ಬೆಳ್ತಂಗಡಿ: ಭಾರೀ ಮಳೆಗೆ ಕಾಡಿನಲ್ಲಿ 6 ಎಕರೆ ಗುಡ್ಡೆ ಕುಸಿತ

By Kannadaprabha News  |  First Published Aug 11, 2020, 10:04 AM IST

ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಕೊಲ್ಲಿ ಸಮೀಪದ ನಡ್ತಿಕಲ್ಲು ಅಲ್ಲದ ಕಾಡು ಎಂಬಲ್ಲಿ ಕಾಡಿನ ನಡುವೆ ಸೋಮವಾರ ಸಂಜೆ ಭೂ ಕುಸಿತ ಉಂಟಾಗಿದ್ದು, ಸುಮಾರು 6 ಎಕ್ರೆ ಪ್ರದೇಶದ ಮಣ್ಣು ಜಾರಿ ಕೆಳಗೆ ಬಂದಿದೆ. ಈ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಇದ್ದು ಮೀಸಲು ಅರಣ್ಯ ಪ್ರದೇಶವಾಗಿದೆ.


ಬೆಳ್ತಂಗಡಿ(ಆ.11): ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಕೊಲ್ಲಿ ಸಮೀಪದ ನಡ್ತಿಕಲ್ಲು ಅಲ್ಲದ ಕಾಡು ಎಂಬಲ್ಲಿ ಕಾಡಿನ ನಡುವೆ ಸೋಮವಾರ ಸಂಜೆ ಭೂ ಕುಸಿತ ಉಂಟಾಗಿದ್ದು, ಸುಮಾರು 6 ಎಕ್ರೆ ಪ್ರದೇಶದ ಮಣ್ಣು ಜಾರಿ ಕೆಳಗೆ ಬಂದಿದೆ. ಈ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಇದ್ದು ಮೀಸಲು ಅರಣ್ಯ ಪ್ರದೇಶವಾಗಿದೆ.

ಜನ ವಸತಿ ಪ್ರದೇಶದಿಂದ ಸುಮಾರು ಮೂರು ಕಿ.ಮೀ. ಗಿಂತಲೂ ಹೆಚ್ಚು ದೂರದಲ್ಲಿ ಕುಸಿತವಾಗಿದೆ. ಮರಗಳು ನೆಲಕ್ಕುರುಳಿವೆ. ಸಮೀಪದ ತೋಡಿನಲ್ಲಿ ಕೆಸರು ನೀರು ಬರುವುದನ್ನು ನೋಡಿ ಗುಡ್ಡದ ಮೇಲೆ ಭೂಕುಸಿತದ ಸಾಧ್ಯತೆಯಿರುವ ಅನುಮಾನದಿಂದ ಗ್ರಾಮಸ್ಥರು ಹುಡುಕಿದಾಗ ಭೂ ಕುಸಿತವಾಗಿರುವುದು ಕಂಡು ಬಂದಿದೆ.

Latest Videos

undefined

ಕಾಲಿನಲ್ಲಿ ಪರೀಕ್ಷೆ ಬರೆದ ಕೌಶಿಕ್‌ ಫಸ್ಟ್‌ ಕ್ಲಾಸ್‌ ಪಾಸ್‌

ತಾಲೂಕು ಆಡಳಿತಕ್ಕೆ ಮಾಹಿತಿ ನೀಡಲಾಗಿದೆ. ಈಗ ಸಂಭವಿಸಿರುವ ಕುಸಿತದಿಂದ ಯಾವುದೇ ಅಪಾಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯವ್ಯಕ್ತಪಡಿಸಿದ್ದು, ಮಳೆ ಮುಂದುವರಿದರೆ ಅಪಾಯವಾಗುವ ಸಾಧ್ಯತೆಯಿದೆ.

click me!