'ಬಿಜೆಪಿ ಸರ್ಕಾರ ಜನವಿರೋಧಿ ನೀತಿ ಕೈಬಿಡಲಿ'

By Kannadaprabha NewsFirst Published Jan 26, 2021, 11:14 AM IST
Highlights

ಬಿಜೆಪಿ ಸರ್ಕಾರ ಜನರ ಸಂಕಷ್ಟದ ಬಗ್ಗೆ ಚಿಂತೆ ಮಾಡಿಲ್ಲ| ಅಂಬಾನಿ, ಟಾಟಾ, ಸೇರಿದಂತೆ ಮೂರ್ನಾಲ್ಕು ಅತಿ ದೊಡ್ಡ ಬಂಡವಾಳ ಶಾಹಿಗಳ ಅನುಕೂಲಕ್ಕೆ ಬೇಕಾಗುವ ರೀತಿಯಲ್ಲಿ ಕಾನೂನು ಜಾರಿಗೆ ತರುವ ಮೂಲಕ ದೇಶದ ಆರ್ಥಿಕ ಸ್ಥಿತಿ ಗತಿ ತುಂಬಾ ನೆಲಕಚ್ಚುವಂತೆ ಮಾಡಿದೆ: ಮಹಮ್ಮದರಫೀಕ ಶಿರೋಳ| 

ಮುದ್ದೇಬಿಹಾಳ(ಜ.26): ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಗಳು ರೈತ ಮತ್ತು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ದುರಾಡಳಿತ ನಡೆಸುವ ಮೂಲಕ ಮೊಂಡುತನ ಪ್ರದರ್ಶಿಸುತ್ತಿದೆ. ಹೀಗಾಗಿ ಬಿಜೆಪಿ ಸರ್ಕಾರ ಜನವಿರೋಧಿ ನೀತಿಗಳನ್ನು ಹಿಂಪಡೆಯಬೇಕು, ದೆಹಲಿಯಲ್ಲಿ ಧರಣಿ ನಿರತ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ತಾಲೂಕು ಯೂಥ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮಹಮ್ಮದರಫೀಕ ಶಿರೋಳ ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಜನರ ಸಂಕಷ್ಟದ ಬಗ್ಗೆ ಚಿಂತೆ ಮಾಡಿಲ್ಲ. ಆದರೆ ಅಂಬಾನಿ, ಟಾಟಾ, ಸೇರಿದಂತೆ ಮೂರ್ನಾಲ್ಕು ಅತಿ ದೊಡ್ಡ ಬಂಡವಾಳ ಶಾಹಿಗಳ ಅನುಕೂಲಕ್ಕೆ ಬೇಕಾಗುವ ರೀತಿಯಲ್ಲಿ ಕಾನೂನು ಜಾರಿಗೆ ತರುವ ಮೂಲಕ ದೇಶದ ಆರ್ಥಿಕ ಸ್ಥಿತಿ ಗತಿ ತುಂಬಾ ನೆಲಕಚ್ಚುವಂತೆ ಮಾಡಿದೆ ಎಂದು ಆರೋಪಿಸಿದರು.

ವಿಜಯಪುರ; ಕುಡುಕರ ಅಡ್ಡೆಯಾದ ಐಬಿ, ಗುತ್ತಿಗೆದಾರಂದೆ ಹವಾ!

ಮಹಾ ಸಿಎಂ ಠಾಕ್ರೆ ಬೆಳಗಾವಿ ನಮ್ಮದು ಎಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರಿಗೆ ಕಿಚ್ಚು ಹಚ್ಚುವ ಪ್ರಯತ್ನ ಮಾಡಿದ್ದಾರೆ. ಸಿಎಂ ಯಡಿಯೂರಪ್ಪನವರು ಬೆಳಗಾವಿ ಬಗ್ಗೆ ತುಟಿಬಿಚ್ಚದೆ ಕುರ್ಚಿಗಾಗಿ ಆಡಳಿತ ನಡೆಸುತ್ತಿದ್ದಾರೆ. ಜನಪರ, ರೈತಪರ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದಾರೆ ಎಂದರು.

ಹೀಗಾಗಿ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ಬಂಡವಾಳಶಾಹಿಗಳ ಕೈಗೊಂಬೆಯಂತೆ ಕೋಮುವಾದಿಗಳನ್ನು ಸೃಷ್ಟಿಸಿ. ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸಿ ಜನರನ್ನು ದಾರಿತಪ್ಪಿಸುತ್ತಿವೆ. ಇದನ್ನು ಖಂಡಿಸಿ ಸರ್ಕಾರಗಳ ವಿರುದ್ಧ ಹೋರಾಟ ನಡೆಸಿದರೆ ಪೊಲೀಸ್‌ ಹಾಗೂ ಸಿಬಿಐ, ಐಟಿ, ಇಡಿ ಅಂತಹ ಪ್ರಬಲ ಇಲಾಖೆಗಳನ್ನು ಬಳಸಿಕೊಂಡು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂದೂ ಆರೋಪಿಸಿದರು.
 

click me!