ಉದ್ಯೋಗ ನೀಡಿದರೆ ಬದುಕು ಬಂಗಾರ : ಜೆಡಿಎಸ್‌ ಮುಖಂಡ ಬಿ.ಎಸ್‌.ನಾಗರಾಜು

By Kannadaprabha News  |  First Published Feb 26, 2023, 7:09 AM IST

ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ನೀಡಿದಾಗ ಮಾತ್ರ ಅವರ ಬದುಕು ಬಂಗಾರವಾಗುತ್ತದೆ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಆಕಾಂಕ್ಷಿ ಬಿ.ಎಸ್‌.ನಾಗರಾಜು ತಿಳಿಸಿದರು.


  ಗುಬ್ಬಿ :  ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ನೀಡಿದಾಗ ಮಾತ್ರ ಅವರ ಬದುಕು ಬಂಗಾರವಾಗುತ್ತದೆ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಆಕಾಂಕ್ಷಿ ಬಿ.ಎಸ್‌.ನಾಗರಾಜು ತಿಳಿಸಿದರು.

ಪಟ್ಟಣದ ಪದವಿಪೂರ್ವ ಕಾಲೇಜು ಆವರಣದಲ್ಲಿ ಬೃಹತ್‌ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸುಮಾರು ಎಂಎನ್‌ಸಿ ಕಂಪನಿ ಸೇರಿದಂತೆ ಹಲವು ಕಂಪನಿಗಳು ಆಗಮಿಸಿ ಸ್ಥಳದಲ್ಲಿಯೇ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮ ಭಾಗದ ಯುವಕರು, ಯುವತಿಯರು ಕೆಲಸ ಗಿಟ್ಟಿಸಿಕೊಂಡು ತಮ್ಮ ಓದಿಗೆ ತಕ್ಕನಾದ ಅರ್ಹತೆ ಪಡೆದಾಗ ಮಾತ್ರ ಅವರ ಜೀವನಕ್ಕೆ ಒಂದು ದಾರಿಯಾಗುತ್ತದೆ. ಹಾಗಾಗಿ ಇಲ್ಲಿ ಯಾವುದೇ ಬದಿಗಿಟ್ಟು ನಮ್ಮ ಯುವಕರು ಉದ್ಯೋಗ ಪಡೆಯಬೇಕು ಎಂಬುದು ನನ್ನ ಆಸೆಯಾಗಿದೆ ಎಂದು ತಿಳಿಸಿದರು.

Tap to resize

Latest Videos

ಕೈಗಾರಿಕೋದ್ಯಮಿ ಆನಂದ್‌ ಮಾತನಾಡಿ, ನಮ್ಮಂತಹ ಕೈಗಾರಿಕೋಧ್ಯಮಿಗಳಿಗೆ ಬಿ.ಎಸ್‌.ನಾಗರಾಜು ಮಾರ್ಗದರ್ಶಕರಾಗಿದ್ದಾರೆ. ನಾವೆಲ್ಲಾ ನಗರಗಳಲ್ಲಿ ಉದ್ಯೋಗದ ಕಡೆ ಗಮನ ಹರಿಸುತ್ತೇವೆ. ಆದರೆ ಇವರು ಮಾತ್ರ ಹಳ್ಳಿಯ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಮುಂದೆ ಬಂದಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕಿರಪ್ಪ, ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್‌, ಶಿವಲಿಂಗಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಸವಿತಾ ಸುರೇಶ್‌ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗಾಯತ್ರಿ ನಾಗರಾಜು, ಮುಖಂಡರಾದ ಸುರೇಶ್‌ ಗೌಡ, ಮಂಜುನಾಥ್‌, ಗಂಗಾಧರ್‌, ವಿಜಯ್‌ ಕುಮಾರ್‌, ಸಲೀಂ ಪಾಷಾ, ಬಸವರಾಜು, ಸಿದ್ದಪ್ಪ, ರಘು, ಪುರುಷೋತ್ತಮ್‌, ಸೇರಿದಂತೆ ಇನ್ನಿತರರು ಹಾಜರಿದ್ದರು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡದ ಕೈಗಾರಿಕೆಗಳಿಗೆ ಸರ್ಕಾರಿ ಸೌಲಭ್ಯಗಳ ಹಕ್ಕು ಮೊಟಕು

