Kannda Dindima: ದೇಶಕ್ಕೆ ಪ್ರಧಾನಿ ಮೋದಿಯಿಂದ ಶಕ್ತಿ ಬಂದಿದೆ: ತರಳಬಾಳು ಶ್ರೀ

By Kannadaprabha News  |  First Published Feb 26, 2023, 7:40 AM IST

ಭಾರತಕ್ಕೆ ಪ್ರಧಾನಿ ಮೋದಿಯಿಂದ ಬಹುದೊಡ್ಡ ಶಕ್ತಿ ಬಂದಿದೆ. ಇಡೀ ಜಗತ್ತೇ ಇಂದು ಭಾರತ ದೇಶದ ಕಡೆಗೆ ತಿರುಗಿ ನೋಡುವಂತಾಗಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಸಿರಿಗೆರೆ (ಫೆ.26) : ಭಾರತಕ್ಕೆ ಪ್ರಧಾನಿ ಮೋದಿಯಿಂದ ಬಹುದೊಡ್ಡ ಶಕ್ತಿ ಬಂದಿದೆ. ಇಡೀ ಜಗತ್ತೇ ಇಂದು ಭಾರತ ದೇಶದ ಕಡೆಗೆ ತಿರುಗಿ ನೋಡುವಂತಾಗಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ(Dr. Shivamurthy Shivacharya Swamiji) ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯ(PM Narendra Modi)ವರು ಇಂದು ಸಂಜೆ ದೆಹಲಿಯ ಕರ್ನಾಟಕ ಸಂಘ(Karnataka Association of Delhi)ದ ಅಮೃತ ಮಹೋತ್ಸವ(Amrit mahotsav) ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಭಾರತ ದೇಶದ ಗೌರವ ಮತ್ತು ಪ್ರತಿಷ್ಠೆಗಳು ಮೋದಿಯವರ ಕಾಲದಲ್ಲಿ ಬಹು ಎತ್ತರಕ್ಕೆ ಹೋಗಿವೆ ಎಂದರು.

Latest Videos

undefined

ಬೆಲೆ ಏರಿಕೆ ಆಗ್ತಿದೆ ಅಂತಾ ಬೊಬ್ಬೆ ಹಾಕುವ ಬದಲು ಶ್ರೀಲಂಕಾ ನೋಡಿ: ಅರಣ್ಯ ನಿಗಮ ಅಧ್ಯಕ್ಷೆ ತಾರಾ

ಜಗತ್ತಿನ ದೊಡ್ಡಣ್ಣನ ಸ್ಥಾನವು ಇದೀಗ ಭಾರತಕ್ಕೆ ಲಭಿಸಿದೆ. ಜಗತ್ತಿನಲ್ಲಿರುವ ಎಲ್ಲಾ ದೇಶಗಳು ಭಾರತದ ಕಡೆಗೆ ನೋಡುತ್ತಿವೆ. ಅಂತಹ ಶಕ್ತಿ ಬರಲು ಸಾಧ್ಯವಾಗಿದ್ದು, ಮೋದಿಯವರಿಂದ ಎಂದು ತಿಳಿಸಿದರು. ಮೋದಿ ಅದೇನು ಮೋಡಿ ಮಾಡಿದ್ದಾರೋ, ಇಡೀ ಜಗತ್ತಿನ ಜನರು ಅವರಲ್ಲಿ ಬಹುದೊಡ್ಡ ಶಕ್ತಿಯನ್ನು ಕಾಣುತ್ತಿದ್ದಾರೆ. ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಜಗತ್ತಿನ ಜನರು ಮೋದಿಯವರನ್ನು ನೋಡುತ್ತಿದ್ದಾರೆ ಎಂದರು.

