ, ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡುವ ಕುರಿತು ಮಾತನಾಡಿದ್ದೇವೆ, ಅಣ್ಣ ತಮ್ಮಂದಿರಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತೆ, ಆದ್ರೆ ಪಕ್ಷ ಬಿಡುವ ವಿಚಾರ ಎಲ್ಲೂ ಮಾತನಾಡಿಲ್ಲ, ಮೈಸೂರು ಜಿಲ್ಲೆಯ ನಾಯಕರು ದೇವೇಗೌಡ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ, ಕುಮಾರಸ್ವಾಮಿ ಅವರನ್ನ ಮತ್ತೆ ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ. ವಿಧಾನಸಭೆ ಚುನಾವಣೆ ಇನ್ನೂ 11 ತಿಂಗಳ ಬಳಿಕ ಬರಲಿದೆ. ಅದಕ್ಕಾಗಿಯೆ ನಿನ್ನೆ ಹೊಸದಾಗಿ ಬೋರ್ಡ್ ಚೇರ್ಮನ್ ಮಾಡಿದ್ದಾರೆ ಎಂದರು.
undefined
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಿಟಿ ದೇವೇಗೌಡರ 3 ವರ್ಷದ ಮೊಮ್ಮಗಳು ವಿಧಿವಶ
ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಾ.ರಾ. ಮಹೇಶ್, ಜೆಡಿಎಸ್ ಜನಪರವಾದ ಯೋಜನೆಗಳ ಮೂಲಕ ಜನರ ಬಳಿ ತೆರಳಲಿದೆ. ಮುಖ್ಯಮಂತ್ರಿಗಳನ್ನ ಅಭಿವೃದ್ದಿ, ವಿಶ್ವಾಸದ ಆಧಾರದ ಮೇಲೆ ಮಾಡುತ್ತಾರೆ. ಅವರು ನಮ್ಮ ಸ್ನೇಹಿತ್ರೆ, ಆದ್ರೆ ಜಮೀರ್ ಅಹ್ಮದ್ ಯಾಕೆ ಹಾಗೆ ಹೇಳಿದ್ರು ಗೊತ್ತಿಲ್ಲ. ವ್ಯಕ್ತಿ ಪೂಜೆ ಅಷ್ಟು ಒಳ್ಳೆಯದಲ್ಲ, ಬಹಳಷ್ಟು ಜನ ಕಾಂಗ್ರೆಸ್ ಗೆ ಸಹಕಾರ ಕೊಟ್ಟು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆದ್ರೆ ಜನ ಸಂಕಷ್ಟದಲ್ಲಿರುವಾಗ, ಸಮಸ್ಯೆಗಳಿರುವಾಗ ಈ ಉತ್ಸವ ಬೇಕಿತ್ತಾ. ನಿಜವಾದ ಒಕ್ಕಲಿಗ ನಾಯಕ ಯಾರು ಎಂಬ ಪ್ರಶ್ನೆಗೆ,
ಜೆಡಿಎಸ್ ಆಫರ್ ನಿರಾಕರಿಸಿದ ಜಿಟಿ ದೇವೇಗೌಡ, ದಳಪತಿಗಳ ಪ್ಲಾನ್ ಫೇಲ್
ಕುಮಾರಸ್ವಾಮಿ ಈ ರಾಜ್ಯದ ಎಲ್ಲಾ ಸಮುದಾಯದ ಜನ ಸಾಮಾನ್ಯರು ಇಷ್ಟ ಪಡುವ ನಾಯಕರು. ಸಿದ್ದರಾಮಯ್ಯ ಅವರು ನಮ್ಮ ಜಿಲ್ಲೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದವರು. ನನಗೆ ಖುಷಿ ಇದೆ, ಆದ್ರೆ ಬೇಸರ ಕೂಡ ಇದೆ. ಆದ್ರೆ ಕ್ಷೇತ್ರ ಯಾವುದು ಅಂತಾ ಇದುವರೆಗೂ ಹೇಳುತ್ತಿಲ್ಲ ಎಂದು ಹೇಳಿದ್ರು. ಇನ್ನು ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ್ ಕುರಿತು ಸಾಫ್ಟ್ ಕಾರ್ನರ್ ತೋರಿಸಿದ ಸಾರಾ ಮಹೇಶ್, ಅವರ ಹಾಗೂ ನನ್ನ ಮಧ್ಯೆ ಇರುವ ಜಗಳ ಈ ಜನ್ಮದಲ್ಲಿ ಮುಗಿಯಲ್ಲ. ಅವರು ನನ್ನ ಹಿರಿಯರಾದ ನಂಜಪ್ಪನವರ ಸಮಕಾಲೀನರು. ವೈಯಕ್ತಿಕ, ಅಭಿವೃದ್ಧಿ ವಿಚಾರ ಬಂದಾಗ ಇಬ್ಬರ ನಡುವೆ ನಡೆಯುವ ಗಲಾಟೆ ಸರಿಯಲ್ಲ ಎಂಬ ಸಲಹೆಯಂತೆ ನಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.