Dharwad: ಅರಣ್ಯ ಇಲಾಖೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ!

By Govindaraj S  |  First Published May 15, 2024, 5:49 PM IST

ಸರಕಾರದ ಕೆಲಸ ದೇವರ ಕೆಲಸ ಅಂತಾರೆ. ಅದೆಷ್ಟೊ ಜನ ಸರಕಾರಿ ಕೆಲಸವನ್ನ ಪಡಿಯಬೇಕಾದರೆ ಅದೆಷ್ಟೋ ಕಷ್ಟ ಕಡ್ತಾರೆ ಆದರೆ ಇಲ್ಲೊಂದು ಇಲಾಖೆಯಲ್ಲಿ ಸರಕಾರಿ ಕಚೇರಿಯಲ್ಲಿ ಸರಕಾರಿ ಕೆಲಸವನ್ನ ಪಡೆಯದೆ ಸರಕಾರಿ ಕಚೇರಿಯಲ್ಲಿ ಅನಧಿಕೃತವಾಗಿ ಕೆಲಸವನ್ನ ಮಾಡುತ್ತಿದ್ದಾರೆ. 


ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಮೇ.15): ಸರಕಾರದ ಕೆಲಸ ದೇವರ ಕೆಲಸ ಅಂತಾರೆ. ಅದೆಷ್ಟೊ ಜನ ಸರಕಾರಿ ಕೆಲಸವನ್ನ ಪಡಿಯಬೇಕಾದರೆ ಅದೆಷ್ಟೋ ಕಷ್ಟ ಕಡ್ತಾರೆ ಆದರೆ ಇಲ್ಲೊಂದು ಇಲಾಖೆಯಲ್ಲಿ ಸರಕಾರಿ ಕಚೇರಿಯಲ್ಲಿ ಸರಕಾರಿ ಕೆಲಸವನ್ನ ಪಡೆಯದೆ ಸರಕಾರಿ ಕಚೇರಿಯಲ್ಲಿ ಅನಧಿಕೃತವಾಗಿ ಕೆಲಸವನ್ನ ಮಾಡುತ್ತಿದ್ದಾರೆ. ಆದರೆ ಆ ಮಹಿಳಾ ಸಿಬ್ಬಂದಿಗಳಿಗೆ ಖಾಸಗಿಯಾಗಿ ಕೆಲಸವನ್ನ ಮಾಡುತ್ತಿದ್ದಾಳೆ. ಆದರೆ ಅವಳು ಮಾಡಿದ್ದೆ ಆಟವಾಗಿದೆ. ಈ ಅರಣ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಮಾಡಿದ್ದೆ ಆರ್ಡರ್, ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಸಂರಕ್ಷಣೆ ಮಾಡಿ ಅಂದರೆ ಇಲ್ಲಿ ಹಿರಿಯ ಅಧಿಕಾರಿಗಳು ತಮಗೆ ಬೇಕಾದ ಸಿಬ್ಬಂದಿಗಳನ್ನ ರಕ್ಷಣೆ ಮಾಡಿ‌ ಬೇಡಾದ ಸಿಬ್ಬಂದಿಗಳ ಮೆಲೆ ಕ್ರಮ ಕೈಗೋಳ್ತಾ ಇದಾರೆ ಎಂದು ಆರೋಪಗಳು ಕೇಳಿಬಂದಿವೆ.

