ಬಾದಾಮಿ: ಹಲಕುರ್ಕಿ ರೈತರ ಕಷ್ಟ ಆಲಿಸದಿದ್ದರೆ ಸಿದ್ಧರಾಮಯ್ಯ ವಿರುದ್ಧ ಪ್ರತಿಭಟನೆ

By Kannadaprabha News  |  First Published Dec 11, 2022, 8:30 PM IST

ಸಿದ್ದರಾಮಯ್ಯನವರು ಹಲಕುರ್ಕಿ ಗ್ರಾಮಕ್ಕೆ ಭೇಟಿ ಕೊಟ್ಟು ರೈತರ ಸಮಸ್ಯೆಯನ್ನು ಆಲಿಸಬೇಕು. ನಮ್ಮ ಹೋರಾಟಕ್ಕೆ ಬೆಂಬಲಿಸಬೇಕು. ಇಲ್ಲದಿದ್ದರೆ ಅವರ ಕಾರ್ಯಕ್ರಮಕ್ಕೆ ಬಹಿಷ್ಠಾರ ಹಾಕಿ, ರೈತರ ಹೋರಾಟದ ಬಿಸಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಬಾಗಲಕೋಟೆ(ಡಿ.11): ಕೈಗಾರಿಕೆಗಾಗಿ ರೈತರ ಫಲವತ್ತಾದ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ವಿರುದ್ಧ ರೈತರ ಪರವಾಗಿ ಧ್ವನಿ ಎತ್ತದ ಬಾದಾಮಿ ಮತಕ್ಷೇತ್ರದ ಶಾಸಕರಾಗಿರುವ ಸಿದ್ಧರಾಮಯ್ಯನವರು ಡಿ.12ರಂದು ಬಾದಾಮಿ ತಾಲ್ಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುವ ಸಂದರ್ಭದಲ್ಲಿ ಅವರನ್ನು ಕಾರ್ಯಕ್ರಮಕ್ಕೆ ಹೋಗದಂತೆ ತಡೆಯಲಾಗುವುದು ಎಂದು ರೈತ ಪ್ರಕಾಶ ನಾಯ್ಕರ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹಲಕುರ್ಕಿ ಗ್ರಾಮಕ್ಕೆ ಭೇಟಿ ಕೊಟ್ಟು ರೈತರ ಸಮಸ್ಯೆಯನ್ನು ಆಲಿಸಬೇಕು. ನಮ್ಮ ಹೋರಾಟಕ್ಕೆ ಬೆಂಬಲಿಸಬೇಕು. ಇಲ್ಲದಿದ್ದರೆ ಅವರ ಕಾರ್ಯಕ್ರಮಕ್ಕೆ ಬಹಿಷ್ಠಾರ ಹಾಕಿ, ರೈತರ ಹೋರಾಟದ ಬಿಸಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Tap to resize

Latest Videos

undefined

BAGALAKOTE: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಸಿದ್ದರಾಮಯ್ಯ ಕಾರ್ಯಕ್ರಮ ರದ್ದು

ಕಳೆದ 81 ದಿನಗಳಿಂದ ಹಲಕುರ್ಕಿ ಗ್ರಾಮದ ರೈತರು ಭೂಮಿಯನ್ನು ಸ್ವಾ​ದೀನ ವಿರೋ​ಸಿ ಪ್ರತಿಭಟನಾ ಧರಣಿಯನ್ನು ರೈತರು ಹಮ್ಮಿಕೊಂಡರೂ ಯಾವುದೇ ಜನಪ್ರತಿನಿ​ಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್‌ ಪಕ್ಷದ ಮಾಜಿ ಶಾಸಕ ಜೆ.ಟಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ, ಅಜಯಕುಮಾರ ಸರನಾಯಕವರು ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಓಡಾಟ ನಡೆಸುತ್ತಿದ್ದಾರೆ. ಆದರೆ, ಬೀಳಗಿ ಮತಕ್ಷೇತ್ರದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಮಾತ್ರ ಕಿಂಚಿತ್ತು ಗಮನಹರಿಸುತ್ತಿಲ್ಲ. ಇಂತಹ ನಾಯಕರಿಗೆ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಲಕುರ್ಕಿ ಗ್ರಾಮದ ಶೇ.75ರಷ್ಟುರೈತರು ಕೈಗಾರಿಕೆ, ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ನೀಡಲು ಒಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದು ಸತ್ಯಕ್ಕೆ ದೂರವಾಗಿದೆ. ಯಾವುದೇ ರೈತರು ಭೂಮಿಯನ್ನು ನೀಡಲು ಒಪ್ಪಿಲ್ಲ. ಅವರ ಬಳಿ ದಾಖಲೆ ಇದ್ದರೆ ಬಹಿರಂಗ ಪಡಿಸಲಿ, ಬಾದಾಮಿ ಮತಕ್ಷೇತ್ರದ ಕೆಲವೊಂದು ಮುಖಂಡರು ನಿರಾಣಿಯವರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಹುನಗುಂದ: ಸಿದ್ದರಾಮಯ್ಯಗೆ ಕಾಂಗ್ರೆಸ್‌ ತತ್ವ ಒಪ್ಪುವುದಿಲ್ಲ, ಗೋವಿಂದ ಕಾರಜೋಳ

ಹಲಕುರ್ಕಿ ಗ್ರಾಮದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಜನಾಂಗದವರ ಜಮೀನು ಹೆಚ್ಚಿದೆ. ಬಾದಾಮಿ ತಾಲೂಕಿನಲ್ಲಿ ಈಗಾಗಲೇ ಮೂರು ಕಾರ್ಖಾನೆಗಳು ಇವೆ. ಕೆರೂರ ಏತ ನೀರಾವರಿ ಯೋಜನೆಯಿಂದ ಇಲ್ಲಿಯ ಜಮೀನುಗಳು ನೀರಾವರಿ ಸೌಲಭ್ಯ ಪಡೆಯುತ್ತವೆ. ಇದು ನಿರಾಣಿ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಚಿವರು ಸಂಬಂಧಪಟ್ಟಅಧಿ​ಕಾರಿಗಳಿಂದ ಭೂಸ್ವಾ​ಧೀನ ಕೈ ಬಿಡುವ ಬಗ್ಗೆ ಲಿಖಿತ ಮಾಹಿತಿ ಬರದೇ ಇರುವ ಹಿನ್ನೆಲೆ ಇದೇ ಡಿ.19ರಿಂದ ನಡೆಯಲಿರುವ ಚಳಿಗಾಲ ಅ​ವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬೆಳಗಾವಿ ಸುವರ್ಣಸೌಧದ ಮುಂದೆ ಅಧಿ​ವೇಶನ ಮುಗಿಯುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದರು. ಷಡಕ್ಷರಿ ಸ್ವಾಮೀಜಿ, ಯಂಕಣ್ಣ ದಳವಾಯಿ, ರಂಗಪ್ಪ ಬಂಡಿವಡ್ಡರ, ಶಿವಯೋಗಪ್ಪ ಹುಲಿ ಉಪಸ್ಥಿತರಿದ್ದರು.
 

click me!