ಕೊಡಗು: ಸ್ವಯಂ ಪ್ರೇರಿತವಾಗಿ 600ಕ್ಕೂ ಹೆಚ್ಚು ಹೋಂ ಸ್ಟೇ ಬಂದ್..!

By Kannadaprabha News  |  First Published Mar 18, 2020, 1:00 PM IST

ಮಡಿಕೇರಿಯಲ್ಲಿ ಹೋಂಸ್ಟೇ ಮಾಲೀಕರು ಸ್ವಯಂ ಪ್ರೇರಿತರಾಗಿ ಕಳೆದ ಒಂದು ವಾರದಿಂದ ಬಂದ್‌ ಮಾಡಿದ್ದಾರೆ. ಕೆಲವೇ ಕೆಲವು ಮಂದಿ ಮಾತ್ರ ಬುಕ್ಕಿಂಗ್‌ ಮಾಡುತ್ತಿದ್ದಾರೆ. ಆದರೆ ಈ ಬುಕ್ಕಿಂಗ್‌ಗಳನ್ನೂ ಹೋಂ ಸ್ಟೇ ಮಾಲೀಕರು ನಿರಾಕರಿಸುತ್ತಿದ್ದಾರೆ. ತಮಗೆ ನಷ್ಟವಾದರೂ ಪರವಾಗಿಲ್ಲ. ಜನರ ಆರೋಗ್ಯ ಮುಖ್ಯ, ಹೀಗಾಗಿ ನಾವೇ ಸ್ವಯಂ ಪ್ರೇರಿತವಾಗಿ ಬಂದ್‌ ಮಾಡುತ್ತಿದ್ದೇವೆ ಎಂದು ಮಾಲೀಕರು ತಿಳಿಸಿದ್ದಾರೆ. ಕೊಡಗಿನಲ್ಲಿ ಸುಮಾರು 600ಕ್ಕೂ ಅಧಿ​ಕ ಹೋಂ ಸ್ಟೇಗಳನ್ನು ಮಾಲೀಕರು ಬಂದ್‌ ಮಾಡಿದ್ದಾರೆ.


ಮಡಿಕೇರಿ(ಮಾ.18): ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರಮುಖ ಉದ್ಯಮವಾಗಿರುವ ಹೋಂಸ್ಟೇಗಳು ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೊದಲೇ ಬಹುತೇಕ ಹೋಂಸ್ಟೇಗಳು ಸ್ವಯಂ ಪ್ರೇರಿತವಾಗಿ ಬಂದ್‌ ಆಗಿವೆ.

ಹೌದು, ಮಂಜಿನ ನಗರಿ ಮಡಿಕೇರಿಯ ಸೌಂದರ್ಯ ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಲು, ಎಂಜಾಯ್‌ ಮಾಡಲು ದೇಶ ವಿದೇಶಗಳಿಂದ ಪ್ರವಾಸಿಗರು ಕೊಡಗಿಗೆ ಬರುತ್ತಿದ್ದರು. ಇದೀಗ ಕೊರೋನಾ ವೈರಸ್‌ ಭೀತಿ ಪ್ರವಾಸಿಗರಿಗೂ ಕಾಡುತ್ತಿದ್ದು, ಮನೆಯಿಂದ ಹೋರಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರವಾಸಿಗರಿಲ್ಲದೆ ಕೊಡಗಿನ ಪ್ರವಾಸಿತಾಣಗಳು ಬಿಕೋ ಎನ್ನುತ್ತಿದೆ. ಜಿಲ್ಲಾಡಳಿತ ಕೂಡ ಮಾ.21ರ ವರೆಗೆ ಪ್ರವಾಸಿ ತಾಣಗಳನ್ನು ಬಂದ್‌ ಮಾಡಿ ಆದೇಶಿಸಿದೆ.

Latest Videos

undefined

ಟ್ರಕ್‌ ಹರಿದು ಸ್ಥಳದಲ್ಲೇ ಮೂವರ ಸಾವು: ಭಾರಿ ಅನಾಹುತ ತಪ್ಪಿಸಿದ ಕೊರೋನಾ ವೈರಸ್‌!