Tap to resize

Latest Videos

ಧಾರವಾಡದ ಅರಣ್ಯ ಇಲಾಖೆಯಲ್ಲಿ ಆರ್ ಎಪ್ ಓ ಗಳು ಸರಿಯಾಗಿ ಕೆಲಸವನ್ನ ನಿರ್ವಹಿಸುತ್ತಿಲ್ಲ ಮತ್ತು ಅವರ ಮೆಲೆ ಅಕ್ರಮಗಳ ಬಗ್ಗೆ ಮುಬಾರಕ್ ಭಾಗವಾನ್ ಎಂಬುವರು ಸಿಸಿಎಪ್ ಅವರಿಗೆ ದೂರನ್ನ ಕೊಟ್ಟಿದ್ದರು. ಆದರೆ ಆ ದೂರಿನ ಅನ್ವಯ ಸಿಸಿಎಪ್ ಅವರು ಡಿಎಪ್ ಓ ಅವರಿಗೆ ವಿಚಾರಣೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ ಬಳಿಕ ವಿಚಾರಣೆಯಲ್ಲಿ ಕೆಲ ಸಿಬ್ಬಂದಿಗಳು ಕೆಲಸ ಮಾಡುತ್ತಿಲ್ಲ ಅನ್ನೋ ಹಾಗೆ ವರದಿಯನ್ನ ತಾವೆ ಸೃಷ್ಠಿ ಮಾಡಿದ್ದಾರೆ ಎಂದು ದೂರುದಾರರು ಹೇಳುತ್ತಿದ್ದಾರೆ, ಈ ಪ್ರಕರಣದ ಬಗ್ಗೆ ನೋಡೋದಾದ್ರೆ ಅರಣ್ಯ ಇಲಾಖೆಯಲ್ಲಿ ಓರ್ವ ಸಿಬ್ಬಂದಿಯನ್ನ ಅಮಾನುತು ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಚುನಾವಣಾ ಕಲರವ: 7 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲೊರ‍್ಯಾರು? ಸೋಲರ‍್ಯಾರು?

ಡಿ ಎಪ್ ಓ ವಿವೇಕ್ ಕವರಿ ಅವರು ಆದರೆ ತಮ್ಮ ಇಲಾಖೆಯ ಸಿಬ್ಬಂದಿಯನ್ನ ಅಮಾನತು ಮಾಡಿದ್ದಾರೆ ಆದರೆ ಅದೆ ಇಲಾಖೆಯಲ್ಲಿ ಅನಧಿಕೃತವಾಗಿ ಕೆಲಸ ಮಾಡುತ್ತಿರುವ ಗೀತಾ ಕುನ್ನೂರು ಎಂಬುವರು ಕಂಪ್ಯೂಟರ್ ಆಪರೇಟರ್ ಗೀತಾ ಕುನ್ನೂರು ಎಂಬುವರು ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಸರಕಾರಿ ಇಲಾಖೆಯ ಸಿಬ್ಬಂದಿಗೆ ಮಾಹಿತಿಯನ್ನ ನೀಡಿರುವ ಆರೋಪವು ಕೂಡಾ ಗೀತಾ ಕುನ್ನೂರು ಮೆಲೆ ಕೇಳಿ ಬಂದಿದೆ. ಆದರೆ ಇವರನ್ನ ವಲಯ ಇಲಾಖೆಯಲ್ಲಿ ಅನಧಿಕೃತವಾಗಿ ಕೆಲಸಕ್ಕೆ ಇಟ್ಟುಕ್ಕೊಂಡಿದ್ದಾರೆ. ಸರಕಾರಿ ಇಲಾಖೆಯ ಗೌಪ್ಯ ಮಾಹಿತಿಗಳನ್ನ ಹೊರಗಡೆ ಕೊಡುವುದರಲ್ಲಿ ಗೀತಾ ಕುನ್ನೂರ ಅವರ ಪಾತ್ರವೂ ಕೂಡಾ ಇದರಲ್ಲಿದ್ದು, ಆದರೆ ಡಿಎಪ್ಓ ಬಿಸೋ ದೊನ್ನೆ ತಪ್ಪಿಸಿಕ್ಕೊಳ್ಳಲುವ ತಮ್ಮ ಇಲಾಖೆಯ ಸಿಬ್ಬಂಧಿಯನ್ನ ಅಮಾನತು ಮಾಡಿದ್ದಾರೆ.

