ವರುಣನ ಅಬ್ಬರ: ಒಂದೇ ವಾರಕ್ಕೆ ಬೆಂಗ್ಳೂರು ಕೂಲ್ ಕೂಲ್..!

Published : May 15, 2024, 08:01 AM IST
ವರುಣನ ಅಬ್ಬರ: ಒಂದೇ ವಾರಕ್ಕೆ ಬೆಂಗ್ಳೂರು ಕೂಲ್ ಕೂಲ್..!

ಸಾರಾಂಶ

ಒಂದೇ ವಾರದಲ್ಲಿ ಇಡೀ ಬೆಂಗಳೂರಿನ ವಾತಾವರಣವೇ ಬದಲಾಗಿ ಹೋಗಿದೆ. ವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಯಾಗುತ್ತಿರುವುದರಿಂದ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದೆ. ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ವರದಿಯಾಗುತ್ತಿದೆ. ಹೀಗಾಗಿ, ಬೆಂಗಳೂರು ಸಂಪೂರ್ಣವಾಗಿ ತಂಪಾಗಿದೆ.

ಬೆಂಗಳೂರು(ಮೇ.15):  ಕಾದು ಕೆಂಡದಂತಾಗಿದ್ದ ರಾಜಧಾನಿ ಬೆಂಗಳೂರು ಕೇವಲ ಒಂದೇ ಒಂದು ವಾರದಲ್ಲಿ ಕೂಲ್ ಕೂಲ್ ಆಗಿದ್ದು, ಚಳಿಯ ವಾತಾವರಣ ಸೃಷ್ಟಿಯಾಗಿದೆ. ಕಳೆದ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ನಗರದಲ್ಲಿ ದಾಖಲೆಯ ಪ್ರಮಾಣ ಬಿಸಿಲು ಕಂಡು ಬಂದಿತ್ತು. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿತ್ತು. ಬಿಸಿಲಿನ ತಾಪಕ್ಕೆ ಬೆಂಗಳೂರಿನ ಜನರು ತತ್ತರಿಸಿ ಹೋಗಿದ್ದರು. ಉತ್ತರ ಕರ್ನಾಟಕದ ಜಿಲ್ಲೆಗಳಂತೆ ಸಿಲಿಕಾನ್ ಸಿಟಿ ಬೆಂಗಳೂರು ಬಾಸವಾಗುತ್ತಿತ್ತು.

ಜನರು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳು ಸಹ ಬಿಸಿಲ ತಾಪಕ್ಕೆ, ಬಿಸಿಗಾಳಿ, ಸೆಕೆಗೆ ನಲುಗಿ ಹೋಗಿದ್ದವು. ಒಂದೇ ವಾರದಲ್ಲಿ ಇಡೀ ಬೆಂಗಳೂರಿನ ವಾತಾವರಣವೇ ಬದಲಾಗಿ ಹೋಗಿದೆ. ವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಯಾಗುತ್ತಿರುವುದರಿಂದ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದೆ. ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ವರದಿಯಾಗುತ್ತಿದೆ. ಹೀಗಾಗಿ, ಬೆಂಗಳೂರು ಸಂಪೂರ್ಣವಾಗಿ ತಂಪಾಗಿದೆ. ಹತ್ತು ದಿನದ ಹಿಂದೆ ಎಸಿ, ಫ್ಯಾನ್ ಮತ್ತು ಕೊಲರ್‌ ಇಲ್ಲದೇ ಇರುವುದಕ್ಕೆ ಸಾಧ್ಯವಾಗುತ್ತಿ ರಲಿಲ್ಲ. ಇದೀಗ ಮೈ ತುಂಬಾ ಬೆಚ್ಚನೆಯ ಉಡುವು ಬೇಕು ಅನಿಸುವ ವಾತಾವರಣ ಸೃಷ್ಟಿಯಾಗಿದೆ.

ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

ಸುಮಾರು 10 ಡಿಗ್ರಿ ಇಳಿಕೆ

ಏಪ್ರಿಲ್ ಕೊನೆಯ ವಾರದಲ್ಲಿ ನಿರಂತರವಾಗಿ 37 ಡಿಗ್ರಿ, ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿತ್ತು. 27 0 28 2, ದಾಖಲಾಗುವ ಮೂಲಕ 10 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲುಕಡಿಮೆಯಾಗಿದೆ. ಗರಿಷ್ಠ ಉಷ್ಣಾಂಶಮಾತ್ರವಲ್ಲದೇ ಕನಿಷ್ಠ ಉಷ್ಣಾಂಶದಲ್ಲಿಯೂ ಇಳಿಕೆಯಾಗಿದೆ.

ರಾಜಧಾನಿ ಬೆಂಗಳೂರಲ್ಲಿ ಮುಂದುವರಿದ ವರ್ಷಧಾರೆ: ಸಿಲಿಕಾನ್‌ ಸಿಟಿ ಕೂಲ್‌ ಕೂಲ್‌..!

ನಗರದಲ್ಲಿ 33.3 ಡಿಗ್ರಿ ಸೆಲ್ಸಿಯಸ್ ಮೇ ತಿಂಗಳ ವಾಡಿಕೆಯ ಗರಿಷ್ಠ ಉಷ್ಣಾಂಶವಾಗಿದ್ದು, 21.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ವಾಡಿಕೆ ಉಷ್ಣಾಂಶವಾಗಿದೆ. ಮಂಗಳವಾರ ಬೆಂಗಳೂರು ನಗರದಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 20.2 ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ ಕನಿಷ್ಠ ಉಷ್ಣಾಂಶದಲ್ಲಿ ಕಡಿಮೆ ದಾಖಲಾಗಿದೆ. 

ಒಂದೇ ವಾರದಲ್ಲಿ ಇಡೀ ಬೆಂಗಳೂರಿನ ವಾತಾವರಣವೇ ಬದಲಾಗಿ ಹೋಗಿದೆ. ವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಯಾಗುತ್ತಿರುವುದರಿಂದ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದೆ. ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ವರದಿಯಾಗುತ್ತಿದೆ. ಹೀಗಾಗಿ, ಬೆಂಗಳೂರು ಸಂಪೂರ್ಣವಾಗಿ ತಂಪಾಗಿದೆ.

PREV
Read more Articles on
click me!

Recommended Stories

ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