ಬೆಂಗಳೂರು: ವಿದ್ಯಾರ್ಥಿಗಳ ರಾಮನವಮಿಗೆ ಪ್ರೆಸಿಡೆನ್ಸಿ ಕಾಲೇಜು ಅಡ್ಡಿ

Published : Mar 31, 2023, 06:59 AM ISTUpdated : Apr 17, 2024, 11:01 AM IST
ಬೆಂಗಳೂರು: ವಿದ್ಯಾರ್ಥಿಗಳ ರಾಮನವಮಿಗೆ ಪ್ರೆಸಿಡೆನ್ಸಿ ಕಾಲೇಜು ಅಡ್ಡಿ

ಸಾರಾಂಶ

ವಿದ್ಯಾರ್ಥಿಗಳಿಂದ ಕೇಸರಿ ಶಾಲು ಕಸಿದು, ಐಡಿ ಕಾರ್ಡ್‌ ಕಿತ್ತುಕೊಂಡ ಆಡಳಿತ ಮಂಡಳಿ, ಸ್ಥಳೀಯರು, ಹಿಂದೂ ಸಂಘಟನೆ ಪ್ರತಿಭಟನೆ. 

ಯಲಹಂಕ(ಮಾ.31): ಶ್ರೀ ರಾಮ ನವಮಿ ಪ್ರಯುಕ್ತ ಹೆಸರುಬೇಳೆ ಪಾನಕ, ಮಜ್ಜಿಗೆ ವಿತರಿಸಲು ಮುಂದಾದ ವಿದ್ಯಾರ್ಥಿಗಳನ್ನು ಪ್ರೆಸಿಡೆನ್ಸಿ ಕಾಲೇಜು ಆಡಳಿತ ಮಂಡಳಿಯು ತಡೆದು ತಿಲಕ ಅಳಿಸಿ, ಕೇಸರಿ ಶಾಲನ್ನು ಕಿತ್ತು ವಿದ್ಯಾರ್ಥಿಗಳ ಗುರುತಿನ ಕಾರ್ಡ್‌ ಕಿತ್ತುಕೊಂಡ ಘಟನೆ ರಾಜಾನುಕುಂಟೆಯಲ್ಲಿ ನಡೆದಿದೆ. ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು, ಸ್ಥಳೀಯ ನಾಗರಿಕರು ಹಾಗೂ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಸೇರಿದಂತೆ ನೂರಾರು ಜನರು ಕಾಲೇಜು ಮುಂಭಾಗದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡಿತ್ತು.

ರಾಜಾನುಕುಂಟೆ ಸಮೀಪದ ಪ್ರೆಸಿಡೆನ್ಸಿ ಕಾಲೇಜಿನ ಮುಂಭಾಗದಲ್ಲಿ ಸ್ಥಳೀಯ ಗ್ರಾಮಸ್ಥರು ಹಾಗೂ ಆಟೋ ಚಾಲಕರು, ವಿದ್ಯಾರ್ಥಿಗಳು ಶ್ರೀ ರಾಮ ನವಮಿಗಾಗಿ ಪಾನಕ, ಮಜ್ಜಿಗೆ, ಕೋಸಂಬರಿ ತಯಾರಿಸಿ ರಾಮ ನವಮಿ ಆಚರಿಸಿ ಕಾಲೇಜಿನ ಆವರಣದಲ್ಲಿ ವಿತರಿಸುತ್ತಿದ್ದರು. ಇದನ್ನು ಸೆಕ್ಯೂರಿಟಿ ಗಾರ್ಡ್‌ಗಳು ಮತ್ತು ಸಿಬ್ಬಂದಿ ಆಕ್ಷೇಪಿಸಿದರು. ವಿದ್ಯಾರ್ಥಿಗಳನ್ನು ಹಿಡಿದು ಹಣೆಗೆ ಹಚ್ಚಿದ್ದ ಕುಂಕುಮ ಅಳಿಸಿ ಹೆಗಲ ಮೇಲೆ ಧರಿಸಿದ ಶಾಲುಗಳನ್ನು ಮತ್ತು ವಿದ್ಯಾರ್ಥಿಗಳ ಗುರುತಿನ ಚೀಟಿಯನ್ನು ಪಡೆದು ನಾಳೆ ಪೋಷಕರನ್ನು ಕಾಲೇಜಿಗೆ ಕರೆತರಬೇಕು ಎಂದು ತಿಳಿಸಿ ಹೊರ ಕಳುಹಿಸಿದರು.

