ತಬ್ಲೀಘಿಗಳಿಂದ ಸಕ್ಕರೆ ನಾಡಿಗೆ ಕಂಟಕ, ಅಪಾಯಕಾರಿ ರೆಡ್ ಝೋನ್‌ನತ್ತ ಮಂಡ್ಯ

By Suvarna NewsFirst Published Apr 19, 2020, 8:18 AM IST
Highlights

ತಬ್ಲೀಘಿಗಳು ದೇಶದ ಹಲವೆಡೆ ಅಪಾಯ ತಂದಿಟ್ಟಿದ್ದಾರೆ. ಸಕ್ಕರೆ ನಾಡು ಮಂಡ್ಯ ಇಲ್ಲಿಯವರೆಗೂ ಆರೆಂಜ್ ಝೋನ್‌ನಲ್ಲಿತ್ತು. ಆದರೆ ಈಗ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ರೆಡ್‌ ಝೋನ್ ಆಗುತ್ತಿದೆ.

ಮಂಡ್ಯ(ಏ.19): ತಬ್ಲೀಘಿಗಳು ದೇಶದ ಹಲವೆಡೆ ಅಪಾಯ ತಂದಿಟ್ಟಿದ್ದಾರೆ. ಸಕ್ಕರೆ ನಾಡು ಮಂಡ್ಯ ಇಲ್ಲಿಯವರೆಗೂ ಆರೆಂಜ್ ಝೋನ್‌ನಲ್ಲಿತ್ತು. ಆದರೆ ಈಗ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ರೆಡ್‌ ಝೋನ್ ಆಗುತ್ತಿದೆ.

ಆರೆಂಜ್ ಜೋನ್ ನಿಂದ ರೆಡ್ ಜೋನ್ ನತ್ತ ಮಂಡ್ಯ ದಾಪುಗಾಲಿಡುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ತಬ್ಲಿಘಿಗಳಿಂದಾಗಿ ಮಂಡ್ಯ ಕೊರೊನಾ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ.

ದೇಶದಲ್ಲಿ ಕೊರೋನಾಗೆ 500 ಸಾವು, 15,000 ಮಂದಿಗೆ ಸೋಂಕು!

ಕಳೆದ ಎರಡು ದಿನಗಳಲ್ಲಿ ಹೊಸ 4 ಪ್ರಕರಣಗಳು ಪತ್ತೆಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಮಳವಳ್ಳಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಕಂಡು ಬಂದಿದೆ.

ಮಂಡ್ಯ ಜಿಲ್ಲೆಯಲ್ಲೇ ಮಳವಳ್ಳಿ ತಾಲೂಕು ಕೊರೊನಾ ಹಾಟ್ ಸ್ಪಾಟ್ ಆಗಿದ್ದು, 12 ಮಂದಿ ಸೋಂಕಿತರ ಪೈಕಿ 11 ಮಂದಿ ಮಳವಳ್ಳಿ ನಿವಾಸಿಗಳು. 195 ಮಂದಿಯ ರಕ್ತ, ಗಂಟಲು ದ್ರವದ ಮಾದರಿ ಲ್ಯಾಬ್ ಗೆ ರವಾನೆ ಮಾಡಲಾಗಿದೆ. ಇಂದು ಅಥವಾ ನಾಳೆ ರಿಪೋರ್ಟ್ ಜಿಲ್ಲಾಡಳಿತದ ಕೈ ಸೇರಲಿದೆ. 195 ರಿಪೋರ್ಟ್ ಗಳ ಪೈಕಿ ಎಷ್ಟು ಪಾಸಿಟಿವ್ ಬರಲಿದೆ ಎಂಬ ಆತಂಕ ಕಾಡಲಾರಂಭಿಸಿದೆ.

click me!