ಕೈದಿಗಳು ಜೈಲು ಸಿಬ್ಬಂದಿಯಿಂದ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ದರ್ಶನ್ ನೋಡಲು ಅವಕಾಶ ಸಿಗುತ್ತೆ ಎನ್ನುವ ನಿಟ್ಟಿನಲ್ಲಿ ಜೈಲಿನಲ್ಲಿರುವ ಕೈದಿಗಳು ಖುಷಿ ಪಟ್ಟಿದ್ದಾರೆ. ಸದ್ಯ 385 ಕೈದಿಗಳು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. 100 ಜನ ಕೊಲೆ ಆರೋಪಿಗಳು, 38 ರೌಡಿಗಳಿದ್ದರೆ. ಇನ್ನುಳಿದಂತೆ ಬೇರೆ ಬೇರೆ ಕೇಸ್‌ಗಳಿಗೆ ಸಂಬಂಧಿಸಿದ ಕೈದಿಗಳಿದ್ದಾರೆ.
ಬಳ್ಳಾರಿ(ಆ.27): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್‌ಗೆ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಲ್ಲಿರುವ ಕೈದಿಗಳಿಗೆ ನಟನನ್ನು ನೋಡುವ ಕಾತರ ಹೆಚ್ಚಾಗಿದೆ.
ಹೌದು, ಕೈದಿಗಳು ಜೈಲು ಸಿಬ್ಬಂದಿಯಿಂದ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ದರ್ಶನ್ ನೋಡಲು ಅವಕಾಶ ಸಿಗುತ್ತೆ ಎನ್ನುವ ನಿಟ್ಟಿನಲ್ಲಿ ಜೈಲಿನಲ್ಲಿರುವ ಕೈದಿಗಳು ಖುಷಿ ಪಟ್ಟಿದ್ದಾರೆ. ಸದ್ಯ 385 ಕೈದಿಗಳು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. 100 ಜನ ಕೊಲೆ ಆರೋಪಿಗಳು, 38 ರೌಡಿಗಳಿದ್ದರೆ. ಇನ್ನುಳಿದಂತೆ ಬೇರೆ ಬೇರೆ ಕೇಸ್‌ಗಳಿಗೆ ಸಂಬಂಧಿಸಿದ ಕೈದಿಗಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್‌ಗೆ ಎ1 ಆರೋಪಿ ಸ್ಥಾನ ಕೊಡಲು ನಿರ್ಧಾರ?
ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಕಾರಾಗೃಹದ ಬಳಿ ಬಿಗಿ ಭದ್ರತೆಯನ್ನ ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.