Gadag: ಒಳಮೀಸಲಾತಿ ಜಾರಿಗೊಳಿಸುವ ಪ್ರಸ್ತಾವ ವಿರೋಧಿಸಿ ಪ್ರತಿಭಟನೆ

By Kannadaprabha News  |  First Published Oct 30, 2024, 1:07 PM IST

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಪ್ರಸ್ತಾವ ವಿರೋಧಿಸಿ ಬಂಜಾರ (ಲಂಬಾಣಿ), ಕೊರಮ, ಕೊರಚ, ಭೋವಿ (ವಡ್ಡರ) ಭಜಂತ್ರಿ ಸೇರಿದಂತೆ ನೂರಾರು ಜನ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಘೋಷಣೆ ಕೂಗುತ್ತ ತಹಸೀಲ್ದಾರ್‌ ಜಾನು ಲಮಾಣಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


ಶಿರಹಟ್ಟಿ (ಅ.30): ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಪ್ರಸ್ತಾವ ವಿರೋಧಿಸಿ ಬಂಜಾರ (ಲಂಬಾಣಿ), ಕೊರಮ, ಕೊರಚ, ಭೋವಿ (ವಡ್ಡರ) ಭಜಂತ್ರಿ ಸೇರಿದಂತೆ ನೂರಾರು ಜನ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಘೋಷಣೆ ಕೂಗುತ್ತ ತಹಸೀಲ್ದಾರ್‌ ಜಾನು ಲಮಾಣಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಜಾನು ಲಮಾಣಿ ಮಾತನಾಡಿ, ಅಸಮರ್ಥನೀಯ ಹಾಗೂ ದತ್ತಾಂಶಗಳನ್ನು ಆಧರಿಸಿದ ಒಳಮೀಸಲಾತಿ ವರ್ಗೀಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅವೈಜ್ಞಾನಿಕ ಮತ್ತು ಕಾನೂನು ಮತ್ತು ಸಂವಿಧಾನಿಕ ಸಿಂಧುತ್ವದ ಕೊರತೆ ಎಂದು ಪರಿಗಣಿಸಿ ಸರ್ಕಾರ ಹೊಸ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿನ ಸಮುದಾಯಗಳ ದತ್ತಾಂಶಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸದೇ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಬಾರದು. ಪರಿಶಿಷ್ಟ ಜಾತಿಗಳಲ್ಲಿ ಲಂಬಾಣಿ ಕೊರಚ, ಕೊರಮ, ಭೋವಿ, ವಡ್ಡರ ಸೇರಿದಂತೆ ೧೦೧ ಜಾತಿಗಳಿದ್ದು, ಕೇವಲ ಎರಡು ಜಾತಿಗಳಿಗೆ ಒಳಮೀಸಲಾತಿ ನೀಡುವುದರಿಂದ ಉಳಿದ 99 ಜಾತಿಗಳಿಗೆ ಅನಾನುಕೂಲವಾಗುತ್ತದೆ.

Latest Videos

undefined

ನ್ಯಾಷನಲ್ ಲಾ ಸ್ಕೂಲ್ ಕನ್ನಡಿಗರ ಮೀಸಲಾತಿ ಹೋರಾಟಕ್ಕೆ ಹಿನ್ನಡೆ

ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಾಗಿ ಅವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶಗಳನ್ನು ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೊಲೆಯಾಗಿದೆ. ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ ಹಾಗೂ ವಸ್ತುನಿಷ್ಟ ಅಂಕಿ-ಅಂಶಗಳ ಕುರಿತಾದ ಕೊರತೆ ಇದ್ದು, ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲು ಹೊರಟಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

2011ರ ನಂತರ ಯಾವುದೇ ಹೊಸ ಜನಗಣತಿ ನಡೆಸಿಲ್ಲವಾದ್ದರಿಂದ ಅದರ ಸ್ಥಿತಿಗತಿಯ ಬಗ್ಗೆ ಡೇಟಾ ಸಂಗ್ರಹಿಸಬೇಕು. ಒಳಮೀಸಲಾತಿ ಜಾರಿಗೆ ತರುವಾಗ ಪರಿಶಿಷ್ಟ ಜಾತಿ, ಸಮುದಾಯಗಳಿಗೆ ಯಾವುದೇ ಹಾನಿಯಾಗದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಪರಿಶಿಷ್ಟ ಜಾತಿಯಲ್ಲಿನ ಅವಕಾಶ ವಂಚಿತ, ಶೋಷಿತ ಒಳ ಸಮುದಾಯಗಳನ್ನು ಮರು ವರ್ಗೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ. ಮೀಸಲಾತಿಯ ಆಶಯವಾದ ಸಾಮಾಜಿಕ, ಶೈಕ್ಷಣಿಕ ಮೂಲ ಮಾನದಂಡಗಳನ್ನು ಕಡೆಗಣಿಸಿ ಕೇವಲ ಜನಸಂಖ್ಯೆ ಆಧಾರದ ಮೇಲೆ ಹಿಂದುಳಿದಿರುವಿಕೆ ಗುರುತಿಸಲಾಗುತ್ತಿದೆ ಎಂದು ದೂರಿದರು.

ಕೋವಿಡ್‌ ವರದಿ ನೋಡಿ ನನಗೇ ಕೊರೋನಾ ಬರುವಂತಿದೆ: ಡಿ.ಕೆ.ಶಿವಕುಮಾರ್‌

ನಂತರ ತಹಸೀಲ್ದಾರ್ ಅನಿಲ ಬಡಿಗೇರ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡುವ ಭರವಸೆ ನೀಡಿದರು. ಮನವಿ ನೀಡುವ ವೇಳೆ ತಾಪಂ ಮಾಜಿ ಸದಸ್ಯ ದೇವಪ್ಪ ಲಮಾಣಿ, ಈರಣ್ಣ ಚವ್ಹಾಣ, ಉಮೇಶ ಲಮಾಣಿ, ನೀಲಪ್ಪ ಲಮಾಣಿ, ಶಿವು ಲಮಾಣಿ, ತುಕ್ಕಪ್ಪ ಲಮಾಣಿ, ಎಂ.ಪಿ. ಲಮಾಣಿ, ರಮೇಶ ಲಮಾಣಿ, ಸುರೇಶ ಲಮಾಣಿ, ಸುನೀಲ ಲಮಾಣಿ, ಚೆನ್ನಪ್ಪ ಲಮಾಣಿ, ಪ್ರಭು ಲಮಾಣಿ, ಸಿದ್ದಪ್ಪ ವಡ್ಡರ, ರಾಮಪ್ಪ ಸಿದ್ದಣ್ಣವರ, ಷಣ್ಮುಖ ಪೂಜಾರ, ಚೋಕಲಪ್ಪ ಲಮಾಣಿ, ಪರಶುರಾಮ ಲಮಾಣಿ, ನೀಲಪ್ಪ ಲಮಾಣಿ, ಕೇಶವ ಅಂಗಡಿ, ನಿಂಗಪ್ಪ ಲಮಾಣಿ, ಯಮನಪ್ಪ ಲಮಾಣಿ, ವೆಂಕಟೇಶ ಲಮಾಣಿ, ದಯಾನಂದ ಲಮಾಣಿ ಇತರರು ಇದ್ದರು.

ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಾಗಿ ಅವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶಗಳನ್ನು ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೊಲೆಯಾಗಿದೆ.
-ಜಾನು ಲಮಾಣಿ, ತಹಶೀಲ್ದಾರ್

click me!