ಪವಿತ್ರ ರಾಮ ನವಮಿ ಆಚರಣೆಗೆ ಅಡ್ಡಿ, ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ!

ವಿದ್ಯಾರ್ಥಿಗಳು ಹೊರಬಂದು ನಡೆದ ಘಟನೆಯನ್ನು ಸ್ಥಳೀಯರಿಗೆ ತಿಳಿಸಿದಾಗ ಸ್ಥಳೀಯ ಗ್ರಾಮಸ್ಥರು, ಆಟೋ ಚಾಲಕರು ಹಾಗೂ ವಿದ್ಯಾರ್ಥಿಗಳು ಹಾಗೂ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟಿಸಿದರು. ನಂತರ ರಾಜಾನುಕುಂಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಿ ಸಭೆ ನಡೆಸುವುದಾಗಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಹಿಂದೂ ಹಬ್ಬ ಆಚರಣೆ ಮಾಡಲು ಕಾಲೇಜು ಆಡಳಿತ ಮಂಡಳಿ ಅಡ್ಡಿಪಡಿಸುತ್ತಿದೆ. ಅವರ ಮೇಲೆ ಒತ್ತಡ ಹೇರಿ ಬೆದರಿಕೆ ಒಡ್ಡಿ ಗುರುತಿನ ಚೀಟಿ ಕಿತ್ತುಕೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿ ಅರಕೆರೆ ವಸಂತ್‌ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ದೂರಿದರು.

ರಾಮ ನವಮಿ ಶೋಭ ಯಾತ್ರೆ ಮೇಲೆ ಕಲ್ಲು ತೂರಾಟ, ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದ ಪೊಲೀಸ್!

ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಮಾಜ್‌ ಮಾಡಲು, ಹಿಜಾಬ್‌ ಧರಿಸಲು ಅವಕಾಶವಿದೆ. ಹಿಂದುಗಳಿಗೆ ಯಾವುದೇ ಹಬ್ಬ ಆಚರಿಸಲು ಅವಕಾಶ ಮಾಡಿಕೊಡುತ್ತಿಲ್ಲ. ಜೊತೆಗೆ ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಇದಕ್ಕೆ ಸ್ಥಳೀಯ ಪೊಲೀಸರು ಶಾಮೀಲಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದನ್ನು ಸಹಿಸುವುದಿಲ್ಲ. ಹೋರಾಟ ಮುಂದುವರಿಸುತ್ತೇವೆ. ಕಾಲೇಜಿನಲ್ಲಿ ಎಲ್ಲಾ ಧರ್ಮಿಯರಿಗೆ ಸಮಾನ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸಲಾಗುವುದು ಅಂತ ವಿಶ್ವ ಹಿಂದೂ ಪರಿಷತ್‌ ಮುಖಂಡ ರಾಜಣ್ಣ ತಿಳಿಸಿದ್ದಾರೆ. 

ಶ್ರೀರಾಮ ನವಮಿ ಪ್ರಯುಕ್ತ ಪಾನಕ ಮಜ್ಜಿಗೆಯನ್ನು ವಿದ್ಯಾರ್ಥಿಗಳು ವಿತರಿಸುತ್ತಿದ್ದರು. ವಿದ್ಯಾರ್ಥಿಗಳು ಹಾಕಿಕೊಂಡಿದ್ದ ಕೇಸರಿ ಶಾಲನ್ನು ತೆಗಿಸಿ ಕಾಲೇಜಿನ ಆವರಣದಲ್ಲಿ ಅವರ ಗುರುತಿನ ಚೀಟಿಯನ್ನು ಪಡೆದಿದ್ದಾರೆ. ನಾಳೆ ಪೋಷಕರನ್ನು ಕರೆತರುವಂತೆ ಆಡಳಿತ ಮಂಡಳಿ ತಿಳಿಸಿದೆ. ಇದನ್ನು ಖಂಡಿಸಿ ನೂರಾರು ಜನರು ಪ್ರತಿಭಟಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿಲ್ಲ ಅಂತ ರಾಜಾನುಕುಂಟೆ ಠಾಣೆ ಇನ್‌ಸ್ಪೆಕ್ಟರ್‌ ಭರತ್‌ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!