ಬಟ್ಟೆ, ಪೂಜಾ ಸಾಮಗ್ರಿ ತಬ್ಬಿ ಅತ್ತ ನಾರಾಯಣ ಆಚಾರ್ ಮಕ್ಕಳು

By Kannadaprabha News  |  First Published Aug 11, 2020, 10:36 AM IST

ಅರ್ಚಕ ನಾರಾಯಣ ಆಚಾರ್‌ ಅವರ ಮನೆ ಕೊಚ್ಚಿ ಹೋದ ಜಾಗಕ್ಕೆ ಸೋಮವಾರ ವಿದೇಶದಿಂದ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಆಗಮಿಸಿ ಕಣ್ಣೀರು ಹಾಕಿದರು. ಇಬ್ಬರು ಪುತ್ರಿಯರಾದ ನಮಿತಾ ಹಾಗೂ ಶಾರದಾ ಸ್ಥಳಕ್ಕೆ ಬಂದು ಸಿಕ್ಕ ಅವಶೇಷಗಳನ್ನು ತೆರೆಯುತ್ತಾ ಭಾವುಕರಾದರು. ಬಟ್ಟೆ, ಪೂಜಾ ಸಾಮಗ್ರಿ, ಶಾಲುಗಳನ್ನು ತಬ್ಬಿ ಕಣ್ಣೀರು ಹಾಕಿದರು.


ಮಡಿಕೇರಿ(ಆ.11): ಕೊಡಗಿನ ತಲಕಾವೇರಿ ಬ್ರಹ್ಮಗಿರಿಯಲ್ಲಿ ಭೂಕುಸಿತವಾಗಿ ನಾಪತ್ತೆಯಾಗಿರುವ ತಲಕಾವೇರಿಯ ಅರ್ಚಕ ನಾರಾಯಣ ಆಚಾರ್‌ ಅವರ ಮನೆ ಕೊಚ್ಚಿ ಹೋದ ಜಾಗಕ್ಕೆ ಸೋಮವಾರ ವಿದೇಶದಿಂದ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಆಗಮಿಸಿ ಕಣ್ಣೀರು ಹಾಕಿದರು. ಇಬ್ಬರು ಪುತ್ರಿಯರಾದ ನಮಿತಾ ಹಾಗೂ ಶಾರದಾ ಸ್ಥಳಕ್ಕೆ ಬಂದು ಸಿಕ್ಕ ಅವಶೇಷಗಳನ್ನು ತೆರೆಯುತ್ತಾ ಭಾವುಕರಾದರು. ಬಟ್ಟೆ, ಪೂಜಾ ಸಾಮಗ್ರಿ, ಶಾಲುಗಳನ್ನು ತಬ್ಬಿ ಕಣ್ಣೀರು ಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರನ್ನು ನಾರಾಯಣಾಚಾರ್‌ ಅವರ ಮಕ್ಕಳು ಸೋಮವಾರ ಭಾಗಮಂಡಲ ಹೊಟೇಲ್‌ ಮಯೂರದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಆಸ್ಪ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ಇಬ್ಬರು ಮಕ್ಕಳು ಸಚಿವರನ್ನು ಭೇಟಿ ಮಾಡಿ ಕಾರ್ಯಾಚರಣೆ ಸಂಬಂಧಿಸಿದಂತೆ ಮಾಹಿತಿ ಪಡೆದರು.

Latest Videos

undefined

"

ಕೊಡಗು: ತಲಕಾವೇರಿ ಅರ್ಚಕರ ಕುಟುಂಬದ ಒಂದು ಮೃತ ದೇಹ ಪತ್ತೆ

ಸಂಸದ ಪ್ರತಾಪ್‌ಸಿಂಹ ಅವರು ಹಲವು ಮಾಹಿತಿ ನೀಡಿದರು. ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಇತರರು ಇದ್ದರು.

ನಾರಾಯಣಾಚಾರ್‌ ಮಕ್ಕಳನ್ನು ಕರೆತಂದ ಕಾರು ಚಾಲಕಗೆ ಕೊರೋನಾ

ವಿದೇಶದಿಂದ ಆಗಮಿಸಿದ ನಾರಾಯಣಾಚಾರ್‌ ಅವರ ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಕರೆ ತಂದ ಕಾರು ಚಾಲಕನಿಗೆ ಕೊರೋನಾ ಪಾಸಿಟಿವ್‌ ಬಂದಿದೆ.

ಕೊಡಗಿನಲ್ಲಿ ಅರ್ಚಕರ ಕುಟುಂಬ ಕಣ್ಮರೆ: ಕಾರ್ಯಾಚರಣೆಗೆ ಮಳೆ ಅಡ್ಡಿ

ಬೆಂಗಳೂರಿನಿಂದ ಆಗಮಿಸಿದ್ದ ಬಂದಿದ್ದ ಟ್ಯಾಕ್ಸಿ ಚಾಲಕನಿಗೆ ಮಡಿಕೇರಿಯಲ್ಲಿ ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮಾಡಲಾಗಿತ್ತು. ಚಾಲಕನಿಗೆ ಪಾಸಿಟಿವ್‌ ಬಂದಿದೆ. ಇದೇವೇಳೆ ನಾರಾಯಣಾಚಾರ್‌ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಅವರಿಗೂ ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ ನಡೆಸಲಾಗಿದ್ದು ವರದಿ ನೆಗೆಟಿವ್‌ ಬಂದಿದೆ.

ಕಾರು ಚಾಲಕನಿಗೆ ಪಾಸಿಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ಕಾರಿನಲ್ಲಿ ಬಂದವರನ್ನು ಕ್ವಾರಂಟೈನ್‌ನಲ್ಲಿರುವಂತೆ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

click me!