ಮೋದಿ ಅಭಿವೃದ್ಧಿ ಕಾರ್ಯ ಭಾರತೀಯರ ಸೌಭಾಗ್ಯ: ರಂಭಾಪುರಿ ಶ್ರೀ

By Kannadaprabha News  |  First Published Jan 21, 2023, 9:00 PM IST

ತುಳಿತಕ್ಕೊಳಗಾದ, ಆರ್ಥಿಕವಾಗಿ ದುರ್ಬಲರಾದವರು ಮೀಸಲಾತಿ ಕೇಳಲಿ: ರಂಭಾಪುರಿ ಶ್ರೀಗಳ ಅಭಿನುಡಿ


ನಿಡಗುಂದಿ(ಜ.21): ಪ್ರಧಾನಿ ನರೇಂದ್ರ ಮೋದಿ ಯಾವುದೇ ಟೀಕೆಗಳಿಗೆ ಕಿವಿಗೊಡದೇ ದೇಶದ ಭದ್ರತೆ ಮತ್ತು ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ನಿರಂತರ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿರುವುದು ಭಾರತೀಯರ ಸೌಭಾಗ್ಯವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು. ಪಟ್ಟಣದ ಗುತ್ತಿಗೆದಾರ ಬಸವರಾಜ ಬಾದರದಿನ್ನಿ ಅವರ ಮನೆಯಲ್ಲಿ ಗುರುವಾರ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ, ನಡತೆ, ಗುಣಧರ್ಮ ಪಕ್ಷ, ಜಾತಿ ಭೇದ ಮರೆತು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಂಥವರ ವಿಚಾರಧಾರೆಗಳನ್ನು ಬೆಳೆಯುವ ರಾಜಕಾರಣಿಗಳು ಬೆಳೆಸಿ ಜನರಿಗೆ ಒಳ್ಳೆಯದಾಗುವ ಕಾರ್ಯ ಮಾಡುವಂತಾಗಲಿ ಎಂದರು.

ಎಲ್ಲ ಜಾತಿ, ಜನಾಂಗದವರು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ದೇಶದ ಸಂವಿಧಾನದಲ್ಲಿ ಯಾರಿಗೆ ಎಷ್ಟುಮೀಸಲಾತಿ ನೀಡಬೇಕೇನ್ನುವ ನಿಬಂಧನೆಯಿದ್ದು ಅದನ್ನು ಅನುಸರಿಸಿ ಚಾಲನೆಗೆ ತರುವುದು ರಾಜಕಾರಣಿಗಳ ಕರ್ತವ್ಯವಾಗಿದೆ. ತುಳಿತಕ್ಕೊಳಗಾದ ಹಾಗೂ ಆರ್ಥಿಕವಾಗಿ ದುರ್ಬಲರಾದವರು ಮೀಸಲಾತಿ ಕೇಳಲಿ. ಅವರಿಗೆ ಮೀಸಲಾತಿ ಸೌಲತ್ತುಗಳು ಕೊಡಲಿ. ಉನ್ನತ ಜಾತಿಯಲ್ಲಿದ್ದು, ಬಡವರಾಗಿದ್ದರೇ ಆ ಜಾತಿ, ಜನಾಂಗ ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

Latest Videos

undefined

ವಿಜಯಪುರದಲ್ಲಿ ಜೆ.ಪಿ ನಡ್ಡಾ ಹವಾ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು!

ಚುನಾವಣೆ ಸಮೀಪದಲ್ಲಿ ಎಲ್ಲ ಪಕ್ಷಗಳು ಪರಸ್ಪರ ಧರ್ಮ ಮತ್ತು ಜಾತಿಗಳ ಸಂಘರ್ಷ ಅತಿರೇಕವಾಗಿ ಬೆಳೆಸುವಂತ ಸಂದರ್ಭಗಳನ್ನು ಜನ ನೋಡಿ ಬೇಸರಗೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ಈ ರೀತಿ ಮಾತುಗಳು, ಸಂಘರ್ಷಣೆ ಸಂದರ್ಭಗಳು ಒದಗಿಬರಬಾರದು. ಒಂದು ಸಮಾಜದ ಜತೆಗೆ ಇನ್ನೊಂದು ಸಮಾಜದ ಸಂಘರ್ಷ ನಡೆಯುತ್ತಿರುವುದು ಅವನತಿಗೆ ಹಾಗೂ ಪ್ರಗತಿಗೆ ಅಡ್ಡಿಯಾಗುತ್ತದೆ. ಇದು ಎಲ್ಲ ರಾಜಕಾರಣಿಗಳಿಗೆ ಗೊತ್ತಿದ್ದರೂ ಪ್ರಚೋದನೆ ಕೊಡುತ್ತಿರುವುದು ಒಳ್ಳೆಯದಲ್ಲ. ಆದಷ್ಟುಎಲ್ಲ ಸಮುದಾಯದ ಜನರನ್ನು ಒಟ್ಟೊಟ್ಟಿಗೆ ಕರೆದೊಯ್ಯುವ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುವ ಜತೆಗೆ ನಾಡಿಗೆ ಅನ್ನ ನೀಡುವ ರೈತರ ಸಮಸ್ಯೆಗಳ ಪರಿಹರಿಸಿ ಅವರ ಬೆಳೆದ ಬೆಲೆಗೆ ಬೆಂಬಲ ಬೆಲೆ ನೀಡುವ ಅಗತ್ಯವಿದೆ ಎಂದರು.