ಈ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕರು ಸ್ವಯಂ ಪ್ರೇರಿತರಾಗಿ ಕಳೆದ ಒಂದು ವಾರದಿಂದ ಬಂದ್‌ ಮಾಡಿದ್ದಾರೆ. ಹೋಂಸ್ಟೇಗೆ ಈಗಾಗಲೇ ಮುಂಗಡ ಬುಕ್‌ ಮಾಡುವವರ ಸಂಖ್ಯೆ ವಿರಳವಾಗಿದ್ದು, ಕೆಲವೇ ಕೆಲವು ಮಂದಿ ಮಾತ್ರ ಬುಕ್ಕಿಂಗ್‌ ಮಾಡುತ್ತಿದ್ದಾರೆ. ಆದರೆ ಈ ಬುಕ್ಕಿಂಗ್‌ಗಳನ್ನೂ ಹೋಂ ಸ್ಟೇ ಮಾಲೀಕರು ನಿರಾಕರಿಸುತ್ತಿದ್ದಾರೆ. ತಮಗೆ ನಷ್ಟವಾದರೂ ಪರವಾಗಿಲ್ಲ. ಜನರ ಆರೋಗ್ಯ ಮುಖ್ಯ, ಹೀಗಾಗಿ ನಾವೇ ಸ್ವಯಂ ಪ್ರೇರಿತವಾಗಿ ಬಂದ್‌ ಮಾಡುತ್ತಿದ್ದೇವೆ ಎಂದು ಮಾಲೀಕರು ತಿಳಿಸಿದ್ದಾರೆ.

ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಾಕಷ್ಟುನಷ್ಟಅನುಭವಿಸಿದ್ದೆವು. ಆದರೆ ಈ ಕೊರೋನಾ ವೈರಸ್‌ ಭೀತಿ ರಾಜ್ಯವನ್ನು ಕಾಡುತ್ತಿದೆ. ಕೊಡಗಿನಲ್ಲಿ ಸುಮಾರು 600ಕ್ಕೂ ಅಧಿ​ಕ ಹೋಂ ಸ್ಟೇಗಳನ್ನು ಮಾಲೀಕರು ಬಂದ್‌ ಮಾಡಿದ್ದಾರೆ.

ಕೊರೋನಾ ಭೀತಿ: ಮಡಿಕೇರಿಯಲ್ಲಿ 159 ಮಂದಿಗೆ ಗೃಹ ದಿಗ್ಬಂಧ​ನ

ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿ ಪಿಡಿಒಗಳು ಹೋಂ ಸ್ಟೇ ಮಾಲೀಕರಿಗೆ ಬಂದ್‌ ಮಾಡಲು ನೋಟಿಸ್‌ ಕೂಡ ನೀಡಿದ್ದಾರೆ. ಇದರಿಂದ ಹೋಂ ಸ್ಟೇ ಉದ್ಯಮ ಹಾಗೂ ಸಿಬ್ಬಂದಿ ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎನ್ನಲಾಗಿದೆ.

ಮುಂಗಡ ಬುಕ್ಕಿಂಗ್‌ ಹಣ ವಾಪಸ್‌:

ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಹೊರತು ಪಡಿಸಿದರೆ ಕೇವಲ 5 ತಿಂಗಳು ಮಾತ್ರ ಹೋಂಸ್ಟೇ ಉದ್ಯಮದಲ್ಲಿ ಆದಾಯ ಪಡೆದುಕೊಳ್ಳಬಹುದಾಗಿದೆ. ಆದರೆ ಇದೀಗ ಕೊರೋನಾದಿಂದ ಹೋಂಸ್ಟೇ ಮಾಲೀಕರು ಮತ್ತೆ ನಷ್ಟಎದುರಿಸುವಂತಾಗಿದೆ. ಹೋಂಸ್ಟೇಗಳಲ್ಲಿ ಈ ಹಿಂದೆಯೇ ಮುಂಗಡ ಬುಕ್ಕಿಂಗ್‌ ಮಾಡಿಕೊಂಡ ಪ್ರವಾಸಿಗರು ಹಣವನ್ನು ವಾಪಸ್‌ ಪಡೆದುಕೊಳ್ಳುತ್ತಿದ್ದಾರೆ. ಕೊಡಗು ಸುರಕ್ಷಿತವಾಗಿದೆಯೇ ಎಂದು ಕೆಲವು ಪ್ರವಾಸಿಗರು ಕೇಳುತ್ತಿದ್ದಾರೆ. ಆದರೆ ಕೆಲವು ಹೋಂಸ್ಟೇ ಮಾಲೀಕರು ಕೊಡಗಿಗೆ ಬರಬೇಡಿ ಎಂದು ಸ್ವಯಂ ಪ್ರೇರಿತರಾಗಿ ಹೇಳುವ ಮೂಲಕ ಆನ್‌ಲೈನ್‌ ಬುಕ್ಕಿಂಗ್‌ ಸ್ಥಗಿತ ಮಾಡಿದ್ದಾರೆ.