ಆದರೆ ಖಾಸಗಿಯಾಗಿ ಕೆಲಸ ಮಾಡುತ್ತಿರುವ ಗೀತಾ ಕುನ್ನೂರು ಮೆಲೆ ಯಾಕೆ ಕ್ರಮ ಕೈಗೊಳ್ತಿಲ್ಲ, ಮತ್ತು ಅವರ ಮೆಲೆ ಅಷ್ಟೊಂದು ಪ್ರೀತಿ ಯಾಕೆ ಅವರನ್ನ ಮತ್ತೆ ಅದೆ ಇಲಾಖೆಯಲ್ಲಿ ಕೆಲಸಕ್ಕೆ ಇಟ್ಟುಕ್ಕೊಂಡಿದ್ದು ಯಾಕೆ. ಜೊತೆಗೆ ಹಿರಿಯ ಅಧಿಕಾರಿಗಳ ಮೆಲೆ ಗೀತಾ ಕುನ್ನೂರು ಅವರು ನನಗರ ಒತ್ತಾಯ ಪೂರ್ವಕವಾಗಿ ಅಮಾನತು ಆದ ವಿಠಲ್ ಎಂಬುವರ ವಿರುದ್ದ ದೂರು ಬರೆಸಿಕ್ಕೊಂಡಿದ್ದಾರೆ ಎಂದು ಗೀತಾ ಕುನ್ನೂರು ಇವರು ಹಿರಿಯ ಅಧಿಕಾರಿಗಳ ವಿರುದ್ದ ದೂರು ಕೊಟ್ಟಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಆದವರು ಪ್ರಕರಣದಲ್ಲಿ ಭಾಗಿಯಾದವರೆಲ್ಲರನ್ನೂ ಅಮಾನತು ಮಾಡಬೇಕು ಇಲ್ಲಿ ಕೇವಲ ವಿಠಲ್ ಎಂಬುವರನ್ನ ಅಮಾನತು ಮಾಡಿ, ಗೀತಾ ಕುನ್ನೂರು ಅವರನ್ನ ಅಲ್ಲೆ ಮುಂದುವರೆಸಿದ್ಯಾಕೆ ಅನ್ನೋ ಹಲವಾರು ಪ್ರಶ್ನೆಗಳು ಹುಟ್ಟುತ್ತಿವೆ.

ಆದರೆ ದೂರುದಾರ ಮುಬಾರಕ್ ಬಾಗವಾನ ಹೇಳೋದನ್ನ ನೋಡೊಧಾದ್ರೆ ಮಾರ್ಚ 13 ರಂದು ನಾನು ಇಬ್ಬರು ಆರ್ ಎಪ್ ಓ ಮೆಲೆ ದೂರು ಅರ್ಜಿಯನ್ನ ಸಲ್ಲಿಸಿದ್ದೆನೆ,ನನಗೆ ಮಾರ್ಚ 6 ರಂದು ದಾಖಲಾತಿಗಳೋಂದಿಗೆ ವಿಚಾರಣೆಗೆ ಹಾಜರಾಗಲು ಅರಣ್ಯ ಇಲಾಖೆಯಿಂದ ಲೆಡರ್ ಹಾಕುತ್ತಾರೆ..ಕೆಲಸ ದಿನಗಳ ಬಳಿಕ ಮತ್ತೆ ನನಗೆ ಎಪ್ರಿಲ್ 6 ರಂದು ವಿಚಾರಣೆಗೆ ಬರಬೇಡಿ ಕಾರಣಾಂತರಗಳಿಂದ ವಿಚಾರಣೆಯನ್ನ ಮುಂದೂಡಲಾಗಿದೆ ಎಂದು ಲೆಟರ್ ಕಳಸಿದ್ದಾರೆ ಆದರೆ ನಾನು ಇಬ್ಬರ ಅಧಿಕಾರಿಗಳ‌ ಮೇಲೆ‌ ದೂರು ಕೊಟ್ಟಿದ್ದೆನೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಲ್ಲ, ಅವರು ಕೆಲ ಹಗರಣಗಳನ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದೆನೆ.

