ಲಾಕ್‌ಡೌನ್‌: ವಾಹನ ಸಿಗದೇ ಗರ್ಭಿಣಿಯ ಪರದಾಟ

Kannadaprabha News   | Asianet News
Published : Apr 19, 2020, 08:40 AM IST
ಲಾಕ್‌ಡೌನ್‌: ವಾಹನ ಸಿಗದೇ ಗರ್ಭಿಣಿಯ ಪರದಾಟ

ಸಾರಾಂಶ

ಊರಿಗೆ ಹೋಗಲು ವಾಹನ ಸಿಗದೇ ಬಿಸಿಲಲ್ಲಿ ಪರದಾಡಿದ ಗರ್ಭಿಣಿ| ಹೆರಿಗೆ ನೋವು ಕಾಣಿಸಿಕೊಂಡ ಮೇಲೆ ಬನ್ನಿ ಎಂದು ತಿಳಿಸಿದ ವೈದ್ಯರು| ತಮ್ಮೂರಿಗೆ ಹೋಗಲು ವಾಹನಕ್ಕಾಗಿ ಗಂಟೆಗಟ್ಟಲೆ ಬಿಸಿಲಲ್ಲೇ ಕಾದು ನಿಂತ ಗರ್ಭಿಣಿ| ಗರ್ಭಿಣಿ ಮತ್ತು ಆಕೆಯ ಪೋಷಕರನ್ನು ವಾಹನದಲ್ಲಿ ಕಳಿಸಿಕೊಟ್ಟು ಮಾನವೀಯತೆ ಮೆರೆದ ಪತ್ರಕರ್ತರು|

ಹಾವೇರಿ(ಏ.19): ಇಲ್ಲಿಯ ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ಬಂದಿದ್ದ ತುಂಬು ಗರ್ಭಿಣಿಯೊಬ್ಬರು ಊರಿಗೆ ಹೋಗಲು ವಾಹನ ಸಿಗದೇ ಬಿಸಿಲಲ್ಲಿ ಪರದಾಡಿದ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಹಾಲಗಿ ಗ್ರಾಮದ ಗರ್ಭಿಣಿ ಸಂಗೀತಾ ಬುಳ್ಳಮ್ಮನವರ ಎಂಬಾಕೆಯನ್ನು ಶುಕ್ರವಾರ ರಾತ್ರಿ ಆಕೆಯ ಪಾಲಕರು ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ಕರೆತಂದಿದ್ದರು. ವೈದ್ಯರ ಸಲಹೆ ಮೇರೆಗೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲೇ ಉಳಿದಿದ್ದರು. 

'ATM ಮುಂದೆ ಮುಗಿಬೀಳಬೇಡಿ: ಜನಧನ್‌ ಖಾತೆ ಹಣ ಹಿಂಪಡೆಯಲು ಕಾಲಮಿತಿಯಿಲ್ಲ'

ಹೆರಿಗೆಗೆ ಇನ್ನೂ ಕೆಲವು ದಿನಗಳಾಗಬಹುದು. ಹೆರಿಗೆ ನೋವು ಕಾಣಿಸಿಕೊಂಡ ಮೇಲೆ ಬನ್ನಿ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ತಮ್ಮೂರಿಗೆ ಹೋಗಲು ವಾಹನಕ್ಕಾಗಿ ಗಂಟೆಗಟ್ಟಲೆ ಬಿಸಿಲಲ್ಲೇ ನಿಂತು ಕಾದಿದ್ದಾರೆ. ಆದರೆ, ಯಾವ ವಾಹನವೂ ಇಲ್ಲದ್ದರಿಂದ ಸುಸ್ತಾಗಿದ್ದಾರೆ. ಇದನ್ನು ಗಮನಿಸಿದ ಮಾಧ್ಯಮದವರು ನಗುಮಗು ವಾಹನಕ್ಕೆ ಕರೆ ಮಾಡಿದ್ದಾರೆ. ಅದು ಬೇರೆ ಕಡೆ ಹೋಗಿದ್ದರಿಂದ ಬೇರೊಂದು ವಾಹನದ ವ್ಯವಸ್ಥೆ ಮಾಡಿ ಗರ್ಭಿಣಿ ಮತ್ತು ಆಕೆಯ ಪೋಷಕರನ್ನು ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
 

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