* ವಿಜಯಪುರ ಜಿಲ್ಲೆಯ ಜಿಗಜೀವಣಗಿ ಗ್ರಾಮದಲ್ಲಿ ನಡೆದ ಘಟನೆ
* ಕೊನೆಗೆ ಬೇರೆ ಆಸ್ಪತ್ರೆಗೆ ಹೋಗುವಾಗ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ
* ಆಸ್ಪತ್ರೆಯಲ್ಲಿ ಇರದ ವೈದ್ಯಕೀಯ ಸಿಬ್ಬಂದಿ
ಚಡಚಣ(ಮೇ.25): ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಕಾರಣಕ್ಕೆ ಗರ್ಭಿಣಿಯೊಬ್ಬರು ತುರ್ತು ಚಿಕಿತ್ಸೆ ಚಿಕಿತ್ಸೆ ಸಿಗದೆ ನರಳಾಡಿದ ಘಟನೆ ವಿಜಯಪುರ ಜಿಲ್ಲೆಯ ಜಿಗಜೀವಣಗಿ ಗ್ರಾಮದಲ್ಲಿ ಜರುಗಿದೆ.
ಜಿಗಜೇವಣಗಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಆಗಮಿಸಿದ್ದ ಪೂರ್ಣಿಮಾ ಎನ್ನುವ 9 ತಿಂಗಳ ತುಂಬು ಗರ್ಭಿಣಿ ನರಳಾಡಿದ್ದಾಳೆ. ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಸೋಮವಾರ ಮಧ್ಯಾಹ್ನ ಚಡಚಣ ತಾಲೂಕಿನ ಜಿಗಜೇವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಹೊಟ್ಟೆನೋವಿನಿಂದ ಪೂರ್ಣಿ ಒದ್ದಾಡಿದ್ದಾರೆ. ಈ ದೃಶ್ಯವನ್ನ ಸೆರೆ ಹಿಡಿದ ಸ್ಥಳೀಯರೊಬ್ಬರು ಮಾಧ್ಯಮಗಳಿಗೆ ನೀಡಿದ್ದಾರೆ.
undefined
Vijayapura ಮಕ್ಕಳ ಮಾರಾಟ ಜಾಲ ಸಕ್ರಿಯ, ಮತ್ತೆ ಮುನ್ನಲೆಗೆ ಜಯಮಾಲಾ ಕೇಸ್
ಸೋಮವಾರ ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಗೆ ಬಂದರೆ, ಆಸ್ಪತ್ರೆಯಲ್ಲಿ ವೈದ್ಯರಾರೂ ಇರಲಿಲ್ಲ. ಕೇವಲ ಆಸ್ಪತ್ರೆ ಸಿಬ್ಬಂದಿ ಇಬ್ಬರು ಇದ್ದರು. ಅವರು ತಪಾಸಣೆ ನಡೆಸಿ, ಚಡಚಣ ಅಥವಾ ವಿಜಯಪುರ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ. ವಾಪಾಸ್ ಮನೆಗೆ ಹೋದ ಮೇಲೆ ಸಂಜೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಜಿಗಜೇವಣಿ ಸರ್ಕಾರಿ ಆಸ್ಪತ್ರೆಗೆ ಮತ್ತೆ ಹೋದಾಗ ಯಾವೊಬ್ಬ ವೈದ್ಯರೂ ಇರಲಿಲ್ಲ. ಇದರಿಂದ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲಿ ಪೂರ್ಣಿಮಾ ಒದ್ದಾಡಿದ್ದಾರೆ.. ಇಷ್ಟಾದರು ಕೇಳೋದಕ್ಕೂ ಕೂಡ ಯಾವೊಬ್ಬ ಸಿಬ್ಬಂದಿ ಅಲ್ಲಿ ಇರಲಿಲ್ಲ ಎಂದು ಪೂರ್ಣಿಮಾ ಸಂಬಂಧಿಕರು ಹೇಳಿಕೊಂಡಿದ್ದಾರೆ.
ಅಂಬುಲೇನ್ಸ್‌ನಲ್ಲೇ ಹೆರಿಗೆ!:
ಬಳಿಕ ಸ್ಥಳೀಯರೊಬ್ಬರು ಗರ್ಭಿಣಿ ಪರದಾಡುತ್ತಿರುವ ವಿಚಾರವನ್ನು ಅರಿತು ಆ್ಯಂಬುಲೆನ್ಸ್‌ಗೆ ತಿಳಿಸಿದಾಗ ಸ್ಥಳಕ್ಕೆ ಚಾಲಕ ಬಂದಿದ್ದಾನೆ. ಆ್ಯಂಬುಲೆನ್ಸ್‌ನಲ್ಲೆ ಚಡಚಣಕ್ಕೆ ಹೋಗುವಾಗ ದಾರಿಯಲ್ಲೆ ಹೆರಿಗೆ ಆಗಿದೆ. ತಾಯಿ ಮಗು ಅಪಾಯದಿಂದ ಪಾರಾಗಿದ್ದಾರೆ. ಪೂರ್ಣಿಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.