
ಬೆಳಗಾವಿ (ಮಾ.13): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅದ್ದೂರಿಯಾಗಿ ನಡೆದ ಮಹಾ ಕುಂಭಮೇಳದಲ್ಲಿ ಕಪ್ಪು ಚುಕ್ಕೆ ಎನ್ನುವಂತೆ ಘಟಿಸಿದ್ದು ಕಾಲ್ತುಳಿತ. ಮುಂಜಾನೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 37 ಮಂದಿ ಸಾವು ಕಂಡಿದ್ದರು. ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದ ಯೋಗಿ ಆದಿತ್ಯನಾಥ್ ಸರ್ಕಾರ, ಮೃತ ವ್ಯಕ್ತಿಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಘಟನೆಯಲ್ಲಿ ಬೆಳಗಾವಿಯ ನಾಲ್ವರು ಸಾವು ಕಂಡಿದ್ದರು. ಎಲ್ಲರಿಗೂ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉತ್ತರ ಪ್ರದೇಶ ಸಿಎಂ ಘೋಷಣೆ ಮಾಡಿದ್ದರು. ಅವರು ಹೇಳಿದ ಮಾತಿನಂತೆಯೇ ಘಟನೆ ನಡೆದು 40 ದಿನಗಳ ಬಳಿಕಸ ಉತ್ತರ ಪ್ರದೇಶ ಸರ್ಕಾರದಿಂದ 1 ಕೋಟಿ ರೂಪಾಯಿ ಪರಿಹಾರ ಮೊತ್ತ ಜಮೆ ಆಗಿದೆ.
ಜನವರಿ 29 ರಂದು ಮೌನಿ ಅಮವಾಸ್ಯೆಯ ಪ್ರಯುಕ್ತ ನಡೆದ ಪುಣ್ಯಸ್ನಾನದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ ಬೆಳಗಾವಿ ಮೂಲದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ, ಅರುಣ ಕೋಪರ್ಡೆ, ಮಹಾದೇವಿ ಬಾವನೂರ ಸಾವು ಕಂಡಿದ್ದರು.
ಘಟನೆಯ ಬಗ್ಗೆ ತನಿಖೆ ಘೋಷಣೆ ಮಾಡಿದ್ದ ಯೋಗಿ ಆದಿತ್ಯನಾಥ್ ಮೃತಪಟ್ಟವರಿಗೆ ತಲಾ 25 ಲಕ್ಷ ಪರಿಹಾರ ಘೋಷನೆ ಮಾಡಿದ್ದರು. ಅವರ ಮಾತಿನಂತೆ 40 ದಿನಗಳ ಬಳಿಕ ಬೆಳಗಾವಿ ಮೂಲದ ನಾಲ್ವರಿಗೆ ತಲಾ 25 ಲಕ್ಷದಂತೆ 1 ಕೋಟಿ ರೂಪಾಯಿ ಹಣ ಬೆಳಗಾವಿ ಜಿಲ್ಲಾಧಿಕಾರಿಯ ಅಕೌಂಟ್‌ಗೆ ಜಮೆ ಆಗಿದೆ.
ಪ್ರಯಾಗ್‌ರಾಜ್ ಕಾಲ್ತುಳಿತದಲ್ಲಿ ಮೃತಪಟ್ಟ ತಾಯಿ-ತಂಗಿಯ ಆಭರಣ ಸುರಕ್ಷಿತವಾಗಿ ತಲುಪಿದೆ ಎಂದ ಸಹೋದರ!
ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಪರಿಹಾರ ಮೊತ್ತ ಜಮೆಯಾಗಿದೆ. ರಾಜ್ಯ ಸರ್ಕಾರದಿಂದಲೂ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ವರದಿ ರವಾನಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮದ್ ರೋಷನ್ ಹೇಳಿದ್ದಾರೆ.
ಮಹಾಕುಂಭದ ನೀರು ಅತಿ ಕಲುಷಿತ, ಕಾಲ್ತುಳಿತದಲ್ಲಿ ಸತ್ತವರ ಮೃತದೇಹವನ್ನ ನದಿಯಲ್ಲೇ ಎಸೆಯಲಾಗಿದೆ: ಜಯಾ ಬಚ್ಛನ್