ನ್ಯಾಷನಲ್ ಲಾ ಸ್ಕೂಲ್ ಕನ್ನಡಿಗರ ಮೀಸಲಾತಿ ಹೋರಾಟಕ್ಕೆ ಹಿನ್ನಡೆ

ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಶೇ.25ರಷ್ಟು ಸೀಟುಗಳ ನೀಡಬೇಕೆಂಬ ಮೀಸಲಾತಿ ವಿಚಾರದಲ್ಲಿ ಎದುರಾಗಿರುವ ಕಾನೂನು ಸಂಘರ್ಷವನ್ನು ಸಮರ್ಥವಾಗಿ ಎದುರಿಸಬೇಕಿದ್ದ ರಾಜ್ಯ ಸರ್ಕಾರ ಕೈ ಚೆಲ್ಲಿದೆ.

National Law School is a Setback for Kannadigas Reservation Struggle gvd

• ಲಿಂಗರಾಜು ಕೋರಾ

ಬೆಂಗಳೂರು (ಅ.30): ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಮೆರಿಟ್ ಆಧಾರದಲ್ಲಿ ಭರ್ತಿಯಾಗುವ ಸೀಟುಗಳನ್ನು ಹೊರತುಪಡಿಸಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಶೇ.25ರಷ್ಟು ಸೀಟುಗಳ ನೀಡಬೇಕೆಂಬ ಮೀಸಲಾತಿ ವಿಚಾರದಲ್ಲಿ ಎದುರಾಗಿರುವ ಕಾನೂನು ಸಂಘರ್ಷವನ್ನು ಸಮರ್ಥವಾಗಿ ಎದುರಿಸಬೇಕಿದ್ದ ರಾಜ್ಯ ಸರ್ಕಾರ ಕೈ ಚೆಲ್ಲಿದೆ.

2021 -22ನೇ ಸಾಲಿನ ನಂತರ ಸ್ವಯಂ ಪ್ರೇರಿತವಾಗಿ ಕರ್ನಾಟಕ ವಿದ್ಯಾರ್ಥಿಗಳಿಗೆ ಸಮತಲ ವಿಭಾಗೀಯ ಮಾದರಿಯಲ್ಲಿ ಶೇ.25ರಷ್ಟು ಮೀಸಲಾತಿ ನೀಡುತ್ತಿರುವುದಾಗಿ (ಮೆರಿಟ್ ಹಾಗೂ ಇತರೆ ಆಧಾರದಲ್ಲಿ ಪ್ರವೇಶ ಪಡೆದವರನ್ನೂ ಒಳಗೊಂಡು) ಹೇಳಿರುವುದನ್ನೇ ಪರಿಗಣಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದ ಮೇಲ್ಮನವಿ ಅರ್ಜಿಯನ್ನೇ ಕಳೆದ ಏಪ್ರಿಲ್ ನಲ್ಲಿ ಸರ್ಕಾರ ಹಿಂಪಡೆದಿದೆ. ಇದರಿಂದ ಪ್ರತ್ಯೇಕವಾಗಿ ಶೇ.25ರಷ್ಟು ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಕನ್ನಡಿಗರ ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ. 

ಕೋವಿಡ್‌ ವರದಿ ನೋಡಿ ನನಗೇ ಕೊರೋನಾ ಬರುವಂತಿದೆ: ಡಿ.ಕೆ.ಶಿವಕುಮಾರ್‌

ನೆಲದ ಕಾನೂನಿಗೆ ತಲೆಬಾಗುವುದಾಗಿ ಹೇಳಿ ಕರ್ನಾಟಕದ ನೆಲದಲ್ಲಿ ತಲೆ ಎತ್ತುವ ಶಿಕ್ಷಣ ಸಂಸ್ಥೆಗಳು ನಂತರ ರಾಷ್ಟ್ರೀಯ ಸ್ಥಾನಮಾನದೆ ಹೆಸರಲ್ಲಿ ಕನ್ನಡಿಗರಿಗೆ ನಿರಂತರ ಅನ್ಯಾಯ ಎಸಗುತ್ತಲೇ ಬರುತ್ತಿವೆ. ಆದರೂ, ಇದನ್ನು ಗಟ್ಟಿಯಾಗಿ ಪ್ರಶ್ನಿಸಿ ಕನ್ನಡಿಗರ ಹಿತ ಕಾಯಬೇಕಾದ ರಾಜ್ಯ ಸರ್ಕಾರವೇ ಈ ರೀತಿ ಉದಾಸೀನ ಧೋರಣೆ ತೋರಿದರೆ ರಾಜ್ಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. 