ರಂಭಾಪುರಿ ಜಗದ್ಗುರು ಧರ್ಮಪೀಠ ಯಾವಾಗಲು ಹಸಿರು ಧ್ವಜವನ್ನು ಎತ್ತಿ ಜಗತ್ತಿನಲ್ಲಿ ಶಾಂತಿ ಮತ್ತು ಭಾವೈಕ್ಯತೆಯ ಸಂದೇಶ ನೀಡುತ್ತಿದೆ. ಮುಂದೆ ಎಂದೆಂದಿಗೂ ಈ ಪವಿತ್ರ ಕಾರ್ಯವನ್ನು ಮಾಡುತ್ತದೆ. ರಾಜಕಾರಣಿಗಳು ಧರ್ಮದ ಹಾಗೂ ಧರ್ಮಸಂಸ್ಕೃತಿಯ ಆದರ್ಶ ಮೌಲ್ಯಗಳನ್ನು ಎತ್ತಿಹಿಡಿದು ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯ ಮಾಡಲಿ ಎಂದರು.

ಮಾನವೀಯ ಆದರ್ಶ ಮೌಲ್ಯಗಳನ್ನು ಪುನಶ್ಚೇತನಗೊಳಿಸುವ ಕಾರ್ಯದಲ್ಲಿ ಸದಾ ಶ್ರಮಿಸಿದ ಚಿಮ್ಮಲಗಿ ಅರಳಲೆ ಕಟ್ಟಿಮನಿ ಹಿರೇಮಠದ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಜೀಗಳು ಅಗಲಿದರೂ ಅವರು ಮಾಡಿದ ಸತ್ಕಾರ್ಯಗಳಿಂದ ಭಕ್ತರ ಮನಸ್ಸಿನಲ್ಲಿ ನೆನಹು ಶಾಶ್ವತವಾಗಿದೆ. ಅವರು, ಬದುಕಿನೂದ್ದಕ್ಕೂ ಸವಾಲುಗಳನ್ನು ಎದುರಿಸಿ ಸತ್ಯ, ಸಂಸ್ಕೃತಿ ಪುನರುತ್ಥಾನಕ್ಕಾಗಿ ಸದಾ ಶ್ರಮಿಸಿದರು. ಪರಮ ತಪಸ್ವಿ ಲಿಂ.ಶ್ರೀಮದ್‌ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗರಡಿಯಲ್ಲಿ ಪಳಗಿ ಗುರು ಕಾರುಣ್ಯ ಪಡೆದರು. ಪೂಜಾ ತಪಸ್ಸು ಧ್ಯಾನದ ಮೂಲಕ ಭಕ್ತರ ಬಾಳ ಬದುಕನ್ನು ಹಸನುಗೊಳಿಸಿದರು. ಮಾನವ ಜೀವನ ತೆರೆದಿಟ್ಟಪುಸ್ತಕ. ಮೊದಲ ಪುಟದಲ್ಲಿ ಹುಟ್ಟು ಕೊನೆ ಪುಟದಲ್ಲಿ ಮೃತ್ಯು ಭಗವಂತ ಬರೆದಿಟ್ಟಿದ್ದಾನೆ. ಇವೆರಡರ ಮಧ್ಯದ ಬದುಕನ್ನು ಸಮರ್ಥವಾಗಿ ಕಟ್ಟಿಕೊಂಡು ವೀರಶೈವ ಧರ್ಮ ಸಂಸ್ಕೃತಿಗೆ ಸದಾ ದುಡಿದವರು ಎಂದರು.

Big3 ಹಸಿದವರ ಹೊಟ್ಟೆ ತುಂಬಿಸೋ ಕಾಯಕಯೋಗಿ: ಚಿನ್ನಾಭರಣದ ಬ್ಯಾಗ್ ಮರಳಿ‌ಸಿ ಎಲ್ಲರ ಮನ ಗೆದ್ದ ಸಾರಿಗೆ ಸಿಬ್ಬಂದಿ

ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಿದ್ದರೇಣುಕ ಶಿವಾಚಾರ್ಯ ಸ್ವಾಮೀಜಿಗಳಿಗೆ ಉತ್ತಾರಾಧಿಕಾರತ್ವ ನೀಡಿದರು. ನೂತನ ಶ್ರೀಗಳು ಹಿರಿಯ ಶ್ರೀಗಳ ಆದರ್ಶಗಳನ್ನು ಪರಿಪಾಲಿಸಿ ಭಕ್ತ ಸಮೂಹಕ್ಕೆ ಮಾರ್ಗದರ್ಶನ ನೀಡುವರೆಂದು ಆತ್ಮವಿಶ್ವಾಸ ನಮ್ಮದಾಗಿದೆ ಎಂದರು.

ನಾರಾಯಣಪುರ ಜಲಾಶಯದಿಂದ ಹೆಚ್ಚಿನ ಜನರ ಆರ್ಥಿಕಮಟ್ಟದ ಬೆಳವಣಿಗೆ ಹೊಸ ಯೋಜನೆ ನೀಡಿದ ದೇಶದ ಪ್ರಧಾನಿ ನರೇಂದ್ರ ಮೋದಿ ಕಾರ್ಯ ಮೆಚ್ಚುವಂತದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಉದ್ದಗಲಕ್ಕೂ ಕೈಗೊಳ್ಳುವ ರಚನಾತ್ಮಕ ಕಾರ್ಯಗಳು ಬೆಳೆಯುವ ರಾಜಕಾರಣಿಗಳಿಗೆ ದಾರಿ ದೀಪವಾಗಿವೆ ಅಂತ ರಂಭಾಪುರಿ ಪೀಠ ಬಾಳೆಹೊನ್ನೂರು ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ. 

click me!