ಬೆಳಗಾವಿ: ಸವದತ್ತಿ ಯಲ್ಲಮ್ಮನಿಗೂ ಕೊರೋನಾ ಕಾಟ!

Kannadaprabha News   | Asianet News
Published : Mar 18, 2020, 01:02 PM IST
ಬೆಳಗಾವಿ: ಸವದತ್ತಿ ಯಲ್ಲಮ್ಮನಿಗೂ ಕೊರೋನಾ ಕಾಟ!

ಸಾರಾಂಶ

ಯಲ್ಲಮ್ಮ ದೇವಸ್ಥಾನದಲ್ಲಿ ಹೆಚ್ಚಿನ ನಿಗಾ| ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿರುವ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನ| ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ| ಮಾಸ್ಕ್‌ ಹಾಕಿಕೊಂಡು ದಿನನಿತ್ಯದ ಕೆಲಸ ಕಾರ್ಯ ಮಾಡುತ್ತಿರುವ ದೇವಸ್ಥಾನದ ಸಿಬ್ಬಂದಿ| 

ಬೆಳಗಾವಿ(ಮಾ.18): ಕೋರೊನಾ ವೈರಸ್ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೋಮವಾರ ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಸಿಬ್ಬಂದಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. 

ಚೀನಾದಿಂದ ಮರಳಿದ ವ್ಯಕ್ತಿ: ಊರೊಳಗೆ ಸೇರಿಸದ ಜನ, ತೋಟದ ಮನೆಯಲ್ಲಿ ವಾಸ್ತವ್ಯ!

ಉತ್ತರ ಕರ್ನಾಟಕ ಶಕ್ತಿಪೀಠವಾಗಿರುವ ಸವದತ್ತಿಯ ಶ್ರೀ ರೇಣುಕಾ ಯಲ್ಲದೇವಿಗೆ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು, ಪ್ರವಾಸಿಗರು ಆಗಮಿಸಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ. ಇದರ ಜತೆಗೆ ನೆರೆ ಗೋವಾಕ್ಕೆ ವಿದೇಶಿಗರು ಹೆಚ್ಚೆಚ್ಚು ಆಗಮಿಸುತ್ತಾರೆ. ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕಕೊಂಡಿಯಾಗಿರುವ ಬೆಳಗಾವಿಗೂ ಪ್ರವಾಸಿಗರು ಆಗಮಿಸುವುದಲ್ಲದೇ, ಯಲ್ಲಮ್ಮದೇವಿ ದರ್ಶನಕ್ಕೆಂದು ಬರುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ದೇವ ಸ್ಥಾನ ಆಡಳಿತ ಮಂಡಳಿ ದೇವಸ್ಥಾನಕ್ಕೆ ಆಗಮಿಸುವ ಹೊರ ರಾಜ್ಯದ ಭಕ್ತರ ಹಾಗೂ ವಿದೇಶಿ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾವಹಿಸಲು ಕ್ರಮಕೈ ಗೊಂಡಿದೆ. 

ದೇವಸ್ಥಾನದ ಆವರಣದಲ್ಲಿಯೇ ವಿಶೇಷ ವೈದ್ಯಕೀಯ ತಂಡವನ್ನು ರಚಿಸಲಾಗಿದ್ದು, ಈ ತಂಡ ಭಕ್ತರಲ್ಲಿ ಜಾಗೃತಿಯನ್ನು ಮೂಡಿಸಲಿದೆ. ಇದರ ಜತೆಗೆ ದೇವಸ್ಥಾನ ಆಡಳಿತ ಮಂಡಳಿ, ಆರೋಗ್ಯ ಇಲಾಖೆಯಿಂದಲ್ಲೂ ಜಾಗೃತಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ದೇವಸ್ಥಾನದ ಆವರಣದಲ್ಲಿ ಕೊರೋನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಫಲಕಗಳನ್ನು ಅಳವಡಿಸಿದ್ದಾರೆ. ಅಲ್ಲದೇ ದೇವಸ್ಥಾನಕ್ಕೆ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವ ಭಕ್ತರಿಗೆ ಮಾಸ್ಕ್‌ಗಳನ್ನು ಹಾಕಿಸಿ, ನಂತರ ಪ್ರತ್ಯೇಕವಾಗಿರುವ ದ್ವಾರದ ಮೂಲಕ ನೇರವಾಗಿ ಗರ್ಭಗುಡಿಯೊಳಗೆ ಪ್ರವೇಶ ನೀಡಲಾಗುತ್ತಿದೆ. ನಂತರ ಅಲ್ಲಿಂದ ನೇರವಾಗಿ ದೇವಸ್ಥಾನ ಆವರಣದಿಂದ ಹೊರಕಳುಹಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಕಾರ್ಮಿಕರು ಹಾಗೂ ವ್ಯಾಪಾರಿಗಳು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ತಿಳಿಸಿದ್ದರಿಂದ ದೇವಸ್ಥಾನದ ಸಿಬ್ಬಂದಿ ಮಾಸ್ಕ್‌ಗಳನ್ನು ಹಾಕಿಕೊಂಡು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಯಾವ ವಸ್ತು ಮೇಲೆ ಎಷ್ಟೊತ್ತು ಜೀವಂತವಾಗಿರುತ್ತೆ ಕೊರೋನಾ ವೈರಸ್..?

ಉತ್ತರ ಕರ್ನಾಟಕ ಶಕ್ತಿಪೀಠ ಸವದತ್ತಿ ಶ್ರೀ ಯಲ್ಲಮ್ಮಾದೇವಿ ದೇವಸ್ಥಾನಕ್ಕೆ ಮಹಾರಾಷ್ಟ್ರ, ಗೋವಾ ಸೇರಿ ಬೇರೆ ಬೇರೆ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ವಿಶೇಷ ಆರೋಗ್ಯ ತಂಡವನ್ನು ರಚನೆ ಮಾಡಲಾಗಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಆದ್ದರಿಂದ ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ಸವದತಿಯ ಶ್ರೀ ಯಲ್ಲಮ್ಮನ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.
 

PREV
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