ಆದರೆ ಅವರು ಯಾವುದೆ ಕಾರಣಕ್ಕೂ ನನಗೆ ಸರಿಯಾಗಿ ವಿಚಾರಣೆಗೆ ಕರೆದಿಲ್ಲ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ವಯಕ್ತಿಕ ದೋಷಗಳಿಂದ ಈ ರೀತಿ ಮಾಡುತ್ತಿದ್ದಾರೆ ಆದರೆ ನಾನು ಮತ್ತೆ ಇವತ್ತು ಒಂದು ಸಿಸಿಎಪ್ ಅವರೊಗೆ ಅರ್ಜಿಯೊಂದನ್ನ ಕೊಟ್ಟಿದ್ದೆನೆ ಈ ವಿಚಾರದಲ್ಲಿ ನನಗೆ ಅವರ ಇಲಾಖೆಯ ಯಾವ ಅಧಿಕಾರಿಗಳು ಮಾಹಿತಿಯನ್ನ ಸರಿಯಾಗಿ ನೀಡುತ್ತಿಲ್ಲ.ದೂರುದಾರರು ವಿಚಾರಣೆಗೆ ಬರುತ್ತಿಲ್ಲ ಇಲಾಖೆ ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆಯನ್ನ ಮಾಡುತ್ತಿದೆ.. ಒಟ್ಟಿನಲ್ಲಿ ಧಾರವಾಡ ಅರಣ್ಯ ಇಲಾಖೆಯಲ್ಲಿಯ ಗೌಪ್ಯ ಮಾಹಿತಿಯನ್ನ ಹೊರಗಡೆ ಲೀಕ್ ಮಾಡಿದ್ದಾರೆ ಮೂರನೇಯ ವ್ಯಕ್ತಿಯ ಕಡೆಯಿಂದ ದೂರು ಕೊಡಸಿದ್ದಾರೆ ಎಂಬ ಆರೋಪದಡಿಯಲ್ಲಿ ತಮ್ಮದೆ ಆದ ಇಲಾಖೆಯ ಸಿಬ್ಬಂದಿಯನ್ನ ಅಮಾನತು ಮಾಡಿದ್ದಾರೆ.

ರಾಹುಲ್‌ ಜೊತೆ ಚರ್ಚೆಗೆ ಒಪ್ಪಲು ಮೋದಿಗೆ ಇನ್ನೂ ಧೈರ್ಯ ಬಂದಿಲ್ಲ: ಜೈರಾಂ ರಮೇಶ್‌

ಆದರೆ ಅದೆ ಸಿಬ್ಬಂದಿಗೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಗೀತಾ ಕುನ್ನೂರು ಎಂಬುವರು ಅದು ಖಾಸಗಿಯಾಗಿ ಅನಧಿಕೃತ ವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆ ಮಹಿಳಾ ಅಧಿಕಾರಿಯ ಮೆಲೆ ಯಾಕೆ ಕ್ರಮ ಆಗ್ತಿಲ್ಲ ಅವರನ್ನ ಅಲ್ಲೆ ಯಾಕೆ ಮತ್ತೆ ಕೆಲಸಕ್ಕೆ ಇಟ್ಟುಕ್ಕೊಂಡಿದ್ದಾರೆ, ಅವಳ ಮೆಲೆ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ. ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನ ಹಚ್ಚುತ್ತಿದ್ದಾರೆ. ಈ ವರದಿಯನ್ನಾದರೂ ನೋಡಿ ಆ ಮಹಿಳಾ ಅಧಿಕಾರಿಯ ಮೆಲೆ ಕ್ರಮ ಕೈಗೋಳ್ತಾರೆ ಎಂಬುದನ್ನ ಕಾಯ್ದು ನೋಡಬೇಕು.

click me!