ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ: ಬಿಜೆಪಿಗರ ವಿರುದ್ಧ ಕಾಂಗ್ರೆಸ್‌ ನಾಯಕ ಗರಂ

By Girish Goudar  |  First Published Aug 27, 2024, 7:05 PM IST

ವಿರೋಧ ಪಕ್ಷದವರು ಸುಮ್ಮನೆ ಆರೋಪ ಮಾಡಬಾರದು. ದರ್ಶನ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ವಿಶೇಷ ಆತಿಥ್ಯದ ಬಗ್ಗೆ ವಿಷಾದವಿದೆ, ಬೇಸರವಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೂ ಬೇಸರವಿದೆ. ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಸಮರ್ಥನೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ ಎ.ಎಸ್.ಪೊನ್ನಣ್ಣ 


ಕೊಡಗು(ಆ.27):  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಪ್ರಕರಣದಲ್ಲಿ ಏನು ನಡೆದಿತ್ತು?. ಆಗ ರಾಜ್ಯದಲ್ಲಿ ಯಾವ ಸರ್ಕಾರವಿತ್ತು, ಗೃಹ ಸಚಿವರು ಯಾರಿದ್ದರು? ಎಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ವಿಶೇಷ ಆತಿಥ್ಯ ದೊರೆತ್ತಿರುವುದಕ್ಕೆ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಕ್ಕೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇಂದು(ಮಂಗಳವಾರ) ವಿರಾಜಪೇಟೆಯಲ್ಲಿ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು, ವಿರೋಧ ಪಕ್ಷದವರು ಸುಮ್ಮನೆ ಆರೋಪ ಮಾಡಬಾರದು. ದರ್ಶನ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ವಿಶೇಷ ಆತಿಥ್ಯದ ಬಗ್ಗೆ ವಿಷಾದವಿದೆ, ಬೇಸರವಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೂ ಬೇಸರವಿದೆ. ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಸಮರ್ಥನೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Tap to resize

Latest Videos

undefined

Kodagu: ದೇವಾಲಯಕ್ಕೆ ಕನ್ನ ಹಾಕಿ ದೇವರ ಚಿನ್ನಾಭರಣ, ಹುಂಡಿ ದೋಚಿದ್ದ ಖದೀಮರು ಅಂದರ್!

ದರ್ಶನ್ ಪ್ರಕರಣದಲ್ಲಿ ಬಿಜೆಪಿಯ ಎಷ್ಟು ಸಂಸದರು, ಶಾಸಕರು‌  ಹಸ್ತಕ್ಷೇಪ ಮಾಡುತ್ತಾ ಇದ್ದಾರೆ?. ಅದರ ಬಗ್ಗೆ ವಿರೋಧ ಪಕ್ಷದವರು ಹೇಳಲಿ ನೋಡೋಣ. ಪ್ರಕರಣದಲ್ಲಿ ಇವರ ಎಷ್ಟು ಶಾಸಕರು ಮಧ್ಯಪ್ರವೇಶ ಮಾಡಿದ್ದಾರೆ ಗೊತ್ತಿಲ್ವಾ. ಇಂತಹ ಪ್ರಕರಣದಲ್ಲಿ‌ ಭಾಗಿಯಾಗುತ್ತಿರುವವರು ಬಿಜೆಪಿ‌, ಜೆಡಿಎಸ್ ಶಾಸಕರು. ಆರೋಪ ಮಾತ್ರ ನಮ್ಮ ಮೇಲೆ ಮಾಡ್ತಾರೆ ಎಂದು  ಶಾಸಕ ಎ.ಎಸ್.ಪೊನ್ನಣ್ಣ ಗರಂ ಆಗಿದ್ದಾರೆ. 

click me!