ವೇಶ್ಯವಾಟಿಕೆ ಜಾಲ : ಇಬ್ಬರು ಅರೆಸ್ಟ್-ಜೊತೆಗಿದ್ದ ಮಹಿಳೆಯರು ಪೋಷಕರ ಬಳಿಗೆ

Kannadaprabha News   | Asianet News
Published : Dec 16, 2020, 08:38 AM ISTUpdated : Dec 16, 2020, 12:18 PM IST
ವೇಶ್ಯವಾಟಿಕೆ ಜಾಲ : ಇಬ್ಬರು ಅರೆಸ್ಟ್-ಜೊತೆಗಿದ್ದ ಮಹಿಳೆಯರು ಪೋಷಕರ ಬಳಿಗೆ

ಸಾರಾಂಶ

ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ  ದಾಳಿ ನಡೆಸಿ ಹಲವು ಮಹಿಳೆಯರನ್ನು  ರಕ್ಷಿಸಲಾಗಿದೆ. 

ತುರುವೇಕೆರೆ (ಡಿ.16):  ವೇಶ್ಯವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಮೀನಾಕ್ಷಿ ನಗರದ ಮೂರ್ತಿ, ಸುಂಕಲಾಪುರದ ರಾಮಲಿಂಗಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಉಡಿಸಲಮ್ಮದೇವಿ ದೇವಸ್ಥಾನದ ಪಕ್ಕದಲ್ಲಿದ್ದ ಕೃಷ್ಣ ಎಂಬುವವರ ಮನೆಯನ್ನು ಪ್ರಮುಖ ಆರೋಪಿ ಮೂರ್ತಿ ಬಾಡಿಗೆ ಪಡೆದು ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದನೆಂದು ಹೇಳಲಾಗಿದೆ. 

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ..ಗ್ರಾಹಕರನ್ನು ಸೆಳೆಯಲು ಎಂಥಾ ಪ್ಲಾನ್!

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್‌ಐ ಪ್ರೀತಮ್‌ ನೇತೃತ್ವದ ತಂಡ ದಾಳಿ ಮಾಡಿ ಇಬ್ಬರು ಆರೋಪಿಗಳು ಸೇರಿದಂತೆ ನಾಲ್ವರು ಸಂತ್ರಸ್ತ ಮಹಿಳೆಯರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಸಂತ್ರಸ್ತ ಮಹಿಳೆಯರನ್ನು ಅವರ ಪೋಷಕರ ವಶಕ್ಕೆ ನೀಡಲಾಗಿದೆ. ಈ ಸಂಬಂಧಪಟ್ಟಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ತಾಳಿ ಕಟ್ಟುವ ಶುಭ ವೇಳೆ 'ಇವನು ನನ್ನ ಗಂಡ' ಎಂದ ಯುವತಿ; ಮಾಜಿ ಪ್ರೇಯಸಿ ರಾಕ್, ಮದುವೆ ಮನೇಲಿದ್ದವರು ಶಾಕ್!
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