ಎಣ್ಣೆ ಪ್ರಿಯಕರ ಗಮನಕ್ಕೆ: ಗಣೇಶ ಹಬ್ಬದ ನಿಮಿತ್ತ ಮದ್ಯ ಮಾರಾಟ ನಿಷೇಧ

By Kannadaprabha NewsFirst Published Sep 22, 2023, 12:00 AM IST
Highlights

ಸಾರ್ವಜನಿಕ ಸ್ಥಳಗಳಲ್ಲಿನ ಪ್ರತಿಷ್ಠಾಪಿತ ಗಣೇಶ ಮೂರ್ತಿಗಳನ್ನು 5,7,9,11ನೇ ದಿನಗಳಿಗೆ ಆಯಾ ಸಂಘಟಿಕರು, ಸಾರ್ವಜನಿಕರು ಮೆರವಣಿಗೆ ಮೂಲಕ ಸ್ಥಳೀಯ ಆಡಳಿತ ನಿಗದಿಪಡಿಸಿದ ಸ್ಥಳಗಳಲ್ಲಿ ವಿಸರ್ಜನೆ ಕಾರ್ಯಕ್ರಮಗಳು ಜರುಗುತ್ತವೆ. ಈ ದಿನಾಂಕಗಳಂದು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಸಂಬಂಧಪಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಮದ್ಯ ಸಾಗಾಟ ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿದೆ.

ಗದಗ(ಸೆ.22): ಜಿಲ್ಲೆಯಾದ್ಯಂತ ಸೆ. 19ರಿಂದ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿನ ಪ್ರತಿಷ್ಠಾಪಿತ ಗಣೇಶ ಮೂರ್ತಿಗಳನ್ನು 5,7,9,11ನೇ ದಿನಗಳಿಗೆ ಆಯಾ ಸಂಘಟಿಕರು, ಸಾರ್ವಜನಿಕರು ಮೆರವಣಿಗೆ ಮೂಲಕ ಸ್ಥಳೀಯ ಆಡಳಿತ ನಿಗದಿಪಡಿಸಿದ ಸ್ಥಳಗಳಲ್ಲಿ ವಿಸರ್ಜನೆ ಕಾರ್ಯಕ್ರಮಗಳು ಜರುಗುತ್ತವೆ. ಈ ದಿನಾಂಕಗಳಂದು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಸಂಬಂಧಪಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಮದ್ಯ ಸಾಗಾಟ ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿದೆ.

ಗದಗ ಶಹರ ಹಾಗೂ ಗದಗ ತಾಲೂಕು ವ್ಯಾಪ್ತಿಯಲ್ಲಿ ಸೆ. 22ರ ಮಧ್ಯರಾತ್ರಿಯಿಂದ ಸೆ. 24ರ ಬೆಳಗಿನ 6 ಗಂಟೆಯವರೆಗೆ, ಸೆ. 26ರ ಮದ್ಯರಾತ್ರಿಯಿಂದ ಸೆ. 28ರ ಬೆಳಗಿನ 6 ಗಂಟೆಯವರೆಗೆ, ಸೆ. 28ರಂದು ಮದ್ಯರಾತ್ರಿಯಿಂದ ಸೆ. 30ರ ಬೆಳಗಿನ 6 ಗಂಟೆಯವರೆಗೆ. ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಸೆ.21ರ ಮಧ್ಯರಾತ್ರಿಯಿಂದ ಸೆ. 23ರ ಬೆಳಗ್ಗೆ 6ರ ವರೆಗೆ, ಸೆ.23ರಂದು ಮಧ್ಯರಾತ್ರಿಯಿಂದ ಸೆ. 25ರ ಬೆಳಗಿನ 6ರ ವರೆಗೆ, ಸೆ.25ರ ಮಧ್ಯರಾತ್ರಿಯಿಂದ ಸೆ.27 ರ ಬೆಳಗಿನ 6ರ ವರೆಗೆ. ರೋಣ ಹಾಗೂ ಗಜೇಂದ್ರಗಡ ತಾಲೂಕ ವ್ಯಾಪ್ತಿಯಲ್ಲಿ ಸೆ.21 ರ ಮಧ್ಯರಾತ್ರಿಯಿಂದ ಸೆ.23 ರ ಬೆಳಗ್ಗೆ 6 ರ ವರೆಗೆ, ಸೆ.23ರ ಮಧ್ಯರಾತ್ರಿಯಿಂದ ಸೆ.25 ರ ಬೆಳಗಿನ 6ರ ವರೆಗೆ, ಸೆ.28 ರ ಮಧ್ಯರಾತ್ರಿಯಿಂದ ಸೆ.30ರ ಬೆಳಗಿನ 6 ಗಂಟೆಯವರೆಗೆ.

ವರದಕ್ಷಿಣೆ ಕಿರುಕುಳ: ಮದುವೆಯಾಗಿ ನಾಲ್ಕೇ ತಿಂಗಳಿಗೆ ಮಸಣ ಸೇರಿದ ಯುವತಿ!

ನರಗುಂದ ತಾಲೂಕು ವ್ಯಾಪ್ತಿಯಲ್ಲಿ ಸೆ. 21ರ ಮಧ್ಯರಾತ್ರಿಯಿಂದ ಸೆ. 23ರ ಬೆಳಗ್ಗೆ 6ರ ವರೆಗೆ, ಸೆ.25 ರ ಮಧ್ಯರಾತ್ರಿಯಿಂದ ಸೆ.27 ರ ಬೆಳಗಿನ 6ರ ವರೆಗೆ, ಸೆ.27ರ ಮಧ್ಯರಾತ್ರಿಯಿಂದ ಸೆ.29ರ ಬೆಳಗಿನ 6ರ ವರೆಗೆ.
ಮುಂಡರಗಿ ತಾಲೂಕ ವ್ಯಾಪ್ತಿಯಲ್ಲಿ ಸೆ.21 ರ ಮಧ್ಯರಾತ್ರಿಯಿಂದ ಸೆ.23ರ ಬೆಳಗಿನ 6 ಗಂಟೆಯವರೆಗೆ, ಸೆ.23 ರ ಮದ್ಯರಾತ್ರಿಯಿಂದ ಸೆ.25 ರ ಬೆಳಗ್ಗೆ 6ರ ವರೆಗೆ, ಸೆ.25 ರ ಮಧ್ಯರಾತ್ರಿಯಿಂದ ಸೆ. 27ರ ಬೆಳಗ್ಗೆ 6ರ ವರೆಗೆ ಮದ್ಯ ಸಾಗಾಟ ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿದೆ.

ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸದರ ದಿನಗಳಂದು ಯಾವತ್ತೂ ಬಾರುಗಳು, ಕ್ಲಬ್‌ಗಳು ಬಿಯರ್, ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳನ್ನು ಮೇಲ್ಕಾಣಿಸಿದ ಅವಧಿಯಲ್ಲಿ ಮುಚ್ಚತಕ್ಕದ್ದು. ಅಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ವಲಯ ಅಬಕಾರಿ ಇನ್ಸ ಪೆಕ್ಟರ್ ಹಾಗೂ ಅಬಕಾರಿ ಉಪ-ಆಯುಕ್ತರು, ಕರ್ನಾಟಕ ಅಬಕಾರಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ದಂಡಾದಿಕಾರಿಗಳಾದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆದೇಶಿಸಿದ್ದಾರೆ.

click me!