ಅಪಾರ ನಷ್ಟ:

ಕೊರೋನಾದಿಂದಾಗಿ ಜಿಲ್ಲೆಯ ಹೋಂಸ್ಟೇಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟಸಂಭವಿಸಿದೆ. ಹೋಂಸ್ಟೇಯನ್ನೇ ನಂಬಿಕೊಂಡು ಹೋಂಸ್ಟೇ ಮಾಲೀಕರು ಮಾತ್ರವಲ್ಲದೆ, ಕೆಲಸಗಾರರು ಇದ್ದು, ಅವರ ಕುಟುಂಬ ಕೂಡ ಕಂಗಾಲಾಗಿದೆ. ಈ ಹಿಂದೆ ಮಳೆಯಿಂದಾಗಿ ಕೂಡ ಜಿಲ್ಲೆಯಲ್ಲಿ ಹೋಂಸ್ಟೇ ಉದ್ಯಮಕ್ಕೆ ಹೊಡೆತ ಬಿದ್ದಿತ್ತು. ಬೇಸಿಗೆ ಸೀಸನ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಕೊಡಗಿಗೆ ಬರುತ್ತಿದ್ದರು. ಈ ಮೂಲಕ ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದವರಿಗೆ ಕೊರೋನಾ ಭೀತಿ ಆದಾಯಕ್ಕೆ ಕತ್ತರಿ ಹಾಕಿದೆ.

ಹೋಟೆಲ್‌, ರೆಸಾರ್ಟ್‌ ಕೂಡ ಖಾಲಿ

ಕೊಡಗಿನ ಎಲ್ಲ ಪ್ರವಾಸಿ ತಾಣಗಳಿಗೆ ಮಾಚ್‌ರ್‍ 21ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿ​ಧಿಸಿರುವುದರಿಂದ ಕೊಡಗಿನಲ್ಲಿ ಹೋಟೆಲ್‌, ರೆಸಾರ್ಟ್‌ಗಳು ಕೂಡ ಖಾಲಿಯಾಗಿವೆ. ಪ್ರವಾಸೋದ್ಯಮವನ್ನು ನಂಬಿಕೊಂಡು ಈ ಉದ್ಯಮಗಳಿವೆ. ಆದರೆ ಇದೀಗ ಪ್ರವಾಸೋದ್ಯಮಕ್ಕೆ ಕೊರೋನಾ ಹಿನ್ನೆಲೆಯಲ್ಲಿ ಕೊಂಚ ಮಟ್ಟಿಗೆ ಬ್ರೇಕ್‌ ಹಾಕಿರುವುದರಿಂದ ಈ ಉದ್ಯಮಗಳಿಗೆ ಕೋಟ್ಯಂತರ ರುಪಾಯಿ ನಷ್ಟಸಂಭವಿಸಿದೆ.

ಮಂಗಳೂರಿನ ಇಬ್ಬರು ಸೇರಿ 180 ವಿದ್ಯಾರ್ಥಿಗಳು ಮಲೇಷ್ಯಾದಲ್ಲಿ ಬಾಕಿ

ಕೊರೋನಾ ಹಿನ್ನೆಲೆಯಲ್ಲಿ ಕೊಡಗಿನ ಬಹುತೇಕ ಹೋಂಸ್ಟೇಗಳನ್ನು ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿದ್ದಾರೆ. ವಿದೇಶಿಗರಿಗೆ ಹೋಂಸ್ಟೇಗಳಲ್ಲಿ ಅವಕಾಶ ನೀಡಬಾರದು ಎಂಬ ಸರ್ಕಾರದ ಆದೇಶವಿದೆ. ಆದರೆ ಕೊಡಗಿನಲ್ಲಿ ಶೇ.5ರಷ್ಟುಮಾತ್ರ ಬರುತ್ತಾರೆ. ಆದ್ದರಿಂದ ಕೊರೋನಾ ಪರಿಣಾಮದಿಂದಾಗಿ ಮಾಚ್‌ರ್‍ ಕೊನೆಯ ತನಕ ನಾವು ಹೋಂಸ್ಟೇ ಬಂದ್‌ ಮಾಡಿದ್ದೇವೆ ಎಂದು ಕೂರ್ಗ್‌ ಹೋಂ ಸ್ಟೇ ಅಧ್ಯಕ್ಷ ಅಸೋಸಿಯೇಷನ್‌ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.

ಕೊಡಗು ಎರಡು ವರ್ಷದಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು. ಇದರಿಂದ ಕೊಡಗಿನ ಹೋಂಸ್ಟೇ ಉದ್ಯಮ ನಷ್ಟದಲ್ಲಿ ಸಾಗುತ್ತಿದೆ. ಇದೀಗ ಬೇಸಗೆ ಇರುವುದರಿಂದ ಸೀಜನ್‌ ಅವ​ಧಿ. ಆದರೆ ಕೊರೋನಾದಿಂದಾಗಿ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ. ಕೊರೋನಾ ಆತಂಕದಿಂದಾಗಿ ಹೋಂ ಸ್ಟೇಗಳನ್ನು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿದ್ದೇವೆ ಎಂದು ಇಬ್ನಿ ಸ್ಟ್ರಿಂಗ್ಸ್‌ ಹೋಂಸ್ಟೇ ಮಾಲೀಕ ಚೆಯ್ಯಂಡ ಸತ್ಯ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

click me!