ಬೆಂಗಳೂರು:  ಶಾಲಾ ಶಿಕ್ಷಣದಂತೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲೂ ಒಂದು ಭಾಷೆಯಾಗಿ ಕನ್ನಡ ಕಲಿಕೆ, ಸರ್ಕಾರಿ ಉದ್ಯೋಗಗಳಲ್ಲಿ ಕನ್ನಡ ಅವಶ್ಯಕ ಭಾಷೆಯಾಗಿ ಪರಿಗಣನೆ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡದ ಕೈಗಾರಿಕೆಗಳಿಗೆ ಸರ್ಕಾರಿ ಸೌಲಭ್ಯಗಳ ಹಕ್ಕು ಮೊಟಕು, ಅಧೀನ ನ್ಯಾಯಾಲಯಗಳು, ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲ ಹಂತಗಳಲ್ಲಿ ಕನ್ನಡ ರಾಜ್ಯದ ಅಧಿಕೃತ ಭಾಷೆಯಾಗಿ ಕಟ್ಟುನಿಟ್ಟಿನ ಅನುಷ್ಠಾನ... ಈ ಅಂಶಗಳಿಗೆ ಅಗತ್ಯ ಶಾಸನಾತ್ಮಕ ಬಲ ತಂದುಕೊಡುವ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022'ಕ್ಕೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು

ರಾಜ್ಯದಲ್ಲಿ ಕನ್ನಡ ಅನುಷ್ಠಾನಕ್ಕೆ ಜಾರಿಗೆ ತರಲಾಗಿದ್ದ ಎರಡು ಕಾಯ್ದೆಗಳನ್ನು ರದ್ದುಗೊಳಿಸಿ ಸಮಗ್ರವಾದ ಕಾನೂನನ್ನು ಒಳಗೊಂಡ ಈ ಮಹತ್ವದ ವಿಧೇಯಕವನ್ನು ಸರ್ಕಾರ ರೂಪಿಸಿದೆ. ಕಳೆದ ಬೆಳಗಾವಿ ಅಧಿವೇಶನದಲ್ಲೇ ಮಂಡಿಸಲಾಗಿದ್ದ ವಿಧೇಯಕವನ್ನು ಪ್ರಸಕ್ತ ಬಜೆಟ್‌ ಅಧಿವೇಶನದಲ್ಲಿ ಪರ್ಯಾಲೋಚಿಸಿ ಅಂಗೀಕರಿಸಲು ಸೂಚಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ (V. Sunil Kumar) ಅವರು ಯಾವ ಉದ್ದೇಶಕ್ಕೆ ಈ ವಿಧೇಯಕ ತರಲಾಗಿದೆ ಎಂದು ವಿವರಿಸಿದರು. ಬಳಿಕ ಧ್ವನಿಮತದ ಮೂಲಕ ವಿಧೇಯಕಕ್ಕೆ ಸದನದ ಅನುಮೋದನೆ ದೊರೆಯಿತು. ಈ ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲೂ ಅಂಗೀಕಾರ ದೊರೆತು ರಾಜ್ಯಪಾಲರ ಅಂಕಿತ ದೊರೆತರೆ ಅಧಿಕೃತವಾಗಿ ಜಾರಿಗೆ ಬರಲಿದೆ.

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್‌.ಯಡಿಯೂರಪ್ಪ

ಕನ್ನಡ ಭಾಷೆ ಕಾಯ್ದೆ (Kannada Language Act) ಅನುಷ್ಠಾನಕ್ಕೆ ಓರ್ವ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಿಸಲಾಗುವುದು. ಆಡಳಿತದಲ್ಲಿ ಕನ್ನಡ ಜಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಸೇರಿದಂತೆ ಶಿಸ್ತು ಕ್ರಮಗಳ ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿ ಜಾರಿ ಪ್ರಾಧಿಕಾರ ರಚನೆ ಮಾಡುವುದಕ್ಕೆ ಈ ವಿಧೇಯಕದ ಮೂಲಕ ಅವಕಾಶ ನೀಡಲಾಗಿದೆ. ಮುಖ್ಯವಾಗಿ ರಾಜ್ಯದಲ್ಲಿ ಭೂಮಿ, ತೆರಿಗೆ ರಿಯಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯ ಪಡೆಯುತ್ತಿರುವ ಕೈಗಾರಿಕೆಗಳು, ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ಮೇಲ್ವಿಚಾರಣೆಗೂ ಈ ವಿಧೇಯಕ ಬಲ ನೀಡಲಿದೆ.

click me!