ದೂರು ಕೊಟ್ಟವಳನ್ನು ಗಂಡನ ಮನೆ ಸೇರಿಸಿದ ಪೊಲೀಸರು: ಮಹಿಳೆಗೆ ಖಾಕಿ ಕಾವಲು

By Kannadaprabha News  |  First Published Jun 27, 2020, 7:33 AM IST

ಮಹಿಳೆಯೊಬ್ಬರು ತನ್ನನ್ನು ಗಂಡನ ಮನೆ ಸೇರಿಸುವಂತೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಆಕೆಯನ್ನು ಗಂಡನ ಮನೆ ತಲುಪಿಸಿ ಇದೀಗ ಕಾವಲು ಕಾಯುತ್ತಿದ್ದಾರೆ. ಆಗಿದ್ದೇನು..? ಇಲ್ಲಿ ಓದಿ


ಮಂಗಳೂರು(ಜೂ.27): ಎರಡು ವಾರಗಳ ಹಿಂದೆ ಸುಳ್ಯ ಪೊಲೀಸ್‌ ಠಾಣೆಗೆ ಬಂದು ಇಲ್ಲಿನ ಕಟ್ಟೆಕಾರ್‌ ಅಂಗಡಿಯವರ ಮಗನ ಮೇಲೆ ದೂರು ನೀಡಿದ್ದ ಬೆಂಗಳೂರಿನ ಮಹಿಳೆ, ಈಗ ಮಹಿಳಾ ಆಯೋಗದ ಆದೇಶ ಹಿಡಿದುಕೊಂಡು ಸುಳ್ಯಕ್ಕೆ ಬಂದಿದ್ದಾಳೆ.

ಪೊಲೀಸರು ಮತ್ತು ಸಿಡಿಪಿಒ ಆಕೆ​ಯನ್ನು ಕಟ್ಟೆ ಅಬ್ದುಲ್ಲ ಅವರ ಮನೆಗೆ ಬಿಟ್ಟಿದ್ದಾರೆ. ಆದರೆ ಆಕೆಯನ್ನು ಮನೆಗೆ ಸೇರಿಸಲು ನಿರಾಕರಿಸಿರುವ ಕಟ್ಟೆಅಬ್ದುಲ್ಲ ಅವರ ಮನೆಯವರು ಮನೆಗೆ ಬೀಗ ಹಾಕಿ ಬೇರೆ ಕಡೆಗೆ ಹೋಗಿದ್ದಾರೆ. ಆ ಮಹಿಳೆ ಮನೆಯ ಜಗುಲಿಯಲ್ಲಿ ಕುಳಿತಿದ್ದು, ಪೊಲೀಸರು ಮನೆಯಂಗಳದಲ್ಲಿ ಕಾವ​ಲಿ​ದ್ದಾರೆ.

Tap to resize

Latest Videos

ಕಟ್ಟೆಕ್ಕಾರ್‌ ಇಬ್ರಾಹಿಂ ಖಲೀಲ್‌ ತನ್ನನ್ನು ಮದುವೆಯಾಗಿದ್ದು ಅವನೊಂದಿಗೆ ನನ್ನನ್ನು ಸೇರಿಸಬೇಕು ಎಂದು ಕೇಳಿಕೊಂಡು ಎರಡು ವಾರದ ಹಿಂದೆ ಬೆಂಗಳೂರಿನ ಆಸಿಯಾ ಎಂಬ ಮಹಿಳೆ ಸುಳ್ಯ ಪೊಲೀಸ್‌ ಠಾಣೆಗೆ ಬಂದಿದ್ದರು. ಮಂಗಳೂರಿಗೆ ಎಸ್ಪಿ ಕಚೇರಿಗೆ ಹೋಗಿ ಅಲ್ಲಿಂದ ಸುಳ್ಯ ಠಾಣೆಗೆ ಬಂದಿದ್ದ ಆಸಿಯಾರನ್ನು ಠಾಣೆಯಲ್ಲಿ ಕೂರಿಸಿದ ಪೊಲೀಸರು ಕಟ್ಟೆಕ್ಕಾರ್‌ ಇಬ್ರಾಹಿಂ ಖಲೀಲ್‌ ಮತ್ತು ಮನೆಯವರನ್ನು ಠಾಣೆಗೆ ಕರೆಸಿದ್ದರು.

ಆ ಮಹಿಳೆಯೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಖಲೀಲ್‌ ಹೇಳಿಕೆ ನೀಡಿ ಆಕೆಯನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದರು. ಬಳಿಕ ಪೊಲೀಸರ ಸಲಹೆಯಂತೆ ಆಕೆ ಬೆಂಗಳೂರಿಗೆ ವಾಪಸಾಗಿದ್ದಳು. ಅಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಆಸಿಯಾ, ತನ್ನನ್ನು ಸುಳ್ಯದಲ್ಲಿರುವ ಪತಿಯ ಮನೆಗೆ ಸೇರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿಲ್ಲ, ಯೋಜಿತ ಕೊಲೆ, ಪೋಟೋ ಸಾಕ್ಷ್ಯದ ಸತ್ಯ!

ಅರ್ಜಿದಾರರನ್ನು ಆಕೆಯ ಪತಿಯ ಮನೆಗೆ ಸೇರಿಸಿ ಕಾನೂನು ನೆರವು ಹಾಗೂ ಅಗತ್ಯ ಕ್ರಮ ಕೈಗೊಂಡು ಆ ಕ್ರಮದ ಬಗ್ಗೆ ವರದಿಯನ್ನು 15 ದಿನಗಳೊಳಗೆ ಆಯೋಗಕ್ಕೆ ಕಳುಹಿಸಿಕೊಡುವಂತೆ ಆಯೋ​ಗ​ದ ಅಧ್ಯಕ್ಷರು ಜೂ. 24ರಂದು ಆದೇಶ ನೀಡಿದರು. ಅದ​ರಂತೆ ಸುಳ್ಯದ ಸಿಡಿಪಿಒ ಮತ್ತು ಎಸ್‌ಐ ಅವರು ಜೂನ್‌ 25ರಂದು ಸಂಜೆ ಸುಳ್ಯಕ್ಕೆ ಬಂದ ಆಸಿಯಾರನ್ನು ಕರೆದುಕೊಂಡು ಸುಳ್ಯದ ನಾವೂರು ರಸ್ತೆಯಲ್ಲಿರುವ ಕಟ್ಟೆಅಬ್ದುಲ್ಲರ ಮನೆಗೆ ತಂದು ಬಿಟ್ಟಿ​ದ್ದಾರೆ.

click me!