ಚಿಕ್ಕಮಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯಬೇಕಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನ ವಿರೋಧಿಸಿ ವಿವಿಧ ಸಂಘಟನೆಗಳು ಶೃಂಗೇರಿ ಬಂದ್‌ಗೆ ಕರೆ ನೀಡಿದ್ದುಮ ಭಕ್ತರು ಆಗಮಿಸದಂತೆ ಮನವಿ ಮಾಡಿವೆ.
ಚಿಕ್ಕಮಗಳೂರು [ಜ.09]: ಶೃಂಗೇರಿ ಪಟ್ಟಣದಲ್ಲಿ ಜ.10 ಹಾಗೂ 11ರಂದು ನಡೆಯಲಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೈಬಿಡುವಂತೆ ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿದೆ. ಅಲ್ಲದೇ ಇಲ್ಲಿನ ಪ್ರಸಿದ್ಧ ಶಾರದಾ ಪೀಠಕ್ಕೆ ಭಕ್ತರು ಆಗಮಿಸದಂತೆ ಮನವಿ ಮಾಡಲಾಗಿದೆ.
16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆ ಆಯ್ಕೆ ಮಾಡಲಾಗಿದ್ದು, ಇವರ ಆಯ್ಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಅಧ್ಯಕ್ಷರ ಆಯ್ಕೆ ವಿರೋಧಿಸಿ ಸಮ್ಮೇಳನ ಕೈ ಬಿಡಲು ಆಗ್ರಹಿಸಿ ಕರವೇ, ಬಜರಂಗದಳ, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್, ಎಬಿವಿಪಿ, ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಹೋರಾಟ ಸಮಿತಿ ಹಾಗೂ ನಕ್ಸಲ್ ವಿರೋಧಿ ಹೋರಾಟ ಸಮಿತಿ ಜ.10ರಂದು ಶೃಂಗೇರಿ ಚಲೋ-ಶೃಂಗೇರಿ ಬಂದ್‌ಗೆ ಕರೆ ನೀಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಳಗ್ಗೆ 10 ಗಂಟೆಯಿಂದ ಶೃಂಗೇರಿ ಹೊಸ ಬಸ್ ನಿಲ್ದಾಣದಿಂದ ಸಂತೆ ಮಾರುಕಟ್ಟೆವರೆಗೆ ಪ್ರತಿಭಟನೆ ರಾರಯಲಿ, ಸಭೆ ನಡೆಯಲಿದೆ.
ಬಂದ್ ಗೆ ಕರೆ ನೀಡಿರುವ ಫೊಟೊಗಳು ವೈರಲ್ ಆಗಿದ್ದು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಭಕ್ತನಿಂದ ಹೊರಬಿತ್ತು ಫೋಟೋ: ವಿನಯ್ ಗುರೂಜಿಗೆ ಸಂಕಷ್ಟ..!...
ಆದರೆ ಪೊಲೀಸ್ ಇಲಾಖೆಯಿಂದ ಈವರೆಗೂ ಕೂಡ ಶೃಂಗೇರಿ ಬಂದ್ ಹಾಗೂ ಸಾಗಿತ್ಯ ಸಮ್ಮೇಳನ ಎರಡಕ್ಕೂ ಕೂಡ ಯಾವುದೇ ರೀತಿಯ ಅನುಮತಿ ನೀಡಲಾಗಿಲ್ಲ.