ಕರ್ನಾಟಕ ಭಾರತ ಮಾತೆಯ ಮಗಳು. ದೂರದ ಕರ್ನಾಟಕ(Karnataka)ದ ಮಗಳು ದೆಹಲಿಯ ತವರು ಮನೆಯಲ್ಲಿ ನಡೆಯುವ ಅಮೃತ ಮಹೋತ್ಸವ ಸಂಭ್ರಮಕ್ಕೆ ಬಂದಿದ್ದಾಳೆ. ಅಂತಹ ಸಡಗರ ಇಲ್ಲಿ ನೆಲೆಗೊಂಡಿದೆ ಎಂದು ಶ್ರೀಗಳು ಬಣ್ಣಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಡಿಂಡಿಮ(Kannada dindima) ಭಾರಿಸಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕಲಾವಿದರನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ(CM Basavaraj Bommai) ಕರೆದುಕೊಂಡು ಬಂದಿರುವುದು ಅಭಿನಂದನೀಯ ಎಂದು ಶ್ಲಾಘಿಸಿದ ಶ್ರೀಗಳು ದೆಹಲಿಯಲ್ಲಿ ಕನ್ನಡದ ಆರತಿಯನ್ನು ಬೆಳಗಿಸುವ ಕೆಲಸವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಡುತ್ತಿದ್ದಾರೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣ ಮುಗಿಸಿದ ನಂತರ ತರಳಬಾಳು ಶ್ರೀ(Taralabalu shree), ಸುತ್ತೂರು ಶಿವರಾತ್ರೀಶ್ವರ ಮಹಾಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದ ಮಹಾಸ್ವಾಮೀಜಿ, ಉಡುಪಿಯ ವಿಶ್ವಪ್ರಸನ್ನ ತೀರ್ಥ ಶ್ರೀ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ, ನಂದಾವಧೂತ ಸ್ವಾಮಿಗಳ ಜೊತೆ ತಮ್ಮ ಸಂತಸ ಹಂಚಿಕೊಂಡರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಮುಖಂಡ ಸಿ.ಟಿ. ರವಿ ಮುಂತಾದವರು ವೇದಿಕೆಯಲ್ಲಿದ್ದರು. ಸಿರಿಗೆರೆಗೆ ಬರುವಂತೆ ಪ್ರಧಾನಿ ಮೋದಿಗೆ ತರಳಬಾಳು ಶ್ರೀ ಆಹ್ವಾನ

ಪ್ರತಿ ಕ್ಷೇತ್ರದಲ್ಲೂ ರಾಜ್ಯವೇ ಮುಂಚೂಣಿಯಲ್ಲಿದೆ: ಡಾ.ಅಶ್ವತ್ಥ ನಾರಾಯಣ

ಸಿರಿಗೆರೆಗೆ ಪಿಎಂಗೆ ಆಹ್ವಾನ:

ತರಳಬಾಳು ಜಗದ್ಗುರು ಬೃಹನ್ಮಠದ ಆಶ್ರಯದಲ್ಲಿ ಸಿರಿಗೆರೆಯಲ್ಲಿ ನಿರ್ಮಿತವಾಗಿರುವ 43 ಕೋಟಿ ರು.ಗಳ ವೆಚ್ಚದ ಆಧುನಿಕ ಗುರುಶಾಂತೇಶ್ವರ ದಾಸೋಹ ಭವನ ಉದ್ಘಾಟನೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಹ್ವಾನಿಸಿದರು. ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆಯು ಹಲವು ದಶಕಗಳ ನಂತರ ಏತನೀರಾವರಿ ಯೋಜನೆಯಡಿ ತುಂಬಿದೆ. ರಾಜ್ಯ ಸರ್ಕಾರವು ಈ ಯೋಜನೆಗೆ ಸುಮಾರು 525 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಅದರಿಂದ ಸುಮಾರು 43 ಕೆರೆಗಳಿಗೆ ನೀರು ಹರಿಯುತ್ತಿದೆ. ಪ್ರಾಕೃತಿಕ ಸಂಪತ್ತು, ಕೃಷಿ ಚಟುವಟಿಕೆಗಳು, ಅಂತರ್ಜಲದ ಮೇಲೆ ಇದು ಪರಿಣಾಮ ಬೀರಿದೆ. ಏತನೀರಾವರಿ ಯೋಜನೆಯು ಪ್ರಧಾನಿಯವರಿಂದ ಉದ್ಘಾಟನೆ ಆಗಬೇಕೆಂಬುದು ತಮ್ಮ ಆಶಯವಾಗಿದೆ ಎಂದು ಶ್ರೀಗಳು ಪ್ರಧಾನಿಯವರಿಗೆ ತಿಳಿಸಿದರು.

click me!