ಕನ್ನಡಿಗರ ಬೇಡಿಕೆ ಏನು?: ಎನ್‌ಎಲ್ ಎಸ್‌ಐಯುನಲ್ಲಿ ಎಲ್ಲಾ ಕಾನೂನು ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಲಂಬ ವಿಭಾಗೀಯ ಮಾದರಿಯಲ್ಲಿ ಮೀಸಲಾತಿ ನೀಡಬೇಕು. ಅರ್ಥಾತ್ ಉಳಿದ ಶೇ.75ರಷ್ಟು ಸೀಟುಗಳಿಗೆ ಮೆರಿಟ್ ಹಾಗೂ ಇನ್ನಿತರೆ ಯಾವುದೇ ಕೋಟಾದಡಿ ಪ್ರವೇಶ ಪಡೆಯುವ ಕನ್ನಡಿಗ ವಿದ್ಯಾರ್ಥಿಗಳನ್ನು ಶೇ.25ರ ಮೀಸಲಾತಿಯ ಲೆಕ್ಕಕ್ಕೆ ಪರಿಗಣಿಸಬಾರದು ಎನ್ನುವುದು ಕನ್ನಡಿಗರ ಬಹುದಿನಗಳ ಬೇಡಿಕೆ ಹಾಗೂ ಆಗ್ರಹವಾಗಿದೆ.

ಹಿಂದಿನ ಸರ್ಕಾರದಲ್ಲಿ ಭಾರೀ ಸಂಘರ್ಷ: ಕರ್ನಾಟಕದವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳ ಪ್ರತ್ಯೇಕ ಮೀಸಲಾತಿ ನೀಡುವ ವಿಚಾರವಾಗಿ ಕಾನೂನು ಶಾಲೆಯೊಂದಿಗೆ ಹಿಂದಿನ ಸರ್ಕಾರದಲ್ಲಿದೊಡ್ಡ ಸಂಘರ್ಷವೇ ನಡೆದಿತ್ತು. ಅಂದಿನ ಸರ್ಕಾರದ ಕಾನೂನು ಮತ್ತು ಸಂಸದೀಯ ಸಚಿವರು ಕುಲಪತಿಗೆ ಪತ್ರ ಬರೆದು ಶೇ.25ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಆಗ್ರಹಿಸಿದ್ದರು.

7 ಎಕರೆ ಜಾಗಕ್ಕೆ 50% ಮೀಸಲು: ಬೆಂ.ವಿವಿ ಈ ಮಧ್ಯೆ, ರಾಷ್ಟ್ರೀಯ ಕಾನೂನು ಶಾಲೆಗೆ ತನ್ನ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಹೆಚ್ಚುವರಿಯಾಗಿ 7 ಎಕರೆ ಜಾಗ *ಕರ್ನಾಟಕದ ಸ್ಥಳೀಯ ಅಥವಾ ನಿವಾಸಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಸೀಟುಗಳ ಮೀಸಲಾತಿ ನೀಡಲು ನೀಡಬೇಕೆಂದು ಬೆಂಗಳೂರು ವಿವಿ ಷರತ್ತು ವಿಧಿಸಿದೆ. ಅಲ್ಲದೆ, 23 ಎಕರೆಗೆ ಪ್ರತಿ ಎಕರೆಗೆ ವರ್ಷಕ್ಕೆ 50000 ರು. ಬಾಡಿಗೆ ಕರಾರಿನಂತೆ ಇದುವರೆಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನೂ ಪಾವತಿಸಬೇಕೆಂದು ಒತ್ತಾಯಿಸಿದೆ. 

ಉತ್ತರ ಭಾರತೀಯರಿಂದಾಗಿ ಬೆಂಗಳೂರಿನಲ್ಲಿ ಕ್ರೈಂ ಹೆಚ್ಚಳ: ಫುಡ್ ಡೆಲಿವರಿ ಹೆಸರಿನಲ್ಲಿ ಡ್ರಗ್ಸ್ ಡೆಲಿವರಿ

ರಾಜ್ಯಪಾಲರಿಗೆ ಪತ್ರ: ಇನ್ನು, ಬೆಂ.ವಿವಿ ವಿಧಿಸಿರುವ ಕರ್ನಾ ಟಕ ನಿವಾಸಿ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಮೀಸಲಾತಿ ಷರತ್ತು ಪಾಲಿಸುವ ವರೆಗೆ ರಾಷ್ಟ್ರೀಯ ಕಾನೂನು ಶಾಲೆಗೆ ಯಾವುದೇ ಹೆಚ್ಚುವರಿ ಭೂಮಿ ಮಂ ಜೂರಾತಿಯನ್ನು ತಡೆಹಿಡಿಯಬೇಕೆ ೦ದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ರಾಜ್ಯಪಾಲರ ಥಾವರ್ ಚಂದ್ ಗೆಹ ಲೋತ್ ಅವರಿಗೆ ಪತ್ರ ಬರೆದಿದ್ದಾರೆ. ಯಾವುದೇ ಹೆಚ್ಚುವರಿ ಭೂಮಿ ಮಂಜೂರು ಮಾಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios