ಎನ್‌ಡಿಎ ಸರ್ಕಾರದಲ್ಲಿ ದೇಶಕ್ಕೆ ಅಭದ್ರತೆ: ಕಾಂಗ್ರೆಸ್ ಕೊಪ್ಪಳ ನಗರ ಘಟಕದ ಅಧ್ಯಕ್ಷ ಕಾಟನ್ ಪಾಷಾ| 6 ವರ್ಷದ ಅವಧಿಯಲ್ಲಿ ಸಾವಿರಾರು ಯೋಧರು ಹುತಾತ್ಮರಾಗಿದ್ದಾರೆ| ಸರಿಯಾದ ಆಡಳಿತ ನಡೆಸದೆ ಇತ್ತ ಜನರ ರಕ್ಷಣೆಗೆ ಆದ್ಯತೆಯನ್ನೂ ನೀಡುತ್ತಿಲ್ಲ ಪ್ರಧಾನಿ ಮೋದಿ|
ಕೊಪ್ಪಳ(ಜೂ. 27): ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ದೇಶಕ್ಕೆ ಅಭದ್ರತೆ ಕಾಡುತ್ತಿದೆ. ಸರಿಯಾದ ಆಡಳಿತ ನಡೆಸದೆ ಇತ್ತ ಜನರ ರಕ್ಷಣೆಗೆ ಆದ್ಯತೆಯನ್ನೂ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಕೊಪ್ಪಳ ನಗರ ಘಟಕದ ಅಧ್ಯಕ್ಷ ಕಾಟನ್ ಪಾಷಾ ದೂರಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಶಹೀದೋಂಕೊ ಸಲಾಂ ದಿವಸ ಆಚರಣೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ದೇಶವು ಅಭದ್ರೆಯತ್ತ ಸಾಗುತ್ತಿದೆ. 6 ವರ್ಷದ ಅವಧಿಯಲ್ಲಿ ಸಾವಿರಾರು ಯೋಧರು ಹುತಾತ್ಮರಾಗಿದ್ದಾರೆ. ಕೇವಲ ತಮ್ಮ ಭಾಷಣದ ಮೂಲಕ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಸತ್ಯವನ್ನು ಮರೆಮಾಚಿಸುತ್ತಿರುವ ಕೇಂದ್ರ ಸರ್ಕಾರ ಏಕ ವ್ಯಕ್ತಿಯ ಅದಿಪತ್ಯ ಹೊಂದಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಹೇಳಿದರು.
undefined
ಸಿಎಂ ಯಡಿಯೂರಪ್ಪಗೆ ರೈತರ ಪರ ಕಾಳಜಿ ಇದೆ: ಜಾರಕಿಹೊಳಿ
ಇದೇ ವೇಳೆ ಚೀನಾ ಸೈನಿಕರೊಂದಿಗೆ ಹೋರಾಟಿ ಹುತಾತ್ಮರಾದ ಯೋಧರಿಗೆ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ನಗರಸಭಾ ಸದಸ್ಯರಾದ ಅಮ್ಜದ್ ಪಟೇಲ್, ಬಸಯ್ಯ ಹಿರೇಮಠ, ರಮೇಶ ಗಿಣಿಗೇರಾ, ಅಜೀಮ್ ಅತ್ತಾರ್, ಮಂಜುನಾಥ ಗಾಳಿ, ಅಕ್ಬರಪಾಷಾ ಪಲ್ಟನ್, ಮುಂಖಡರಾದ ನಾಗರಾಜ ಬಳ್ಳಾರಿ, ಕಿಶೋರಿ ಬೂದನೂರ, ಬಾಷುಸಾಬ್ ಖತಿಬ್, ಮೌಲಹುಸೇನ್ ಜಮಾದಾರ, ರೇಷ್ಮಾ ಖಾಜವಲಿ, ಪರಶುರಾಮ ಕೆರೆಹಳ್ಳಿ ಸೇರಿದಂತೆ ಇತರರು ಇದ್ದರು.