ಕೋಲಾರದಲ್ಲಿ ಒಂದಾದ್ರು JDS, BJP, ಕಾಂಗ್ರೆಸ್ ಶಾಸಕರು..!

By Kannadaprabha NewsFirst Published Jan 9, 2020, 11:24 AM IST
Highlights

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರು ಒಂದಾದ್ರೆ ಹೇಗಿರಬಹುದು..? ಇದು ಸಾಧ್ಯವೇ ಇಲ್ಲ ಎಂದು ಅನಿಸುತ್ತಾ..? ಕೋಲಾರದಲ್ಲಿ ಮಾತ್ರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಜೊತೆಯಾಗಿದ್ದಾರೆ. ಯಾಕೆ, ಏನು..? ಎಲ್ಲಿ..? ಇಲ್ಲಿ ಓದಿ.

ಕೋಲಾರ(ಜ.09): ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಾಸಕರು ನಗರದ ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಕೋಲಾರಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ.

ಶಾಸಕ ಎಸ್‌.ಕುಮಾರ್‌ ಬಂಗಾರಪ್ಪ ನೇತೃತ್ವದ ಸಮಿತಿ ಸದಸ್ಯರಿಂದ ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನ ಸಭೆ ಇತ್ತು. ಸಭೆಗೂ ಮುನ್ನ ಶಕ್ತಿ ದೇವತೆ ಕೋಲಾರಮ್ಮ ದೇವಸ್ಥಾನಕ್ಕೆ 8 ಶಾಸಕರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಪೌರತ್ವ ಕಾಯ್ದೆ: ಗಲಭೆಗೆ ಜಲ್ಲಿಕಲ್ಲು ಶೇಖರಿಸಿಟ್ಟವರ ಬಂಧನ..!

ಪಕ್ಷ ಬೇರೆ ಆದರೂ ಎಲ್ಲರೂ ಒಟ್ಟಿಗೆ ಭೇಟಿ ಕೊಟ್ಟಿದ್ದರು. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಈ ವೇಳೆ ಇದ್ದರು. ಕೋಲಾರಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕುಮಾರ್‌ ಬಂಗಾರಪ್ಪ ಸೇರಿದಂತೆ ಕೆಲ ಶಾಸಕರು ನಂತರ ಮುಳಬಾಗಲು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು.

ವೆಂಕಟರಮಣಯ್ಯ -ದೊಡ್ಡಬಳ್ಳಾಪುರ (ಕಾಂಗ್ರೆಸ್‌), ಕುಸುಮಾವತಿ ಶಿವಳ್ಳಿ -ಕುಂದಗೋಳ(ಕಾಂಗ್ರೆಸ್‌), ಉಮಾನಾಥ್‌ ಕೋಟ್ಯಾನ್‌ -ಮೂಡಬಿಡರೆ(ಬಿಜೆಪಿ), ದೇವಾನಂದ ಚೌಹಾಣ್‌ - ನಾಗಠಾಣಾ(ಜೆಡಿಎಸ್‌), ರಾಜ ವೆಂಕಟಪ್ಪ ನಾಯ್ಕ್ -ಮಾನ್ವಿ (ಜೆಡಿಎಸ್‌), ವಿರೂಪಾಕ್ಷಪ್ಪ ರುದ್ರಪ್ಪ ರುದ್ರಪ್ಪ -ಬ್ಯಾಡಗಿ (ಬಿಜೆಪಿ), ಪ್ರಸನ್ನ ಕುಮಾರ್‌ - ಎಂಎಲ್ಸಿ ಭೇಟಿ ಕೊಟ್ಟಶಾಸಕರು.

ಮತ ಸೆಳೆಯೋಕೆ ಸರ್ಕಾರಿ ಲಾಂ‍ಛನ ಬಳಕೆ..!

click me!